ಗ್ರಾಹಕರಖಾತೆಗೆ ಹಣಜಮಾ ಮಾಡದೇ ಬ್ಯಾಂಕ್ ಕ್ಯಾಷೀಯರ್‍ನಿಂದ 26 ಲಕ್ಷ ಗುಳುಂ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮಾ.24- ಗ್ರಾಹಕರು ತಮ್ಮ ಖಾತೆಗಳಿಗೆ ಕಟ್ಟಿದ್ದ ಹಣವನ್ನು ಜಮೆ ಮಾಡದೇ ಲಕ್ಷಾಂತರ ರೂ. ಹಣ ಗುಳುಂ ಮಾಡಿರು ವಘಟನೆ ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿ ಎಸ್‍ಬಿಐ ಬ್ಯಾಂಕ್‍ನಲ್ಲಿ ನಡೆದಿದೆ.
ಸಂತೇಮರ ಹಳ್ಳಿ ಶಾಖೆಯ ಎಸ್‍ಬಿಐ ಬ್ಯಾಂಕ್‍ನ ಕ್ಯಾಷಿಯರ್ ಮನೋರಂಜನ್ ಮುರ್ಮು ಎಂಬಾತ ಸ್ವಸಹಾಯ ಸಂಘಗಳ ಸಾಲ ಮರು ಪಾವತಿ ಹಣವನ್ನು ಜಮೆ ಮಾಡದೇ ಗುಳುಂ ಮಾಡಿರುವ ಆರೋಪಿ.
ಬರೋಬ್ಬರಿ 26,15,920 ರೂ. ಹಣವನ್ನು ಸ್ವಂತ ಬಳಕೆ ಮಾಡಿಕೊಂಡಿದ್ದಾನೆಎಂದು ಬ್ಯಾಂಕ್ ವ್ಯವಸ್ಥಾಪಕರು ದೂರು ಕೊಟ್ಟಿದ್ದಾರೆ.
ವಿಕಾಸ ಗ್ರಾಮೀಣಾ ಭಿವೃದ್ಧಿ ಸಂಸ್ಥೆ ಅಡಿ ಕೆಲವು ಸ್ವ-ಸಹಾಯ ಸಂಘಗಳು ಸಾಲ ಪಡೆದು ಸಾಲ ಮರುಪಾವತಿ ಮಾಡುತ್ತಿದ್ದರು. ಆದರೆ, ಹಣವನ್ನು ಖಾತೆಗಳಿಗೆ ಜಮೆ ಮಾಡದೇ ಕೌಂಟರ್ ಚಲನ್‍ನ್ನು ಗ್ರಾಹಕರಿಗೆ ಕೊಟ್ಟು ಯಾಮಾರಿಸಿದ್ದಾನೆ ಎಂದುದೂರು ಕೊಡಲಾಗಿದೆ.
ಈ ಸಂಬಂಧ ಸಂತೇಮರಹಳ್ಳಿ ಪೆÇಲೀಸ್‍ಠಾಣೆಯಲ್ಲಿ ಪ್ರಕರಣದಾಖಲಾಗಿದ್ದು ಪೆÇಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.