ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ಅದ್ದ್ದೂರಿ ಬಿಳ್ಕೊಡುಗೆ
ಅಫಜಲಪೂರ :ಮಾ.24:ತಾಲ್ಲೂಕಿನ ಭೊಸಗಾ ಗ್ರಾಮದಲ್ಲಿ ಶ್ರೀ ಹೊನ್ನಲಿಂಗೇಶ್ವರ ಹಳೆ ವಿದ್ಯಾರ್ಥಿಗಳ ಸಂಘದ ಮೂರನೆ ವರ್ಷದ ವರ್ಷಾಚರಣೆ ಕಾರ್ಯಕ್ರಮದ ನಿಮಿತ್ಯ
ಶ್ರೀ ಹೊನ್ನಲಿಂಗೇಶ್ವರ ಸಂಘದ ನೇತ್ರತ್ವದಲ್ಲಿ ಏಳನೆ ತರಗತಿಯ ವಿದ್ಯಾರ್ಥಿಗಳಿಗೆ ಅದ್ದುರಿಯಾಗಿ ಬೀಳ್ಕೊಡುವ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಈ ಸಂಧರ್ಭದಲ್ಲಿ ಗ್ರಾಮದಲ್ಲಿ ದ್ವಿತೀಯ ಪಿಯುಸಿ, ಹತ್ತನೆಯ ತರಗತಿ, ಏಳನೆಯ ತರಗಲಿಯಲ್ಲಿ ಪ್ರಥಮ ದ್ವಿತೀಯ ತೃತೀಯ ಸ್ಥಾನದಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಹೊಸದಾಗಿ ಸರ್ಕಾರಿ ಸೇವೆಗೆ ಸೇರಿದವರಿಗೆ ಮತ್ತು ಸರ್ಕಾರಿ ಸೇವೆಯಲ್ಲಿ ಮುಂಬಡ್ತಿ ಹೊಂದಿದವರಿಗೆ, ಮತ್ತು ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಎಸ್.ಡಿ.ಎಮ್.ಸಿ. ಅದ್ಯಕ್ಷರು, ಸದಸ್ಯರು, ಶ್ರೀ ಹೊನ್ನಲಿಂಗೇಶ್ವರ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು, ಸದಸ್ಯರು,
ಗ್ರಾಮದ ಎಲ್ಲಾ ಹಿರಿಯರು ಯುವಕರು ವಿದ್ಯಾರ್ಥಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೋಳಿಸಿದರು.