ರಸ್ತೆ ತಡೆಗೋಡೆ ದುರಸ್ಥಿಗೆ ಒತ್ತಾಯ
ವಿಜಯಪುರ.ಮಾ೨೪:ಪಟ್ಟಣದ ನಾಗರಬಾವಿ ಬಳಿ ಇರುವ ಮುಖ್ಯರಸ್ತೆಯ ತಿರುವಿನ ಬಳಿ ತಡೆಗೋಡೆ ಬಿದ್ದು ಹೋಗಿದ್ದು, ಕೂಡಲೇ ಅದನ್ನು ಸರಿಪಡಿಸಬೇಕೆಂದು ಸಾರ್ವಜನಿಕರು ಸ್ಥಳೀಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಮಳೆಯ ಆರ್ಭಟಕ್ಕೆ ತಡೆಗೋಡೆಯು ಕೊಚ್ಚಿ ಹೋಗಿದ್ದು ಇಲ್ಲಿ ತಡೆಗೋಡೆ ಇಲ್ಲದ ಕಾರಣ ವಾಹನ ಸವಾರರು ಯಾವ ಸಮಯದಲ್ಲಿಯಾದರು ಸ್ವಲ್ಪ ಗಮನ ಬೇರೆ ಕಡೆ ಹೋದರೂ ಪ್ರಾಣ ಹೋಗುವುದು ಕಟ್ಟಿಟ್ಟ ಬುತ್ತಿಯಾಗಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ನಾಗರಬಾವಿಯ ತಡೆಗೋಡೆ ಸರಿಪಡಿಸಬೇಕೆಂದು ತಿಳಿಸಿರುವರು.
ಈ ರಸ್ತೆಯು ವಿಜಯಪುರ ಹಾಗೂ ಶಿಡ್ಲಘಟ್ಟ ಮುಖ್ಯ ರಸ್ತೆಯಾಗಿದ್ದು, ಇಲ್ಲಿಗೆ ಪ್ರತಿನಿತ್ಯವೂ ಶಿಡ್ಲಘಟ್ಟ ಹಾಗೂ ಮಳ್ಳುರು, ಮೇಲೂರು, ರಂಗನಾಥಪುರ, ಹೊಸುರು, ಕೊಮ್ಮಸಂದ್ರ, ಪುರ, ಶಟ್ಟಿಹಳ್ಳಿ ಸೇರಿದಂತೆ ಹೆಚ್ಚು ಗ್ರಾಮಗಳಿಂದ ಪಟ್ಟಣಕ್ಕೆ ಬರುತ್ತಿದ್ದು ಇಲ್ಲಿನ ರಸ್ತೆಯೇ ವಿಜಯಪುರ-ಶಿಡ್ಲಘಟ್ಟದ ರಾಜ್ಯ ಮುಖ್ಯ ರಸ್ತೆಯಾಗಿದ್ದು, ಇಲ್ಲಿ ಅತೀವೇಗ ನಿಯಂತ್ರಣ ಫಲಕವು ಸಮೇತ ಈ ರಸ್ತೆಯಲ್ಲಿ ಅಳವಡಿಸದೇ ಇಲ್ಲಿನ ವೇಗ ನಿಯಂತ್ರಣವು ತೆರವು ಗೊಳಿಸಿದ್ದರಿಂದ ಇಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಬಂದು ಕ್ರಮಕೈಗೊಳಬೇಕು ಎಂದರು.
ಸ್ಥಳೀಯ ಮುನಿರಾಜ್ ವಿ. ಮಾತನಾಡಿ, ಕಳೆದ ಕೆಲ ದಿನಗಳ ಹಿಂದೆ ಪಟ್ಟಣದಿಂದ ಶಿಡ್ಲಘಟ್ಟ ಮುಖ್ಯ ರಸ್ತೆಗೆ ಹೋಗುವ ರಸ್ತೆಯನ್ನು ಅಗಲೀಕರಣ ಮಾಡಿದಾಗ ಚಂದೇನಹಳ್ಳಿ ಗೇಟ್ ಹಾಗೂ ಶೃಂಗೇರಿ ಶಾಲಾ ಬಳಿಯು ಎರಡು ಕಡೆ ಸ್ಪೀಡ್ ಕಟ್ ನಿರ್ಮಾಣವಾಗಿತ್ತು ಆದರೆ ರಸ್ತೆಯ ಡಾಂಬರೀಕರಣ ಹೊಸದಾಗಿ ನಡೆದಾಗ ಸ್ಪೀಡ್ ಕಟ್ ತೆಗೆದ ಕಾರಣ ಇಲ್ಲಿನ ಮುಖ್ಯ ರಸ್ತೆಯಲ್ಲಿ ಅತಿಯಾದ ವೇಗದಿಂದ ಪ್ರತಿನಿತ್ಯವೂ ಅಪಘಾತಗಳು ಸಂಭವಿಸುತ್ತಿದ್ದು, ಕೂಡಲೇ ಈ ರಸ್ತೆಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.