ಅನುಮಾನಾಸ್ಪದ ರೀತಿಯಲ್ಲಿ ಯುವಕನ ಶವ ಪತ್ತೆ ಕೊಲೆ ಶಂಕೆ
ಕೆಂಭಾವಿ:ಅ.4: ಮಲ್ಲಾ – ಕೆಂಭಾವಿ ಮಾರ್ಗದ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಹಳ್ಳದಲ್ಲಿ ಗುರುವಾರ ಬೆಳಿಗ್ಗೆ ಅನುಮಾನಾಸ್ಪದ ರೀತಿಯಲ್ಲಿ ಯುವಕನೋರ್ವನ ಶವ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.ಮೃತನನ್ನು ನೆರೆಯ ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಕಡಕೋಳ ಗ್ರಾಮದ ರವಿ ಹಿರೇಮಠ (28) ಎಂದು ಗುರುತಿಸಲಾಗಿದೆ.
ಕಳೆದ ಎರಡು ಮೂರು ದಿನಗಳಿಂದ ಶವ ಹಳ್ಳದಲ್ಲಿ ಬಿದ್ದಿರುವುದಾಗಿ ಅನುಮಾನ ವ್ಯಕ್ತವಾಗಿದೆ. ಶವದ ಪಕ್ಕದಲ್ಲಿಯೇ ಬೈಕ್ ಕೂಡಾ ಪತ್ತೆಯಾಗಿದ್ದು, ಇದನ್ನು ಕಂಡು ಗುರುವಾರ ಬೆಳಿಗ್ಗೆ ರೈತನೋರ್ವ ಪೆÇಲೀಸರಿಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಪಿಎಸ್‍ಐ ಅಮೋಜ್ ಕಾಂಬಳೆ ಸೇರಿ ಸಿಬ್ಬಂದಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.
ತಂಗಿಯ ಮದುವೆಗೆ ಹಣ ಹೊಂದಿಸುವುದಕ್ಕಾಗಿ ಬ್ಯಾಂಕ್ ಲೋನ್ ಮಾಡಿಸುವುದಾಗಿ ಹೇಳಿ ದಾಖಲೆಗಳೊಂದಿಗೆ ಕಳೆದ ಸೋಮವಾರ ಮನೆಯಿಂದ ಹೋದವನು ಇದೀಗ ಹೆಣವಾಗಿ ಪತ್ತೆಯಾಗಿದ್ದು, ಇದು ಸಹಜ ಸಾವಲ್ಲ ಹಣದ ವ್ಯವಹಾರದಲ್ಲಿ ಕೊಲೆ ಮಾಡಿದ್ದಾರೆ ಎಂದು ಮೃತನ ಮಾವ ಆರೋಪಿಸಿದ್ದಾರೆ.
ಸದ್ಯ ಈ ಕುರಿತು ಕೆಂಭಾವಿ ಪೆÇಲೀಸ್ ಠಾಣೆಯಲ್ಲಿ ಮೃತನ ಕುಟುಂಬಸ್ಥರ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.