ಮಕ್ಕಳ ಬಾಲ್ಯದ ಶಿಕ್ಷಣಕ್ಕೆ ಅಂಗನವಾಡಿ ಕೇಂದ್ರಗಳ ಪಾತ್ರ ಬಹು ಮುಖ್ಯ : ಮಲ್ಲಿಕಾರ್ಜುನ್ ಬಿಬ್ಬಳ್ಳಿ
ಸೇಡಂ, ಅ,04: ಗ್ರಾಮೀಣ ಪ್ರದೇಶಗಳಲ್ಲಿರುವ ಮಕ್ಕಳ ಬಾಲ್ಯದ ಶಿಕ್ಷಣಕ್ಕೆ ಭದ್ರಬುನಾದಿ ನೀಡುವಂತ ವ್ಯವಸ್ಥೆ ಅಂಗನವಾಡಿ ಕೇಂದ್ರದ ಕಾರ್ಯಕರ್ತರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಯಡಗಾ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಎಸ್ ಬಿಬ್ಬಳ್ಳಿ ಅಭಿಪ್ರಾಯಪಟ್ಟರು.
ತಾಲೂಕಿನ ಬಿಬ್ಬಳ್ಳಿ ಗ್ರಾಮದಲ್ಲಿ 2020-21ನೇ ಸಾಲಿನ ಕೆ.ಕೆ.ಆರ್.ಡಿ.(ಮ್ಯಾಕೋ) 26-30.ಲಕ್ಷ ವೆಚ್ಚದಲ್ಲಿ ನೂತನ ಅಂಗನವಾಡಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರ ನೀಡುವಂತಹ ಅನುದಾನವನ್ನು ಸಮರ್ಪಕವಾಗಿ ಮಕ್ಕಳಿಗೆ ತಲ್ಪಿಸುವಂತೆ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ಈ ವೇಳೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಮೇಲ್ವಿಚಾರಕ್ಕೆ ಸರಿತಾ ಕುಲಕರ್ಣಿ, ಹಾಗೂ ಮಹಾನಂದ ಶಾಬಾದಕರ್, ಸುರೇಖಾ,ಗ್ರಾಮ ಪಂಚಾಯತ್ ಸದಸ್ಯರಾದ ನಾಗಮ್ಮ ಕಟ್ಟಿಮನಿ,ರಾಜೇಂದ್ರಪಾಟೀಲ್ ಅಣ್ಣಪ್ಪ ವಾಸುದೇವ್ ಮಾಡೇನೋರ್, ಸೋಮಶೇಖರ್, ಮಾಳಪ್ಪ ಪೂಜಾರಿ ಮಂಜುನಾಥ ಕಟ್ಟಿಮನಿ,ಬುಗಪ್ಪ, ರಾಯಪ್ಪ,ರಾಮಲಿಂಗಮ್ಮ, ಹಾಗೂ ಗ್ರಾಮಸ್ಥರು ಇದ್ದರು.