ಬಡತನ ನಿರ್ಮೂಲನೆ ಮಾಡಿದರೆ, ಬಾಲಕಾರ್ಮಿಕತೆ ನಿರ್ಮೂಲನೆ ಮಾಡುವುದು ಸುಲಭ
ಕಲಬುರಗಿ:ಮಾ.23: “ಬಾಲಕಾರ್ಮಿಕರ ಸಮಸ್ಯೆಯು ಬಡತನದೊಂದಿಗೆ ನೇರವಾದ ಸಂಬಂಧ ಹೊಂದಿದೆ, ಬಡತನವನ್ನು ನಿರ್ಮೂಲನೆ ಮಾಡಿದರೆ, ಬಾಲಕಾರ್ಮಿಕತೆಯನ್ನು ನಿರ್ಮೂಲನೆ ಮಾಡುವುದು ಸುಲಭ” ಎಂದು ಸಿಯುಕೆಯ ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ ಹೇಳಿದರು.
ಅವರು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗ ಮತ್ತು ಗ್ರಾಮೀಣ ಸಾಕ್ಷರತೆ ಮತ್ತು ಆರೋಗ್ಯ ಕಾರ್ಯಕ್ರಮ (ಆರ್‍ಎಲ್‍ಎಚ್‍ಪಿ) ಮೈಸೂರು ಜಂಟಿಯಾಗಿ ಆಯೋಜಿಸಿದ್ದ ಬಾಲಕಾರ್ಮಿಕ ನಿರ್ಮೂಲನೆಯಲ್ಲಿ ಎನ್‍ಜಿಒಗಳು ಮತ್ತು ಸರ್ಕಾರದ ಪಾತ್ರ ಕುರಿತು ಅಂತರರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಅವರು ಮುಂದುವರೆದು ಮಾತನಾಡಿ “ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸರಕಾರದಿಂದ ಮಾತ್ರ ಸಾಧ್ಯವಿಲ್ಲ. ಎನ್‍ಜಿಒಗಳು, ನಾಗರಿಕ ಸಮಾಜ ಮತ್ತು ನಾವೆಲ್ಲರೂ ಕೈ ಜೋಡಿಸಬೇಕು. ಬಾಲಕರಿಗಿಂತ ಬಾಲಕಿಯರು ಬಾಲಕಾರ್ಮಿಕತೆಗೆ ಹೆಚ್ಚು ಗುರಿಯಾಗುತ್ತಾರೆ. ಅದಕ್ಕಾಗಿಯೇ ನಮ್ಮ ಪ್ರಧಾನಿಯವರು ಹೆಣ್ಣು ಮಕ್ಕಳ ಶಿಕ್ಷಣವನ್ನು ಉತ್ತೇಜಿಸುವ ಸಲುವಾಗಿ ‘ಬೇಟಿ ಬಚಾವೋ, ಬೇಟಿ ಪಡಾವೋ’ ಕಾರ್ಯಕ್ರಮವನ್ನು ಪರಿಚಯಿಸಿದರು” ಎಂದು ಹೇಳಿದರು.
ಕುಡುಜೈ -ವಿಂಬಿಸೊ ಸಂಯೋಜಕರು, ಬಾಲಕಾರ್ಮಿಕ ಯೋಜನೆ, ಟೆರ್ರೆ ಡೆಸ್ ಹೋಮ್ಸ್, ಜಿಂಬಾಬ್ವೆ, ಅವರು ಮಾತನಾಡಿ “ಬಾಲಕಾರ್ಮಿಕತೆಯನ್ನು ನಿರ್ಮೂಲನೆ ಮಾಡುವಲ್ಲಿ ಶಿಕ್ಷಣವು ಪ್ರಮುಖ ಪಾತ್ರ ವಹಿಸುತ್ತದೆ. ಮಗುವನ್ನು ಸಶಕ್ತಗೊಳಿಸಲು ಶಿಕ್ಷಣ ನೀಡುವುದು ಬಹಳ ಮುಖ್ಯ” ಎಂದು ಹೇಲಿದರು.
