ದತ್ತಿ ಕಾರ್ಯಕ್ರಮ
ಧಾರವಾಡ,ಮಾ.24: :ದಾಂಪತ್ಯಜೀವನ ಸಾರ್ಥಕವಾಗಲು ಸತಿ-ಪತಿಗಳಲ್ಲಿ ಪರಸ್ಪರ ತಿಳುವಳಿಕೆ ಸಮಭಾವದ ಮನಸ್ಥಿತಿ ಅಗತ್ಯವಾಗಿದೆಎಂದು ಬಿಜಾಪೂರದಜ್ಞಾನಯೋಗಾಶ್ರಮದಕಾರ್ಯಾಧ್ಯಕ್ಷ ಪೂಜ್ಯ ಹರ್ಷಾನಂದ ಸ್ವಾಮಿಗಳು ಅಭಿಪ್ರಾಯಪಟ್ಟರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು, ದಿ.ಶ್ರೀಮತಿ ಲೀಲಾ ಬಾಪುಗೌಡ ಪಾಟೀಲ ಸ್ಮರಣಾರ್ಥ ಆಯೋಜಿಸಿದ್ದ ದತ್ತಿಕಾರ್ಯಕ್ರಮದಲ್ಲಿ ಸಾನ್ನಿಧ್ಯಪರ ನುಡಿಗಳನ್ನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ದಿ. ಲೀಲಾ ಬಾಪುಗೌಡ ಪಾಟೀಲರದುಎಲ್ಲರನ್ನು ಪ್ರೀತಿಸುವಗುಣ. ಶಾಂತಿ, ಸಮಾದಾನ, ಪರೋಪಕಾರಅವರ ಸುಂದರ ಬದುಕಿನ ವಿಶೇಷತೆಗಳು.ಸದ್ಗುಣ, ಸದ್ವಿಚಾರಗಳು ಅವರ ದಿವ್ಯ ವ್ಯಕ್ತಿತ್ವಕ್ಕೆ ಸಾಕ್ಷಿ.ಅಂತಹ ದಿವ್ಯ ವ್ಯಕ್ತಿತ್ವದ ಮುಂದೆಎಂಥವರಾದರೂತಲೆಬಾಗಲೇಬೇಕು.1971ರಲ್ಲಿಯೇ ಬಿ.ಎಸ್ಸಿ ಪದವಿಧರೆಯಾದ ದಿ. ಲೀಲಾ ಬಿ. ಪಾಟೀಲರು ಸುಸಂಸ್ಕøತ ಮನೆತನದ ಹಿನ್ನೆಲ್ಲೆಯುಳ್ಳವರು.ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿದ ಪುಣ್ಯವಂತರು.
ವಿರೋಧಿಸುವವರನ್ನೂ ಪ್ರೀತಿಸುವಅವರಗುಣದೊಡ್ಡದು. ಕುಟುಂಬ ವತ್ಸಲರಾದ ಲೀಲಾ ಬಿ.ಪಾಟೀಲರುಕುಟುಂಬದಎಲ್ಲಾ ಸದಸ್ಯರನ್ನುಔದಾರ್ಯ ಗುಣವುಳ್ಳವರಾಗಿದ್ದರು.ಮೌನವೇಅವರಿಗೆಆಭರಣವಾಗಿತ್ತು.ತಮ್ಮಜೀವಿತಕಾಲದಕೊನೆಯವರೆಗೂ ಸದ್ಗ್ರಂಥಗಳ ಅಧ್ಯಯನ, ಸಜ್ಜನರ ಸಹವಾಸದಲ್ಲೇ ಕಳೆದರು. ದಿ. ಬಿ.ಡಿ. ಪಾಟೀಲರಆದರ್ಶ ಸತಿಯಾಗಿ 52 ವರ್ಷಗಳ ಕಾಲ ಆದರ್ಶಮಯವಾದದಾಂಪತ್ಯ ಸಾಗಿಸಿದರು.ಅವರ ಸುಂದರದಾಂಪತ್ಯಜೀವನಕ್ಕೆಅವರ ಸುಕೃತ ಫಲವೇ ಕಾರಣ. ಲೀಲಾ ಬಿ. ಪಾಟೀಲರಜೀವನದಯಶೋಗಾಥೆ ಇಂದಿನ ಸ್ತ್ರೀಕುಲಕ್ಕೆ ಅನುಕರಣೀಯವಾಗಬೇಕುಎಂದು ಹೇಳಿದರು.
