ಕಾರಂಜಾ ಪ್ರಶಸ್ತಿಗೆ ಮಂಗಳಾ ಕಪರೆ ಆಯ್ಕೆ
ಕಲಬುರಗಿ. ಸೆ.18- ಕಲ್ಯಾಣ ಕರ್ನಾಟಕ ಸಂಶೋಧನಾ ಕೇಂದ್ರ, ಸೂಫಿ ಸಾಹಿತ್ಯ ಪರಿಷತ್ತು ಹಾಗೂ ಉಸ್ಮಾನ್ ಶಿಕ್ಷಣ ಮತ್ತು ಚಾರಿಟೆಬಲ್ ಟ್ರಸ್ಟ್ ಹುಮಾನಾಬಾದ ಇವರು ಕೊಡಮಾಡುವ ಕಾರಂಜಾ ರತ್ನ ಪ್ರಶಸ್ತಿಗೆ ಕಲಬುರಗಿಯ ಕಾವ್ಯಂಜಲಿ ಮಹಿಳಾ ಸಂಘಟನೆಯ ಮುಖ್ಯಸ್ಥೆ, ಸಾಹಿತಿ ಹಾಗೂ ನಿವೃತ್ತ್ ಶಿಕ್ಷಕಿ ಮಂಗಳಾ ಕಪರೆ ಆಯ್ಕೆ ಆಗಿದ್ದಾರೆ ಎಂದು ಜಮೀಲ ಐ. ಎಸ್ ತಿಳಿಸಿದ್ದಾರೆ.
ಸೆ. 22 ರಂದು ಹುಮನಬಾದನ ಪಟ್ಟಣದ ಎಕ್ಸ್ ಲ್ಲೆಂಟ ಪಬ್ಲಿಕ್ ಶಾಲೆಯ ಸಭಾಂಗಣದಲ್ಲಿ ಆಯೋಜಿಸಿರುವ* ಕಾರ್ಯಕ್ರಮದಲ್ಲಿ ಕಪರೆಯವರಿಗೆ ಕಾರಂಜಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.
ಸುಮಾರು ಹತ್ತಕ್ಕೂ ಹೆಚ್ಚು ಕನ್ನಡ ಮತ್ತು ಹಿಂದಿ ಸಾಹಿತ್ಯದ ಕೃತಿಗಳನ್ನು ಸಾಂಸ್ಕ್ರತಿಕ ಲೋಕಕ್ಕೆ ನೀಡಿದ ಮಂಗಳಾ ಕಪರೆಯವರು, ಈ ಹಿಂದೆ ಬೀದರ ನಗರದಲ್ಲಿ ರಾಷ್ಟ್ರ ಮಟ್ಟದ ಕವಿಯತ್ರಿಯರ ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದು ಇಲ್ಲಿ ಸ್ಮರಿಸಬಹುದು.
ಇವರ ಸಾಧನೆಗೆ ಅನೇಕರು ಹರ್ಷ ವ್ಯಕ್ತಪಡಿಸಿದ್ದಾರೆ.