ಕಾಂಗ್ರೇಸ್ ಪಕ್ಷದಲ್ಲಿ ಅಭ್ಯರ್ಥಿಗಳ ಕೊರತೆಯಿಂದ ಸಚಿವರ ಸಂಬಂಧಿಕರನ್ನೆ ಗುರುತಿಸಿ ಟಿಕೇಟ್
ಸಂಜೆವಾಣಿ ನ್ಯೂಸ್
ಶ್ರೀರಂಗಪಟ್ಟಣ:ಮಾ.24:- ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದಲ್ಲಿ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಕೊರತೆಯಿಂದ ಸಚಿವರ ಸಂಬಂಧಿಕರಿಗೆ ಒತ್ತಡ ಮಾಡಿ ಪಕ್ಷದಲ್ಲಿ ಟಿಕೆಟ್ ನೀಡಲಾಗುತ್ತಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಪೀಹಳ್ಳಿ ರಮೇಶ್ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳ ಸಭೆ ಕುರಿತು ಅವರು ಮಾತನಾಡಿದರು.ದೇಶದಲ್ಲಿ ನರೇಂದ್ರ ಮೋದಿಜಿ ಅಲೆಯಲ್ಲಿ 400ಕ್ಕೂ ಹೆಚ್ಚು ಮಂದಿ ಬಿಜೆಪಿಯಿಂದ ಗೆಲ್ಲುವ ವಿಶ್ವಾಸವಿದ್ದು, ರಾಜ್ಯದಲ್ಲಿರುವ 28 ಕ್ಷೇತ್ರಗಳಲ್ಲಿ ಕಾಂಗ್ರೇಸ್ ನಿಂದ ಯಾರನ್ನು ನಿಲ್ಲಿಸಬೇಕು ,ಯಾರನ್ನು ನಿಲ್ಲಿಸಿದರೆ ಜಯ ಸಿಗುವುದು ಎಂಬ ಆಲೋಚನೆಗಳು ಹೆಚ್ಚಾಗಿದ್ದು,26 ಕ್ಷೇತ್ರಗಳಿಗೂ ಕಾಂಗ್ರೇಸ್ ನಲ್ಲಿ ಅಭ್ಯರ್ಥಿಗಳಿಲ್ಲದೆ ಆಯಾ ಉಸ್ತುವಾರಿ ಸಚಿವರುಗಳ ಹತ್ತಿರದ ಸಂಬಂಧಿಕರಿಗೆ ಟಿಕೇಟ್‍ನ್ನು ನೀಡಲಾಗುತ್ತಿದೆ.ಸಚಿವರುಗಳಿಗೆ ಹೆಚ್ಚಿನ ಒತ್ತಡ ಹಾಕಿ ಗೆಲ್ಲಿಸಿಕೊಂಡು ಬರಬೇಕು ಎಂದು ಕಡಕ್ ಮಾತುಗಳಿಂದ ದೆಹಲಿ ಮಟ್ಟದ ಕಾಂಗ್ರೇಸ್‍ನವರು ಹೇಳಿರುವುದು ಮಾದ್ಯಮಗಳಿಂದ ತಿಳಿದು ಬಂದಿದೆ. ಅಂದರೆ ಬಿಜೆಪಿಯಲ್ಲಿ ಇಂತಹ ಪರಿಸ್ಥಿತಿ ಇಲ್ಲ ಪಕ್ಷದ ಕಾರ್ಯ ಕರ್ತರಿಗೂ ಗುರುತಿಸಿ ಟಿಕೆಟ್ ನೀಡಲಾಗುತ್ತಿದೆ.ನಮ್ಮ ಪಕ್ಷದಲ್ಲಿ ಭಿನ್ನಮತ ಇಲ್ಲ ಯಾರಿಗಾದರೂ ಮೈತ್ರಿ ಪಕ್ಷದಿಂದ ಟಿಕೆಟ್ ಕೊಟ್ಟರೂ ಕಾರ್ಯಕರ್ತರು ದುಡಿದು ಗೆಲ್ಲಿಸುವ ವಿಶ್ವಾಸವಿದೆ.