ಸ್ವಚ್ಛತೆಗೆ ಆದ್ಯತೆ ನೀಡಿದ ಗಾಂಧೀಜಿ ತತ್ವ ಅನುಕರಣೀಯ: ಅಣದೂರೆ
ಭಾಲ್ಕಿ:ಅ.4: ಸತ್ಯ, ಅಹಿಂಸೆ, ತ್ಯಾಗದ ಜೊತೆಗೆ ಸ್ವಚ್ಛತೆಗೆ ಆದ್ಯತೆ ನೀಡಿದ ಮಹಾತ್ಮಾಗಾಂಧೀಜಿ ಯವರ ತತ್ವಾದರ್ಶಗಳು ಅನುಕರಣೀಯವಾಗಿವೆ ಎಂದು ಮಹಾತ್ಮಾಗಾಂಧಿ ಅಭಿಮಾನಿ ಬಳಗದ ಸಂಸ್ಥಾಪಕ ಅಧ್ಯಕ್ಷ ಸಂಗಮೇಶ ಅಣದೂರೆ ಹೇಳಿದರು.
ಪಟ್ಟಣದ ಚನ್ನಬಸವಾಶ್ರಮದಲ್ಲಿ, ಮಹಾತ್ಮಾಗಾಂಧಿ ಅಭಿಮಾನಿ ಬಳಗದ ವತಿಯಿಂದ ನಡೆದ 2024-25ನೇ ಸಾಲಿನ ನಿವೃತ್ತ ಶಿಕ್ಷಕರು ಹಾಗು ಗಾಂಧಿ ಅಭಿಮಾನಿಗಳಿಗಾಗಿ ಆಯೋಜಿಸಿದ್ದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಹತ್ಮಾಗಾಂಧಿ ಅಭಿಮಾನಿ ಬಳಗವು ಕೆಲವೇ ಸದಸ್ಯರಿಂದ 1998 ರಲ್ಲಿ ಸ್ಥಾಪಿಸಲಾಯಿತು. ಅಂದಿನಿಂದ ಇಂದಿನ ವರೆಗೆ ಗಾಂಧಿ ತತ್ವದ ಮೇಲೆ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರಲಾಗಿದೆ. ನುಡಿ ಮತ್ತು ನಡೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಮಹಾತ್ಮಾಗಾಂಧಿ ಅಭಿಮಾನಿ ಬಳಗದ ಮೂಲ ಉದ್ದೇಶವಾಗಿದೆ. ಜೀವನದಲ್ಲಿ ಯಶಸ್ಸು ಗಳಿಸಬೇಕಾದರೆ ನಮ್ಮ ಬುದ್ಧಿ ಸ್ಥೀಮಿತವಾಗಿರಬೇಕು. ಹೃದಯ ಸ್ವಚ್ಛ ವಾಗಿರಬೇಕು ಮತ್ತು ಕಾಯಕದಲ್ಲಿ ನಿಷ್ಠೆಯಿರಬೇಕು ಎಂದು ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರೊ| ಶಂಭುಲಿಂಗ ಕಾಮಣ್ಣ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಪ್ರಾಂಶುಪಾಲರ ಸಂಘದ ಉಪಾಧ್ಯಕ್ಷ ಪ್ರೊ| ಅಶೋಕ ರಾಜೋಳೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇವೇಳೆ ಸರ್ಕಾರಿ ಪ.ಪೂ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಶಿವರಾಜ ಬೆಲ್ಲಾಪೂರೆ, ಠಾಣಾ ಕುಶನೂರಿನ ಎಸ್.ಎಪಿ.ಆರ್. ಪಾಲಿಟೆಕ್ನಿಕ್ ಪ್ರಾಂಶುಪಾಲ ರಾಜಶೇಖರ ಮುದ್ದಾ, ಶಿವಾಜಿ ಹಿ.ಪ್ರಾ. ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ತುಕಾರಾಮ ಮೋರೆ ಯವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಯರಾಜ ದಾಬಶೆಟ್ಟಿ, ಸಂಗಮೇಶ್ವರ ಪ್ರೌಢಶಾಲೆಯ ಶಿಕ್ಷಕ ಪ್ರದೀಪಕುಮಾರ ಘಂಟೆ, ಸುಭಾಷ ಹುಲಸೂರೆ, ರಾಜಕುಮಾರ ಲೋಖಂಡೆ, ಶ್ರೀಮಂತರಾವ ಪಾಟೀಲ, ರಮೇಶ ಕರಕಾಳೆ, ಸುಭಾಷ ಹುಲಸೂರೆ, ಡಿ.ಜಿ.ಬಿರಾದಾರ, ವಸಂತ ಹುಣಸನಾಳೆ, ಗುಂಡಪ್ಪ ಸಂಗಮಕರ ಉಪಸ್ಥಿತರಿದ್ದರು.
ಅಶೋಕ ರಾಜೋಳೆ ಸ್ವಾಗತಿಸಿದರು. ಪ್ರದೀಪಕುಮಾರ ಘಂಟೆ ನಿರೂಪಿಸಿದರು. ಜಯರಾಜ ದಾಬಶೆಟ್ಟಿ ವಂದಿಸಿದರು.