ಮನುಕುಲಕ್ಕೆ ರೇಣುಕಾಚಾರ್ಯರ ಕೊಡುಗೆ ಅನನ್ಯ : ಡಾ.ಕೈಲಾಸನಾಥ ಶ್ರೀ
ಕೊಲ್ಹಾರ: ಮಾ.24:ಮಾನವ ಧರ್ಮಕ್ಕೆ ಜಯವಾಗಲಿ ಎಂಬುದು ಜಗದ್ಗುರು ರೇಣುಕಾಚಾರ್ಯರ ವೇಧ ಘೋಷ, ಮುನುಕುಲಕ್ಕೆ ಅವರು ನೀಡಿದ ಕೊಡುಗೆ ಅನನ್ಯ ಎಂದು ಶ್ರೀ ಘ ಮ ಪೂ ಧರ್ಮರತ್ನ ಡಾ ಕೈಲಾಸನಾಥ ಶೀಲವಂತ ಹಿರೇಮಠದ ಶ್ರೀಗಳು ಹೇಳಿದರು
ಪಟ್ಟಣದ ಕೈಲಾಸನಾಥ ಶೀಲವಂತ ಹಿರೇಮಠ ಮಠದಲ್ಲಿ ಶ್ರೀ ರೇಣುಕಾಚಾರ್ಯ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿದರು.
ನಂತರ ಮಾತನಾಡಿದ ಶ್ರೀಗಳು ಮಹಾತ್ಮಾರರು ಹುಟ್ಟಿ ಅವತಾರ ತಾಳಿ ಧರ್ಮದ ಪರಿಕಲ್ಪನೆಯನ್ನು ಜನಸಾಮಾನ್ಯರಿಗೆ ತಿಳಿಸುತ್ತಾರೆ. ನಂತರ ಅವರು ಎಲ್ಲಿಗೆ ಸಾಗಬೇಕು ಎಂಬುದನ್ನು ಅರಿತು ಅದರಂತೆಯೇ ನಡೆದುಕೊಳ್ಳುತ್ತಾರೆ. ಅಂತಹ ಮಹಾತ್ಮರಲ್ಲಿ ರೇಣುಕಾಚಾರ್ಯರು ಪ್ರಮುಖರು ಎಂದರು. ಸಿದ್ಧಾಂತ ಶಿಕಾಮಣಿ ಗ್ರಂಥದಲ್ಲಿ ಋಷಿ ಮುನಿಗಳ ಒಂದೊಂದು ಸಂದೇಶಗಳನ್ನು ಬಿಡಿಬಿಡಿಯಾಗಿ ತಿಳಿಸಿದ್ದಾರೆ. ಆಚಾರ್ಯರ ಸೂತ್ರಗಳು ಎಲ್ಲ ಜಾತಿಗಳಿಗೂ ಅನ್ವಯಿಸುವ ಸೂತ್ರಗಳಾಗಿವೆ. ವೀರಶೈವ ತತ್ವಗಳಲ್ಲಿ ಸಮಾನತೆ ತತ್ವವನ್ನು ಬೆರೆಸಿ ಬೋಧಿಸಿದ್ದಾರೆ. ಶಿವ ಸಂಸ್ಕಾರವನ್ನು ನೀಡಿದರೆ ಆತನಲ್ಲಿ ಒಂದೇ ಎಂಬ ಭಾವನೆ ಮೂಡುತ್ತದೆ. ಲಿಂಗ ಸಮಾನತೆ, ಆತ್ಮ ಸಾಕ್ಷಾತ್ಕಾರಕ್ಕೆ ಜಗದ್ಗುರು ರೇಣುಕಾಚಾರ್ಯರು ಶ್ರಮಿಸಿದ್ದಾರೆ. ಶಿವನ ಸಂದೇಶವನ್ನು ಸಾರಲು ಭೂಲೋಕಕ್ಕೆ ಬಂದವರು ಶ್ರೀ ರೇಣುಕಾಚಾರ್ಯರು ಎಂದರು