ಅದರಂತೆ ಮಂಡ್ಯದಲ್ಲಿಯೂ ಜೆಡಿಎಸ್ ಬಿಜೆಪಿ -ಮೈತ್ರಿ ಅಭ್ಯರ್ಥಿಯನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಡಲಾಗಿದ್ದು, ಜೆಡಿಎಸ್ ಪಕ್ಷದ ಚಿಹ್ನೆ ಇದ್ದರೂ ಮೋದಿ ಹೆಸರೇಳಿ ಮೈತ್ರಿ ಕೂಟದ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಪಣ ತೊಟ್ಟು ಕೆಲಸ ಮಾಡಬೇಕು. ಎಲ್ಲರೂ ಒಗ್ಗಟ್ಟಿನಿಂದ ಮೈತ್ರಿ ಕೂಟದ ಅಭ್ಯರ್ಥಿಯನ್ನು ಗೆಲ್ಲಿಸುವ ವಿಶ್ವಾಸವನ್ನು ಈ ಸಂದರ್ಭದಲ್ಲಿ ಹೆಚ್ಚಿಸಿಕೊಳ್ಳೋಣ. ಪ್ರತಿ ಬೂತ್ ಮಟ್ಟದಲ್ಲೂ ಕಾರ್ಯರ್ತರು ಪ್ರತಿ ಮನೆ ಬಾಗಿಲಿಗೆ ಹೋಗಿ ಪ್ರತಿಯೊಬ್ಬ ಮತದಾರರನ್ನು ಭೇಟಿ ಮಾಡಿ ಕೇಂದ್ರ ಸರ್ಕಾರದಲ್ಲಿನ ಜನಪರ ಯೋಜನೆಗಳನ್ನು ಜನರ ಗಮನಕ್ಕೆ ತರಬೇಕು ಎನ್‍ಡಿಎ ಅಭ್ಯರ್ಥಿಯ ಪರ ಮತ ಹಾಕುವಂತೆ ಮನವೊಲಿಸುವ ಕೆಲಸ ಮಾಡಬೇಕು ಎಂದು ಈ ಸಂದರ್ಭದಲ್ಲಿ ಪದಾಧಿಕಾರಿಗಳಿಗೆ ಕರೆ ನೀಡಿದರು.
ಬಿಜೆಪಿ ರಾಜ್ಯರೈತ ಮೋರ್ಚ ಕಾರ್ಯದರ್ಶಿ ಅಶೋಕ್ ಮಾತನಾಡಿ,ಪಕ್ಷಕ್ಕೆ ಬಂದವರಲ್ಲಿ ಹಳಬರು ಹೊಸಬರು ಅಂತ ಹೇಳುವಂತಿಲ್ಲ ಪಕ್ಷಕ್ಕೆ ಸೇರಿಕೊಂಡವರೆಲ್ಲವರು ಬಿಜೆಪಿ ಪಕ್ಷದ ಕಾರ್ಯಕರ್ತರು ಇದರಲ್ಲಿ ಇರಿಸು ಮುರಿಸು ಬೇಡ. ಎಲ್ಲರೂ ಪಕ್ಷದ ಏಳಿಗೆಗಾಗಿ ದುಡಿಯಬೇಕು ಪಕ್ಷದ ಪರ ನಿಲ್ಲುವ ಅಭ್ಯರ್ಥಿಗಳನ್ನು ಗೆಲ್ಲಿಸಲು ಮುಂದಾಗಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ತಿಳಿಹೇಳಿದರು. ಪಕ್ಷದ ಮುಖಂಡರಾದ ಕೆಆರ್‍ಎಸ್ ಪ್ರಕಾಶ್,ಮಹೇಶ್,ಸತೀಶ್, ಮಂಜುನಾಥ್, ಸಂತೋಷ್,
ನಂದೀಶ್, ಸಬ್ಬನಕುಪ್ಪೆ ಮಂಜುನಾಥ್ , ಹೇಮಂತ್ ಕುಮಾರ್, ಮಲ್ಲೇಶ್, ಗಂಜಾಂ ಮಂಜುನಾಥ್, ಸುನೀಲ್ ಸೇರಿದಂತೆ ಇತರ ಮಹಿಳಾ ಪದಾಧಿಕಾರಿಗಳು ಉಪಸ್ತಿತರಿದ್ದು , ಪಕ್ಷದ ವಿವಿಧ ಮೋರ್ಚಾಗಳಲ್ಲಿ ನೂತನವಾಗಿ ನೇಮಕಗೊಂಡ ಪದಾಧಿಕಾರಿಗಳನ್ನು ಅಭಿನಂಧಿಸಲಾಯಿತು.