ಜಲ ಮೂಲಗಳ ಸ್ವಚ್ಛತೆಗೆ ಆದ್ಯತೆ
ವಿಜಯಪುರ.ಮಾ೨೪: ೨೦೨೩-೨೪ನೇ ಸಾಲಿನಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸಂಸ್ಥೆಯ ವತಿಯಿಂದ ಜಲಮೂಲಗಳ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ರಾಷ್ಟ್ರೀಯ ಅಧ್ಯಕ್ಷರಾದ ಚಿತ್ರ ಕುಮಾರ್ ತಿಳಿಸಿದರು.
ಅವರು ಇಲ್ಲಿಗೆ ಸಮೀಪದ ದಿನ್ನೂರು ಗ್ರಾಮದಲ್ಲಿರುವ ವೆಂಕಟೇಶ್ ರವರ ನಿವಾಸದ ಸಭಾಭವನದಲ್ಲಿ ವಿಜಯಪುರ ಟೌನ್ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವಿಜಯಪುರ ಲೀಜನ್‌ನ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ, ಮಾತನಾಡುತ್ತಿದ್ದರು.
ಹಲವಾರು ಸಮಾಜ ಸೇವಾ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿರುವ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸಂಸ್ಥೆಯ ರಾಷ್ಟ್ರೀಯ ಗುರಿ ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ನಿರ್ಮೂಲನೆ, ಸಸಿ ನೆಡುವಿಕೆ ಹಾಗೂ ನೀರಿನ ಸ್ವಚ್ಛತಾ ಕಾರ್ಯಕ್ರಮವಾಗಿರುತ್ತದೆ ಎಂದು ತಿಳಿಸಿದರು.
ನೂತನ ಅಧ್ಯಕ್ಷರಾಗಿ ಸೀನಿಯರ್ ಚೇಂಬರ್‌ನ ಅಧಿಕಾರ ಸ್ವೀಕರಿಸಿದ ಕೆ. ವೆಂಕಟೇಶ್ ಅವರು ಮಾತನಾಡುತ್ತಾ, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲು ಹೆಮ್ಮೆಯಾಗಿದೆ ಎಂದು ಜೆಸಿಐ ಸಂಸ್ಥೆಯು ಸಮಾಜದಲ್ಲಿ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.
ಸೀನಿಯರ್ ಛೇಂಬರ್‌ನ ನಿರ್ಗಮಿತ ಅಧ್ಯಕ್ಷರಾದ ಎಂ.ಶಿವಕುಮಾರ್‌ರವರು ಮಾತನಾಡಿ, ನೂರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಉತ್ತಮ ಪ್ರಶಸ್ತಿಗಳನ್ನು ಗಳಿಸಿರುವುದರೊಂದಿಗೆ ಈ ಸಾಲಿನಲ್ಲಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೂತನ ಕಾರ್ಯದರ್ಶಿಯಾಗಿ ಚಿದಾನಂದ ಮೂರ್ತಿ, ಖಜಾಂಚಿಯಾಗಿ ಎಸ್ ರಮೇಶ್ ಹಾಗೂ ಸಂಸ್ಥೆಗೆ ೧೦ ಮಂದಿ ನೂತನ ಸದಸ್ಯರು ಸೇರ್ಪಡೆಗೊಂಡರು.
ಸಂಸ್ಥೆಯ ವತಿಯಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧ್ಯಕ್ಷರಾಗಿ ನೂತನವಾಗಿ ನೇಮಕಗೊಂಡ ಶಾಂತಕುಮಾರ್ ಹಾಗೂ ಸದಸ್ಯರುಗಳಾಗಿ ನೇಮಕಗೊಂಡ ಪ್ರಸನ್ನ, ರಾಮಚಂದ್ರಪ್ಪ, ಸೀನಿಯರ್ ಛೇಂಬರ್‌ನ ನಿರ್ಗಮಿತ ಅಧ್ಯಕ್ಷರಾದ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಎಂ ಶಿವಕುಮಾರ್ ರವರುಗಳನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕಮ್ಯುನಿಟಿ ಡೆವಲಪ್ಮೆಂಟ್ ನಿರ್ದೇಶಕರಾದ ಜಯೇಶ್, ರಾಷ್ಟ್ರೀಯ ಸಂಯೋಜಕರಾದ ಎಂ ಜಯರಾಮ್, ಬೆಂ.ಗ್ರಾ.ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಬಿ. ರಾಜಣ್ಣ, ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ನಾಗೇಶ್, ಎಸ್.ಪಿ.ಮುನಿರಾಜು, ಸಂಸ್ಥಾಪಕ ಅಧ್ಯಕ್ಷರಾದ ಕೆ. ವಿ. ಬೈರೇಗೌಡ, ನಿಕಟ ಪೂರ್ವ ಅಧ್ಯಕ್ಷರಾದ ವಿ ವೆಂಕಟೇಶ್, ಶ್ರೀಕಂಠಸ್ವಾಮಿ, ಚಿಕ್ಕಬಳ್ಳಾಪುರ ಲೀಜನ್ ಶ್ರೀನಿವಾಸ್, ಮೋಹನ್, ಶಿಡ್ಲಘಟ್ಟ ಲೀಜನ್ ಕೆಂಪಣ್ಣ, ದೇವನಹಳ್ಳಿ ಲೀಜನ್ ಸತೀಶ್ ಕುಮಾರ್, ಜೇಸಿಐ ಅಧ್ಯಕ್ಷರಾದ ಎಂ ಬೈರೇಗೌಡ, ಎಸ್ ಸಿ ಐ ಕಾರ್ಯದರ್ಶಿಗಳಾದ ಕೆ ವಸಂತ್ ಕುಮಾರ್, ಮಾಜಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಎಲ್ಲಾ ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು