ರಾಮಲಿಂಗ ಕಾಮದೇವರ ದರ್ಶನಕ್ಕೆ ಭಕ್ತರ ಹಿಂಡು
ನವಲಗುಂದ,ಮಾ.24: ಹೋಳಿ ಹಬ್ಬದ ವಿಶೇಷ ಆಚರಣೆಗೆ ಹೆಸರಾದ ಇಲ್ಲಿನಶ್ರೀ ರಾಮಲಿಂಗ ಕಾಮದೇವರ ದರ್ಶನಕ್ಕೆ ಕಳೆದ 2 ದಿನಗಳಿಂದ ಭಕ್ತರ ದಂಡು ಹರಿದು ಬರುತ್ತಿದೆ.
ಬಾನುವಾರ ರಜೆ ದಿನವಾಗಿದ್ದರಿಂದ ಬೆಳಗಿನ 3 ಗಂಟೆಯಿಂದಲೇ ಜನರು ಸರದಿ ಸಾಲಲ್ಲಿ ನಿಂತು ದರ್ಶನ ಪಡೆಯುತ್ತಿದ್ದರು.
ಪ್ರತಿ ವರ್ಷ ಕಿ,ಮೀ ಗಟ್ಟಲೆ ಸರದಿ ಸಾಲಿನಲ್ಲಿ ಭಕ್ತರು ಬಿಸಿಲಿನಲ್ಲೇ ನಿಲ್ಲುತ್ತಿದ್ದರು ಈ ಬಾರಿ ದೇವಸ್ಥಾನ ಟ್ರಸ್ಟ ಕಮೀಟಿಯಿಂದ 2 ಎಕರೆ ಜಾಗದಲ್ಲಿ ಪೆಂಡಾಲ್ ವ್ಯವಸ್ಥೆ ಕಲ್ಪಿಸಲಾಗಿದ್ದು ಇಲ್ಲೇ ಬ್ಯಾರಿಕೇಡ್ ಮೂಲಕ ಸದರಿ ಸಾಲುಗಳನ್ನು ನಿರ್ಮಿಸಲಾಗಿದ್ದು, ಭಕ್ತರಿದ್ದಲ್ಲೇ ಪಟ್ಟಣದ ಯುವಕರು, ಸಂಘಟನೆಗಳ ಮುಖಂಡರು ಕುಡಿಯುವ ನೀರು, ಮಜ್ಜಿಗೆ, ಪಾನಕ, ಮೊಸರವಲಕ್ಕಿ, ದ್ರಾಕ್ಷಿ ಹಣ್ಣುಗಳನ್ನು ಭಕ್ತರಿಗೆ ಪೂರೈಕೆ ಮಾಡಿದರು.