ಸಿಯುಕೆಯ ಸಾಮಾಜಿಕ ಮತ್ತು ನಡುವಳಿಕೆ ನಿಕಾಯದ ಡೀನ್ ಪೆÇ್ರ.ಚನ್ನವೀರ ಆರ್ ಎಂ ಅಧ್ಯಕ್ಷೀಯ ಭಾಷಣ ಮಾಡಿದರು. ಕಾರ್ಯಕ್ರಮವನ್ನು ಶ್ರೀಮತಿ ಬಿನ್ಷಾ ನಿರೂಪಿಸಿದರು. ಶ್ರೀಮತಿ ಆರಾಧ್ಯ ಪ್ರಾರ್ಥನೆ ಗೀತೆ ಹಾಡಿದರು. ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಪೆÇ್ರ.ಪವಿತ್ರಾ ಆರ್.ಆಲೂರ್ ಸ್ವಾಗತಿಸಿದರು. ಶ್ರೀಮತಿ. ಸಿಂಥಿಯಾ (ಖಐಊP) ಕಾರ್ಯಾಗಾರದ ವಿಷಯವನ್ನು ಪರಿಚಯಿಸಿದರು. ಶ್ರೀ ಉಟ್ಲ ರಮೇಶ್ ವಂದಿಸಿದರು.
ನಂತರ ನಡೆದ ಮೊದಲ ಘೊಷ್ಠಿಯಲ್ಲಿ ‘ಜಿಂಬಾಬ್ವೆಯಲ್ಲಿ ಬಾಲಕಾರ್ಮಿಕ ಪರಿಸ್ಥಿತಿ: ಸರ್ಕಾರದ ಪಾತ್ರ’ ಕುರಿತು ಕುಡ್ಜೈ ವಿಂಬಿಸೊ ಸಂಯೋಜಕರು, ಬಾಲಕಾರ್ಮಿಕ ಯೋಜನೆ ಟಿಡಿಹೆಚ್ (ಜಿ), ಜಿಂಬಾಬ್ವೆ ಮತ್ತು ಶ್ರೀ ಆಂಡ್ರ್ಯೂ ಮ್ಯಾಕ್ಸ್ ಆಲ್ಬರ್ಟ್ ನೈಕೆಟೆ ಅವರು ಪ್ರಸ್ತುತಪಡಿಸಿದರು. ಕುಡ್ಜೈ ವಿಂಬಿಸೊ ಮಾತನಾಡಿ “ಮಕ್ಕಳ ಸಾಕ್ಷರತೆಯನ್ನು ಉತ್ತೇಜಿಸಲು ಪೌಷ್ಟಿಕಾಂಶದಂತಹ ಸರ್ಕಾರಿ ಕಾರ್ಯಕ್ರಮಗಳು ಬಹಳ ಮುಖ್ಯ. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಶಿಕ್ಷಣವು ಪ್ರಮುಖ ಸಾಧನವಾಗಿದೆ. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಯಲ್ಲಿ ಸರ್ಕಾರದೊಂದಿಗೆ ಎನ್‍ಜಿಒ ಪ್ರಮುಖ ಪಾತ್ರ ವಹಿಸುತ್ತದೆ” ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ಜಿಂಬಾಬ್ವೆ ಸರ್ಕಾರವು ಪೌಷ್ಟಿಕಾಂಶದ ಸ್ಥಿತಿ ಮತ್ತು ಶಾಲಾ ದಾಖಲಾತಿಯನ್ನು ಹೇಗೆ ಮೌಲ್ಯಮಾಪನ ಮಾಡುತ್ತದೆ ಎಂಬುದರ ಕುರಿತು ಚರ್ಚೆ ನಡೆಯಿತು.
