ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ: ಜಾಧವ್
ಸಂಜೆವಾಣಿ ವಾರ್ತೆ.
ಚಿತ್ತಾಪುರ: ಮಾ.24:ಪಟ್ಟಣ ವಾಡಿ ಸೇರಿ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ಹಾಕಿ ದೌರ್ಜನ್ಯ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಸಂಸದ ಡಾ ಉಮೇಶ ಜಾಧವ್ ಹೇಳಿದರು.
ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ಯಾರಿಗೂ ಹೆದರದೆ ಧೈರ್ಯದಿಂದ ಪಕ್ಷದ ಪರ ಕೆಲಸ ಮಾಡಿ ನಿಮ್ಮ ಹಿಂದೆ ಪಕ್ಷ ಇದೆ. ಡಾ. ಬಿ ಆರ್ ಅಂಬೇಡ್ಕರ್ ಮತದಾನ ಹಕ್ಕು ನೀಡಿದ್ದಾರೆ. ಜನರಿಗೆ ಸ್ವತಂತ್ರವಾಗಿ ಮತದಾನ ಮಾಡಲು ಅವಕಾಶ ಮಾಡಿ ಕೊಡಬೇಕು. ಭಯದ ವಾತಾವರಣ ನಿರ್ಮಾಣ ಮಾಡಬಾರದು. ಒಂದು ವೇಳೆ ಸಂವಿಧಾನ ಉಲ್ಲಂಘನೆಯಾದರೆ ಸಹಿಸುವುದಿಲ್ಲ ಎಂದರು.
ಚಿತ್ತಾಪುರ ಕ್ಷೇತ್ರಕ್ಕೆ ಸಂಸದರ ನಿಧಿಯಿಂದ 1.50 ಕೋಟಿ ರೂ. ಅನುದಾನ ನೀಡಿದ್ದೇನೆ. ಸನ್ನತಿಯ ಬೌದ್ಧ ಸ್ತೂಪಗಳ ರಕ್ಷಣೆಗೆ 3.54 ಕೋಟಿ ಅನುದಾನ, ಸನ್ನತಿ ಹಾಗೂ ನಾಲವಾರ ಭಾಗದಲ್ಲಿ ಕುಡಿಯುವ ನೀರಿಗಾಗಿ ಜೆಜೆಎಂ ಕಾಮಗಾರಿ 180 ಕೋಟಿ ಅನುದಾನ. ವಾಡಿ, ಶಹಾಬಾದ, ಕಲಬುರಗಿ ರೈಲ್ವೆ ನಿಲ್ದಾಣಗಳ ನವೀಕರಣಕ್ಕೆ 200 ಕೋಟಿ ಅನುದಾನ ಹಾಗೂ ಚಿತ್ತಾಪುರ ರೈಲ್ವೆ ನಿಲ್ದಾಣದ ಮೇಲೇತುವೆ ನಿರ್ಮಾಣಕ್ಕೆ 50 ಲ ಲಕ್ಷ ರೂ. ಚಿಂಚೋಳಿಯಲ್ಲಿ ಸಕ್ಕರೆ ಕಾರ್ಖಾನೆ 600ಕೋಟಿ ರೂಪಾಯಿ ಹೂಡಿಕೆಯಲ್ಲಿ ಕಾಮಗಾರಿ ಆರಂಭವಾಗಲಿದೆ.
ಹೀಗೆ ಅನೇಕ ಅಭಿವೃದ್ಧಿ ಕೆಲಸಗಳು ಮಾಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ರದ್ದೆವಾಡಗಿ, ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಮಾಜಿ ಸಚಿವ ಬಾಬುರಾವ್ ಚವ್ಹಾಣ್, ಶರಣಪ್ಪ ತಳವಾರ್, ನಿಂಗರೆಡ್ಢಿ ಬಾಸರೆಡ್ಡಿ, ಸೋಮಶೇಖರ್ ಪಾಟೀಲ್, ಚಂದ್ರಶೇಖರ ಪಾಟೀಲ ಅವಂಟಿ, ಮಲ್ಲಿಕಾರ್ಜುನ್ ಎಮ್ಮೆನೂರ, ನೀಲಕಂಠರಾವ್ ಪಾಟೀಲ್, ನಾಗರಾಜ ಬಂಕಲಗಿ, ವಿಠ್ಠಲ ನಾಯಕ, ಬಸವರಾಜ್ ಬೆಣ್ಣೂರಕರ್, ಗೋಪಾಲ ರಾಠೋಡ್, ಶ್ರೀಮತಿ ನಾಗುಬಾಯಿ ಜಿತುರೆ, ತಮ್ಮಣ್ಣ ಡಿಗ್ಗಿ, ನಾಗರಾಜ ಹೂಗಾರ, ಶಂಕರ್ ಚವ್ಹಾಣ್, ಅಯ್ಯಪ್ಪ ರಾಮತೀರ್ಥ, ಸೇರಿದಂತೆ ಇತರರು ಇದ್ದರು.