ಸೋಮಜಾಳದಲ್ಲಿ ಸೆರೆ ಸಿಕ್ಕ ಚಿರತೆ
ವಿಜಯಪುರ, ಅ.4:ಜಿಲ್ಲೆಯ ಆಲಮೇಲ ತಾಲ್ಲೂಕಿನ ಸೋಮಜಾಳ ಗ್ರಾಮದಲ್ಲಿ ರೈತರ ಹೊಲದಲ್ಲಿ ಚಿರತೆ ಸೆರೆ ಸಿಕ್ಕಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಮಿಂಚಿನ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆ ಹಿಡಿದು ಬೋನಿಗೆ ಹಾಕಿದ್ದಾರೆ.
ಗುರುವಾರ ಮುಂಜಾನೆ ಸೋಮಜಾಳ ಸುತ್ತಮುತ್ತಲಿನ ಜಮೀನಿನಲ್ಲಿ ಕಂಡು ಬಂದಿತ್ತು. ಇದರಿಂದಾಗಿ ರೈತರು ಯಾವ ಹೊತ್ತಿನಲ್ಲಿ ಮೈಮೇಲೆ ಚಿರತೆ ಎರಗುತ್ತದೆಯೋ ಎನೋ ಎಂಬ ಚಿಂತೆ, ಆತಂಕದಲ್ಲಿದ್ದರು.
ಸುದ್ದಿ ತಿಳಿದ ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೋನು ಇರಿಸಿ 24 ಗಂಟೆಯಲ್ಲಿ ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಂದಗಿ ಪ್ರಾದೇಶಿಕ ವಲಯ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ರಾಜೀವ ಬಿರಾದಾರ ಅವರ ಮಾಗ9ದಶ9ನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಪ್ರಿಯಾಂಕ, ನಗರದ ಎಸ್. ಎಸ್. ಬಿರಾದಾರ ಅವರ ನೇತೃತ್ವದಲ್ಲಿ ಅರಣ್ಯ ಪಾಲಕರಾದ ಚನ್ನೂರ ಹಾಗೂ ಶಿವಾನಂದ ಮಡಗೊಂಡ ಮತ್ತು ಸಿಬ್ಬಂದಿ ಮಿಂಚಿನ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆ ಹಿಡಿದು ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾಗಿದ್ದಾರೆ.