ಶಾಂತಿ-ಸೌಹಾರ್ದತೆಯಿಂದ ಹಬ್ಬ ಆಚರಿಸಿ:ಡಿಎಸ್ಪಿ
ಚಿತ್ತಾಪುರ:ಮಾ.24: ತಾಲೂಕಿನಲ್ಲಿ ಹೋಳಿ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕು ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡಬಾರದು ಎಂದು ಡಿಎಸ್ಪಿ ಶಂಕರಗೌಡ ಪಾಟೀಲ್ ಹೇಳಿದರು.
ಪಟ್ಟಣದ ಪೆÇಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಶಾಂತಿ ಸಭೆ ಕುರಿತು ಮಾತನಾಡಿದ ಅವರು ಪ್ರತಿ ಧರ್ಮದ ಹಬ್ಬದ ಹಿಂದೆ ಐತಿಹಾಸಿಕ ಹಿನ್ನೆಲೆ ಇರುತ್ತದೆ. ಅದನ್ನು ಅರ್ಥಪೂರ್ಣವಾಗಿ ಆಚರಿಸಿದಾಗ ಹಬ್ಬ ಹರಿದಿನಗಳಿಗೆ ಅರ್ಥ ಬರುತ್ತದೆ ಎಂದರು.
ಮಾರ್ಚ್ 24ರಂದು ಕಾಮದಾಹ, 25ಕ್ಕೆ ಹೋಳಿ ಹಬ್ಬ ಆಚರಣೆ ಮಾಡಬೇಕು ಮದ್ಯಾಹ್ನ 1ಗಂಟೆ ವರಿಗೆ ಬಣ್ಣ ಆಡಲು ಅವಕಾಶ ನೀಡಲಾಗಿದೆ. ರಾತ್ರಿ 10ಗಂಟೆ ನಂತರ ಯಾವುದೇ ದ್ವನಿ ವರ್ಧಕ ಬಳಕೆಗೆ ಅವಕಾಶ ಇಲ್ಲಾ ಬಳಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ನಾಗರಾಜ ಬಂಕಲಗಿ ಮಾತನಾಡಿ ಪೆÇೀಲಿಸ್ ಇಲಾಖೆ ಕೈಗೊಂಡ ನಿಯಮಗಳಿಗೆ ನಮ್ಮ ಎಲ್ಲಾ ಪ್ರಮುಖರ ಒಪ್ಪಿಗೆ ಇದೆ ಎಂದು ಸೂಚಿಸಿದರು ಜೊತೆಗೆ ಅಂದು ಎಸಎಸ್‍ಎಲ್‍ಸಿ ಮತ್ತು 5ನೇ,8ನೇ, 9ನೇ ತರಗತಿಗಳ ಪರೀಕ್ಷೆ ಇರುವುದರಿಂದ ಆ ದಿನ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಪೆÇೀಲಿಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಿಪಿಐ ವಿಜಯಕುಮಾರ್ ಬಾವಗಿ, ವಿನೋದ್ ಗುತ್ತೇದಾರ್, ಶ್ರೀನಿವಾಸ ಪಾಲಾಪ್, ರವಿಂದ್ರ ಸಜ್ಜನಶೆಟ್ಟಿ, ಗೋಪಶೇನ್ ರೆಡ್ಡಿ, ಮಲ್ಲಿಕಾರ್ಜುನ್ ಕಾಳಗಿ, ಶಂಕರ್ ಲೀಡರ್ ರಆವಊರಕರ್, ಜಗದೀಶ ಚವ್ಹಾಣ್, ಆನಂದ ಕಲ್ಲಕ್, ನಾಗರಾಜ ಹೂಗಾರ, ಮಲ್ಲಿಕಾರ್ಜುನ್ ಪೂಜಾರಿ, ಬಾಬು ಕಾಶಿ, ಕೋಟೇಶ್ವರ ರೇಶ್ಮಿ, ಶಾಮ್ ಮೇದಾ, ಪೆÇೀಲಿಸ್ ಸಿಬ್ಬಂದಿಗಳಾದ ನಾಗೇಂದ್ರಪ್ಪ ತಳವಾರ, ಸವಿಕುಮಾರ, ಲಾಲಾ ಅಹ್ಮದ್, ಸೇರಿದಂತೆ ಇತರರು ಇದ್ದರು ಪಿಎಸಐ ಸುದರ್ಶನರೆಡ್ಡಿ ರವರು ಸ್ವಾಗತಿಸಿಕೊಂಡು ವಂದಿಸಿದರು.