ಬಾವಿಯಲ್ಲಿ ಬಿದ್ದು ಯುವಕ ಸಾವು
ವಿಜಯಪುರ, ಅ.4:ಬಾವಿಯ ಬಳಿ ಓಡುವಾಗ ಆಯ ತಪ್ಪಿ ಕಾಲು ಜಾರಿ ಬಾವಿಯಲ್ಲಿ ಬಿದ್ದು ಯುವಕನೊಬ್ಬ ಸಾವನಪ್ಪಿದ ದಾರುಣ ಘಟನೆ ನಗರದ ಖಾಜಾ ಅಮೀನ್ ದರ್ಗಾ ಬಳಿ ಗುರುವಾರ ತಡ ರಾತ್ರಿ ನಡೆದಿದೆ.
ಯಾಸೀನ ಯಾದಗಿರಿ (19) ಮೃತಪಟ್ಟಿರುವ ಯುವಕ.
ಮನೆಯಿಂದ ಹೊರಗಡೆ ಓಡಿ ಹೋಗುವಾಗ ಆಕಸ್ಮಿಕವಾಗಿ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ. ಅಗ್ನಿ ಶಾಮಕ ದಳ ಸಿಬ್ಬಂದಿ ಮಧ್ಯಾಹ್ನದ ಹೊತ್ತಿಗೆ ಶವ ಹೊರ ತೆಗೆದಿದ್ದಾರೆ.
ಸುದ್ದಿ ತಿಳಿದ ತಕ್ಷಣ ಪೆÇಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.
ಆದರ್ಶನಗರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.