ಕೊಲ್ಹಾರ: ಕೇದಾರನಾಥ ಮಹಾ ಮಂಟಪದಲ್ಲಿ ನಿರ್ಮಿಸಿದ ಗಣೇಶನ ವಿಸರ್ಜನೆ
ಕೊಲ್ಹಾರ: ಸೆ.18:ಬಾಗಲಕೋಟ ವಿಜಯಪುರ ಅವಳಿ ಜಿಲ್ಲೆಯಲ್ಲಿ ಹೆಸರುವಾಸಿಯಾದ ಪಟ್ಟಣದ ಹಿಂದೂ ಮಹಾ ಗಣಪತಿ ವಿಷ್ಣುಸೇನಾ ಸಮಿತಿಯಿಂದ ಈ ಬಾರಿ ಕೇದಾರನಾಥ ಮಹಾ ಮಂಟಪದಲ್ಲಿ ನಿರ್ಮಿಸಿದ ಗಣೇಶನ ವಿಸರ್ಜನೆ ಕಾರ್ಯಕ್ರಮವನ್ನು ಶೀಲವಂತ ಹಿರೇಮಠದ ಶ್ರೀ ಘ ಮ ಪೂ ಡಾ ಕೈಲಾಸನಾಥ ಶ್ರೀಗಳು ಮೆರವಣಿಗೆಗೆ ಚಾಲನೆ ನೀಡಿದರು.
ಸನಾತನ ಧರ್ಮದ ಅನೇಕ ಹಬ್ಬಗಳಲ್ಲಿ ಗಣೇಶ ಚತುರ್ಥಿ ಅತ್ಯಂತ ವಿಶಿಷ್ಟವಾದ ಮಹತ್ವ ಪಡೆದುಕೊಂಡಿದೆ. ಗಣೇಶೋತ್ಸವ ಅದೊಂದು ಹಬ್ಬ, ಅದೊಂದು ಸಡಗರ, ಅದೊಂದು ಸಂಭ್ರಮದ ಆಚರಣೆ ಎಲ್ಲದಕ್ಕೂ ಮೀರಿದ ಬಂಧ, ಪರಸ್ಪರ ಒಡಂಬಡಿಕೆ, ಹೀಗೆ ಸಾಂಸ್ಕøತಿಕ ಹಬ್ಬ ಎನಸಿಕೊಂಡಿರುವ ಗಣೇಶ ಚತುರ್ಥಿಯನ್ನು ಪಟ್ಟಣದ ಹಿಂದೂ ಮಹಾಗಣಪತಿ ವಿಷ್ಣು ಸೇನಾ ಸಮಿತಿಯಿಂದ ಅದ್ದೂರಿಯಾಗಿ ಆಚರಿಸಲಾಯಿತು.
ಗಣೇಶ ಪ್ರತಿಷ್ಠಾಪನೆಯ 11ನೇ ದಿನವಾದ ಮಂಗಳವಾರ ರಂದು ಗಣಪತಿ ವಿಸರ್ಜನಾ ಕಾರ್ಯಕ್ರಮದಲ್ಲಿ ಆಂಜನೇಯ ಹಾಗೂ ಶ್ರೀ ರಾಮನ ಭಾವಚಿತ್ರದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಜರುಗಿತು.
ಮೆರವಣಿಗೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾ ತಂಡಗಳಾದ ನಂದಿಧ್ವಜ,ಡೊಳ್ಳುಕುಣೀತ ದೊಡ್ಡದೊಡ್ಡ ಗೊಂಬೆಗಳು ಸಣ್ಣ ಮಕ್ಕಳನ್ನು ಆಕರ್ಷಣೆ ಮಾಡುವುದು ಸೇರಿಂತೆ ವಿವಿಧ ರೀತಿಯ ಕಲಾ ತಂಡಗಳು ಭಾಗವಹಿಸಿದ್ದವು. ಮಹಿಳೆಯರು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಕಲಾ ತಂಡಗಳ ಶಬ್ದಕ್ಕೆ ನೃತ್ಯ ಮಾಡುವ ಮೂಲಕ ಗಮನಸೆಳೆದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಮಾಜಿ ಜಿ.ಪಂ ಸದಸ್ಯ ಕಲ್ಲು ದೇಸಾಯಿ,ಪ.ಪಂ ಸಿ ಎಸ್ ಗಿಡ್ಡಪ್ಪಗೋಳ ರಾಮಣ್ಣ ಬಾಟಿ ಹಾಗೂ ಹಿಂದೂ ಮಹಾ ಗಣಪತಿ ವಿಷ್ಣುಸೇನಾ ಸಮಿತಿಯ ಪದಾಧಿಕಾರಿಗಳು ಸಹಿತ ಅನೇಕರು ಉಪಸ್ಥಿತರಿದ್ದರು
ಮೆರವಣಿಗೆ ಸಂದರ್ಭದಲ್ಲಿ ಪಿ.ಎಸ್.ಐ ಎಮ್ ಬಿ ಬಿರಾದಾರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಹಮ್ಮಿಕೊಳ್ಳಲಾಗಿತ್ತು.