ಮುಖ್ಯಅತಿಥಿಯಾಗಿ ಆಗಮಿಸಿದ್ದ ನಗರದಖ್ಯಾತ ವೈದ್ಯಡಾ.ಜ್ಯೋತಿ ಪಾಲಾಕ್ಷ ಮಾತನಾಡಿ, ದಿ. ಲೀಲಾ ಬಿ. ಪಾಟೀಲರುಎಂದೂಇಲ್ಲಸಲ್ಲದ ಮಾತುಗಳನ್ನಾಡಲಿಲ್ಲ. ಎಂದೂಇನ್ನೊಬ್ಬರ ಬಗ್ಗೆ ದ್ವೇಷ ಹೊಂದಿರಲಿಲ್ಲ. ಅವರುತಮ್ಮ ಸೇವೆ ಹಾಗೂ ತ್ಯಾಗ ಭಾವನೆಯಿಂದ ಇಂದಿಗೂ ಸ್ಮರಣೀಯರಾಗಿದ್ದಾರೆ. ದಿ. ಲೀಲಾ ಬಾಪುಗೌಡ ಪಾಟೀಲರದು ಸಾರ್ಥಕ ಬದುಕುಎಂದು ಹೇಳಿದರು.
ದತ್ತಿದಾನಿ ಬಿ.ಡಿ. ಪಾಟೀಲ ಮಾತನಾಡಿ, ನನ್ನಧರ್ಮಪತ್ನಿಯೇ ನನಗೆ ಸದಾಕಾಲ ಮಾರ್ಗದರ್ಶಿ. ಅವಳಿಂದ ನಾನು ಕಲಿತಿದ್ದೆ ಜಾಸ್ತಿ.ನಿರ್ಲಿಪ್ತ ಸ್ವಭಾವದಅವರುಎಂದೂಯಾವುದಕ್ಕೂ ಆಸೆ ಪಟ್ಟವರಲ್ಲಎಂದು ಭಾವುಕತೆಯಿಂದ ಸ್ಮರಿಸಿದರು.
ಧಾರವಾಡದ ಪ್ರಥಮದರ್ಜೆಗುತ್ತಿಗೆದಾರ ಎಂ.ಕೆ.ಹೆಗಡೆಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೀರಣ್ಣಒಡ್ಡೀನ ಸ್ವಾಗತಿಸಿದರು.ಗುರು ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಡಾ.ಧನವಂತ ಹಾಜವಗೋಳ, ಶಶಿಧರ ತೋಡಕರ, ಶ್ರೀನಿವಾಸ ವಾಡಪ್ಪಿ, ಪ್ರೊ. ಎಸ್.ಎಸ್. ದೇಸಾಯಿ, ಸಿ.ಎಸ್. ಪಾಟೀಲ, ಎಚ್.ಡಿ.ನದಾಫ್, ಮಲ್ಲಿಕಾರ್ಜುನ ಪಾಟೀಲ, ಶಾಂತವೀರ ಬೆಟಗೇರಿ, ನಿಂಗಣ್ಣಕುಂಟಿ, ಎಸ್.ಜಿ. ಪಾಟೀಲ, ಶ್ರೀಶೈಲ ನಿಡವಣಿ, ಶೋಭಾ ಹೂಲಿಕಟ್ಟಿ, ಎಸ್.ಜಿ. ಹಿರೇಮಠ, ವಿದ್ಯಾ ಹುಲ್ಲೂರ, ಬಸವರಾಜ ಹುಲ್ಲೂರ, ಬಿ.ಎಸ್. ಶಿರೋಳ, ಬಿ.ಜಿ. ಕೊಕಟನೂರ, ಪಿ.ಎಸ್. ಹಳ್ಯಾಳ, ಡಾ. ಬಿ.ವಿ. ಓಣಿ, ವೆಂಕಟೇಶ ಮಾಚಕನೂರ, ಡಾ.ಎಸ್.ಆರ್.ರಾಮನಗೌಡರ, ವಿಕ್ರಮ ಪಾಟೀಲ, ಚನ್ನಬಸಪ್ಪದ್ಯಾಪನ್ನವರ, ಸಿದ್ಧಣ್ಣ ತುರಮರಿ, ಬಿ.ಸಿ. ಮುಕ್ತಾಮಠ, ಬಿ.ಜಿ. ಸಂತೋಜಿ, ರಮೇಶ ನಾಡಿಗೇರ, ಎಸ್.ಎಂ.ತುಬಶೆಟ್ಟಿ, ಈಶ್ವರಚಂದ್ರ ಹೊಸಮನಿ, ಲಿಂಗವ್ವ ಸಾವಕಾರ, ಡಾ. ಎಸ್.ಎಚ್.ಸೊರಟೂರ, ಡಾ.ಎ.ಎಸ್. ಯರಗುಪ್ಪಿ, ಆರ್.ಬಿ. ಗುತ್ತಲ, ಮೋಹನ ಸವದತ್ತಿ ಸೇರಿದಂತೆ ಬಿ.ಡಿ. ಪಾಟೀಲ ಕುಟುಂಬದವರು ಉಪಸ್ಥಿತರಿದ್ದರು.