ಎರಡನೇ ಘೊಷ್ಠಿಯಲ್ಲಿ ‘ಬಾಲಕಾರ್ಮಿಕ ನಿರ್ಮೂಲನೆಯಲ್ಲಿ ಸರ್ಕಾರದ ಪಾತ್ರ’ ವಿಷಯದ ಕುರಿತು ನವೀನ್ ಕುಮಾರ್ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಲ್ಬುರಗಿ, ಮಾತನಾಡಿದರು. ಅವರು ಕಲಬುರಗಿಯಲ್ಲಿ ಬಾಲಕಾರ್ಮಿಕರ ಅಂಕಿಅಂಶಗಳನ್ನು ಮತ್ತು ವಿವಿಧ ಪ್ರದೇಶಗಳಲ್ಲಿ ಅವರ ಮಧ್ಯಸ್ಥಿಕೆ ಕುರಿತು ವಿವರಿಸಿದರು. ಚರ್ಚೆಯಲ್ಲಿ, ಮಕ್ಕಳು ಮತ್ತು ಕುಟುಂಬವು ಬಾಲಕಾರ್ಮಿಕತೆಯಿಂದ ಹೊರಬರಲು ಸಹಾಯ ಮಾಡುವ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಕುರಿತು ಅವರು ವಿವರಿಸಿದರು. ಈ ಘೊಷ್ಠಿಯನ್ನು ವೆಂಕಟೇಶ ಸಿಂದೆಹಟ್ಟಿ ನಡೆಸಿಕೊಟ್ಟರು.
ಮೂರನೇ ಘೊಷ್ಠಿಯಲ್ಲಿ ‘ಉತ್ತರ ಕರ್ನಾಟಕದಲ್ಲಿ ಬಾಲಕಾರ್ಮಿಕ ಪರಿಸ್ಥಿತಿ ವಿಶೇಷವಾಗಿ ಬೀದರ ಮತ್ತು ಕಲ್ಬುರಗಿಯಲ್ಲಿʼ ಎಂಬ ವಿಷಯದ ಕುರಿತು ಪೆÇ್ರ. ಚನ್ನವೀರ ಆರ್ ಎಂ ಮಾತನಾಡಿದರು. ಅವರು ಕಲ್ಬುರಗಿಯ ಒಟ್ಟಾರೆ ಚಿತ್ರಣವನ್ನು ವಿವರಿಸಿದರು. ಬಾಲಕಾರ್ಮಿಕರಿಗೆ ಸಂಬಂಧಿಸಿದಂತೆ ವಿವಿಧ ಸಿದ್ಧಾಂತಗಳು ಮತ್ತು ಕಲ್ಯಾಣ ಕರ್ನಾಟಕದಲ್ಲಿ ಬಾಲಕಾರ್ಮಿಕತೆಗೆ ಸಂಬಂಧಿಸಿದಂತೆ ನಡೆದ ವಿವಿಧ ಅಧ್ಯಯನಗಳನ್ನು ವಿವರಿಸಿದರು. ಬಾಲಕಾರ್ಮಿಕ ನಿರ್ಮೂಲನೆಗಾಗಿ ಎನ್‍ಜಿಒ ಜೊತೆಗೆ ಸಾಮಾಜಿಕ ಕಾರ್ಯಗಳ ಏಕೀಕರಣದ ಪ್ರಾಮುಖ್ಯತೆ ಮತ್ತು ಮಕ್ಕಳ ಒಟ್ಟಾರೆ ಅಭಿವೃದ್ಧಿಗೆ ವಿಶೇಷವಾಗಿ ಬಾಲಕಾರ್ಮಿಕ ನಿರ್ಮೂಲನೆಗೆ ಬಹು ಶಿಸ್ತಿನ ಮತ್ತು ಸಮಗ್ರ ವಿಧಾನದ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು. ಈ ಘೊಷ್ಠಿಯನ್ನು ಶ್ರೀಮತಿ ಸರಸ್ವತಿ ನಡೆಸಿಕೊಟ್ಟರು.