ಸ್ವಾತಂತ್ರ ಹೋರಾಟಗಾರರ ಸ್ಮರಣೆ ಅಗತ್ಯ: ಧರೆಣ್ಣವರ
ವಾಡಿ:ಅ.4: ಈ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸದ ಮಹಾನ್ ಹೋರಾಟಗಾರರನ್ನು ಪ್ರತಿಕ್ಷಣವು ನಾವು ನೆನೆಯಬೇಕು ಎಂದು ಡಾ.ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲ ಉದಯ ಧರೆಣ್ಣವರ ಹೇಳಿದರು.
ಪಟ್ಟಣದ ನ್ಯೂ ಟೌನ್ ಪ್ರದೇಶದಲ್ಲಿರುವ ಡಾ.ಅಂಬೇಡ್ಕರ್ ವಸತಿ ಶಾಲೆಯಲ್ಲಿ ನಡೆದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ವೀರ ಯೋಧರು ತಮ್ಮ ಪ್ರಾಣ ಅರ್ಪಿಸಿದ್ದಾರೆ. ಆದರೆ ಅಂತ ಮಹಾನ್ ಹೋರಾಟಗಾರರನ್ನು ನಾವು ಪ್ರತಿಕ್ಷಣವೂ ನೆನೆಯಬೇಕು ಹಾಗೂ ನಮ್ಮ ಮುಂದಿನ ತಲೆಮಾರುಗಳಿಗೆ ಅವರನ್ನು ಜೀವಂತವಾಗಿಡಬೇಕು. ದೇಶದ ಸ್ವಾತಂತ್ರಕ್ಕಾಗಿ ವೀರಮರಣ ಹೊಂದಿರುವ ಚಳವಳಿಗಾರರ ಋಣ ನಾವು ತೀರಿಸಬೇಕಾಗಿದೆ ಎಂದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ಡಾ.ಅಂಬೇಡ್ಕರ್ ಭಾವಚಿತ್ರಗಳಿಗೆ ಪಾಲಕರ ಪ್ರತಿನಿಧಿ ಬಲಭೀಮ ನೂರು ರಾಠೋಡ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು.
ಸಹ ಶಿಕ್ಷಕಿ ಅಂಬಿಕಾ ರೆಡ್ಡಿ, ದೈಹಿಕ ಶಿಕ್ಷಕ ಶ್ರೀನಾಥ ಇರಗೊಂಡ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ನಿಲಯ ಪಾಲಕ ನಾಗಪ್ಪ ಪೂಜಾರಿ, ಶಿಕ್ಷಕರಾದ ರಮೇಶ ಕೆ.ಎನ್, ಸುಚಿತಾ ರಾಠೋಡ, ರಾಜು ಪಾಟೀಲ, ಸಂಗೀತ ಶಿಕ್ಷಕ ನೀಲಯ್ಯ ಹೇಬಳ್ಳಿ, ಸಿದ್ದಲಿಂಗ ರಾಠೋಡ, ಶುಶ್ರೂಷಕಿ ದಿವ್ಯರಾಣಿ ಬನಸಾಡೆ ಸೇರಿದಂತೆ ಪೆÇೀಷಕಿ ಈರಮ್ಮ ಬಳವಡಗಿ ಉಪಸ್ಥಿತರಿದ್ದರು. ಶಾಲಾ ಮಕ್ಕಳು ಪ್ರಾರ್ಥನೆ ಗೀತೆ ಹಾಗೂ ಸ್ವಾಗತ ಗೀತೆ ಹಾಡಿ ಪೆÇೀಷಕರನ್ನು ಹಾಗೂ ಶಿಕ್ಷಕರನ್ನು ಉರಿ ದುಂಬಿಸಿದರು. ಶಿಕ್ಷಕ ಸಿದ್ರಾಮ ಮುಗಳಿ ವಂದಿಸಿದರು.