ಸಾಹಿತ್ಯ ಕ್ಷೇತ್ರ ಮಾನವನ ಒಳಿತಿಗಾಗಿ : ಪ್ರೊ. ಮಾಸಿಮಾಡೆ
ಬೀದರ, ಸೆ.18 : ಸಾಹಿತ್ಯ ಕ್ಷೇತ್ರ ಯಾವತ್ತೂ ಮಾನವನ ಒಳಿತಿಗಾಗಿ ದುಡಿಯುತ್ತಿರುತ್ತದೆ, ದಿ.ಡಾ.ಜಿ.ಬಿ.ವಿಸಾಜಿಯವರು ತಮ್ಮ ಇಡೀ ಜೀವನವನ್ನು ಸಾಹಿತ್ಯಕ್ಕಾಗಿ ಮೀಸಲಿಟ್ಟಿದ್ದರು. ಅವರದ್ದು ಸಾರ್ಥಕ ಜೀವನ, ಅವರ ಜೀವನದ ಮೌಲ್ಯಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಪೆÇ್ರ.ಸಿದ್ರಾಮಪ್ಪ ಮಾಸಿಮಾಡೆಯವರು ಹೇಳಿದರು.
ಅವರು ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಡಾ.ಜಿ.ಬಿ.ವಿಸಾಜಿಯವರ ನುಡಿ-ನಮನ ಕಾರ್ಯಕ್ರಮವನ್ನು ವಿಸಾಜಿಯವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸುವ ಮೂಲಕ ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು. ಮುಂದುವರೆದು ಮಾತನಾಡಿದ ಅವರು ವಿಸಾಜಿಯವರು ಉದಯೋನ್ಮುಖ ಬರಹಗಾರರನ್ನು ಗುರುತಿಸಿ ಅವರಿಗೆ ಬರೆಯಲು ಪ್ರೇರಣೆ ನೀಡುತ್ತಿದ್ದರು. ಅವರು ತಮ್ಮ ಅನಾರೋಗ್ಯದ ಸಮಯದಲ್ಲೂ ಕೂಡ ಬೀದರ ಜಿಲ್ಲೆಯ ಸಾಹಿತ್ಯ ಕ್ಷೇತ್ರದ ಬಗ್ಗೆ ಚಿಂತಿಸುತ್ತಿದ್ದರೆಂದು ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಡಾ.ವೈಜಿನಾಥ ಭಂಡೆಯವರು, ವಿಸಾಜಿಯವರಲ್ಲಿ ಮಾಂತ್ರಿಕ ಶಕ್ತಿ ಇತ್ತು, ವಿದ್ಯಾರ್ಥಿಗಳಲ್ಲಿರುವ ಕಾವ್ಯಶಕ್ತಿಯನ್ನು ಅವರು ಗುರುತಿಸುತ್ತಿದ್ದರು. ಅವರು ಉತ್ತಮ ಉಪನ್ಯಾಸಕರಷ್ಟೇ ಅಲ್ಲದೇ ಆಕರ್ಷಕ ಮಾತುಗಾರರೂ ಆಗಿದ್ದರು, ಭಾಲ್ಕಿ ಮಠದೊಂದಿಗೆ ಅವರ ಅವಿನಾಭಾವ ಸಂಬಂಧವಿತ್ತೆಂದು ಹೇಳಿದರು.
ಶ್ರೀಮತಿ ಪುಣ್ಯವತಿ ವಿಸಾಜಿಯವರು ಭಾವುಕರಾಗಿ ಮಾತನಾಡುತ್ತ, ಡಾ.ಜಿ.ಬಿ.ವಿಸಾಜಿಯವರದ್ದು ಮೃದು ಸ್ವಭಾವ, ವಾತ್ಸಲ್ಯಮಯಿ ಹೃದಯ, ಅವರು ಸಮಾಜ ಮತ್ತು ಸಾಹಿತ್ಯಕ್ಕಾಗಿ ಹೆಚ್ಚು ಸಮಯ ನೀಡುತ್ತಿದ್ದರು ಎಂದು ಹೇಳಿದರು. ವೇದಿಕೆಯಲ್ಲಿದ್ದ ಹಿರಿಯ ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ ಮಾತನಾಡಿದರು. ಗಂಧರ್ವಸೇನಾ, ಭಾರತಿ ವಸ್ತ್ರದ, ಡಾ.ಬಸವರಾಜ ಬಲ್ಲೂರ್, ರಮೇಶ ಬಿರಾದಾರ, ಶಂಭುಲಿಂಗ ವಾಲದೊಡ್ಡಿ, ಪೆÇ್ರ.ಎಸ್.ವಿ.ಕಲ್ಮಠ್ ಅವರು ನುಡಿ-ನಮನ ಸಲ್ಲಿಸಿದರು. ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆರಂಭದಲ್ಲಿ ಕಸಾಪ ಗೌ.ಕಾರ್ಯದರ್ಶಿ ಪೆÇ್ರ.ಶಿವಕುಮಾರ ಕಟ್ಟೆ ಆಶಯ ನುಡಿಗಳನ್ನಾಡಿದರು. ಉಪಾಧ್ಯಕ್ಷ ಬಾಬುರಾವ ದಾನಿ ಸ್ವಾಗತಿಸಿದರು. ಗೌ.ಕಾರ್ಯದರ್ಶಿ ಟಿ.ಎಂ.ಮಚ್ಛೆ ವಂದಿಸಿದರೆ ಕೋಶಾಧ್ಯಕ್ಷ ಶಿವಶಂಕರ ಟೋಕರೆ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಸಂಜೀವಕುಮಾರ ಅತಿವಾಳೆ, ತಾಲೂಕು ಕಸಾಪ ಅಧ್ಯಕ್ಷ ಎಂ.ಎಸ್.ಮನೋಹರ, ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಪಾಟೀಲ, ನಟ,ನಿರ್ಮಾಪಕ ಬಿ.ಜೆ.ವಿಷ್ಣುಕಾಂತ, ರೇವಣಪ್ಪ ಮೂಲಗೆ, ವೀರಭದ್ರಪ್ಪ ಉಪ್ಪಿನ್, ಜಯದೇವಿ ಯದಲಾಪುರೆ, ಕಲ್ಯಾಣರಾವ ಚಳಕಾಪುರೆ, ರಾಣಿ ಸತ್ಯಮೂರ್ತಿ, ಡಾ.ಈಶ್ವರಯ್ಯ ಕೋಡಂಬಲ್, ವಿರೂಪಾಕ್ಷ ದೇವರು, ಓಂಕಾರ ಪಾಟೀಲ, ಡಾ.ರಾಮಚಂದ್ರ ಗಣಾಪುರ, ಡಾ.ಧನರಾಜ ತುಡಮೆ, ಜಗನ್ನಾಥ ಕಮಲಾಪುರೆ, ಸಂತೋಷ ಚೆಲುವಾ, ಕೆ.ಸತ್ಯಮೂರ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.