ದಿಜಿಗಣಿಶಂಕರ್ ಹೋರಾಟ ಮರೆಯುವಂತಿಲ್ಲ
ಆನೇಕಲ್.ಮಾ.೨೪:ಜಿಗಣಿ ಲಿಂಕ್ ರಸ್ತೆಯಲ್ಲಿರುವ ಕಾವೇರಪ್ಪ ಸಬಾಂಗಣದಲ್ಲಿ ಹೋರಾಟಗಾರರು ಹಾಗೂ ಚಿಂತಕರು ಆದ ದಿವಂಗತ ಜಿಗಣಿ ಶಂಕರ್ ರವರ ಹುಟ್ಟು ಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಯಿತು.
ಈ ವೇಳೆ ಕರ್ನಾಟಕ ರಿಪಬ್ಲಿಕನ್ ಸೇನೆಯ ರಾಜ್ಯಾಧ್ಯರಾದ ಪ್ರಜ್ವಲ್ ಜಿಗಣಿ ಶಂಕರ್ ರವರು ಮಾತನಾಡಿ ನನ್ನ ತಂದೆ ಜಿಗಣಿ ಶಂಕರ್ ರವರು ನಮ್ಮನ್ನು ಅಗಲಿ ಹೋಗಿರ ಬಹುದು ಆದರೆ ಅವರು ಬದುಕಿದ್ದ ಸಮಯದಲ್ಲಿ ಮಾಡಿದ ಹೋರಾಟಗಳು. ಸಮಾಜಮುಖಿ ಕಾರ್ಯಕ್ರಮಗಳು, ಶೋಷಿತರ, ದೀನ ದಲಿತರ, ಬಡವರ ಪ್ರಗತಿಗಾಗಿ ಮಾಡಿರುವ ಜನಪರ ಕಾರ್ಯಕ್ರಮಗಳು, ತ್ಯಾಗಗಳು ಇಂದಿಗೂ ಜೀವಂತವಾಗಿದೆ ಎಂದರು. ಹೋರಾಟಗಾರರಾದ ಜಿಗಣಿ ಶಂಕರ್ ರವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿಯೇ ನಾವೆಲ್ಲರೂ ಮುಂದು ವರೆಯುತ್ತೇವೆ, ಅವರ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಅವರ ಕನಸಿನಂತೆಯೇ ನಾವೆಲ್ಲರೂ ಒಟ್ಟಾಗಿ ಸೇರಿ ಸಮ-ಸಮಾಜವನ್ನು ಕಟ್ಟಲು ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ ಎಂದು ಭರವಸೆ ವ್ಯಕ್ತ ಪಡಿಸಿದರು.
ಕಾರ್ಯಕ್ರಮದಲ್ಲಿ ಆರ್.ಕೆ. ರಮೇಶ್, ಆದೂರು ಪ್ರಕಾಶ್, ಮೈಕೋ ನಾಗರಾಜ್, ಪಟಾಪಟ್ ಸುರೇಶ್, ಯಡವನಹಳ್ಳಿ ಕೃಷ್ಣಪ್ಪ, ಹೊಂಪಲಘಟ್ಟ ರವಿ, ಪ್ಯಾನ್ಸಿ ರಮೇಶ್, ಅಶ್ವಥ್ ಗೌಡ, ಹಾರಗದ್ದೆ ರುದ್ರ ಮತ್ತು ಕರ್ನಾಟಕ ರಿಪಬ್ಲಿಕನ್ ಸೇನೆಯ ಪದಾದಿಕಾರಿಗಳು ಮತ್ತು ಜಿಗಣಿ ಶಂಕರ್ ಅಭಿಮಾನಿಗಳು ಭಾಗವಹಿಸಿದ್ದರು.