ತಹಶೀಲ್ದಾರ್ ಕಛೇರಿಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ
ಕೊಲ್ಹಾರ: ಮಾ.24:ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಜಂಗಮ ಸಮುದಾಯದ ಸರ್ವ ಮುಖಂಡರುಗಳ ಸಮ್ಮುಖದಲ್ಲಿ ಆಯೋಜಿಸಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತೋತ್ಸವ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಎಸ್ ಎಸ್ ನಾಯಕಲಮಠ ಸಮಾಜದ ಹಿರಿಯರಾದ ಹಿರೇಮಠದ ಪಡದಯ್ಯ ಸ್ವಾಮಿಗಳು, ಜಂಗಮ ಸಮಾಜದ ತಾಲೂಕ ಅಧ್ಯಕ್ಷ ಸಿಎಂ ಗಣಕುಮಾರ,ಪಟ್ಟಣ ಪಂಚಾಯತ್ ಸದಸ್ಯ ನಿಂಗಪ್ಪ ಗಣಿ, ಡಾ. ಆರ್ ಬಿ ಮಠ, ಬಸಯ್ಯ ಗಮಾಚಾರಿ ರಾಜಶೇಖರ್ ಹಿರೇಮಠ, ಬಸಯ್ಯ ಮಠಪತಿ, ಗುರುಸಿದ್ದಯ್ಯ ಪರದಿಮಠ, ವಿಲಮ್ಮ ಗಣಕುಮಾರ, ಪುಷ್ಪ ಗಣಕುಮಾರ ಮಲ್ಲಯ್ಯ ಗಣಕುಮಾರ ಸಹಿತ ಅನೇಕರು ಉಪಸ್ಥಿತರಿದ್ದರು