ಮಾ. 31ರಂದು ಜಗದ್ಗುರು ಡಾ. ಮಾತೆ ಮಹಾದೇವಿಯವರ ಸಂಸ್ಮರಣೋತ್ಸವ
ಕಲಬುರಗಿ:ಮಾ.23: ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಇದೇ ಮಾರ್ಚ್ 31ರಂದು ಬೆಳಿಗ್ಗೆ ಹತ್ತು ಗಂಟೆಗೆ ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ, ರಾಷ್ಟ್ರೀಯ ಬಸವದಳ, ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣದ ಸಂಯುಕ್ತ ಆಶ್ರಯದಲ್ಲಿ ವಿಶ್ವ ಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕøತಿಕ ನಾಯಕ ಎಂದು ಘೋಷಣೆ ಮಾಡಿದ ಕರ್ನಾಟಕ ಘನ ಸರ್ಕಾರಕ್ಕೆ ಅಭಿನಂದನೆ ಸಮರ್ಪಣೆ ಜರುಗಲಿದೆ. ಹಾಗೂ ಚಿನ್ಮುಲಾದ್ರಿ ಚಿತ್ಥಳೆ ಮಹಾಜಗದ್ದುರು ಡಾ. ಮಾತೆ ಮಹಾದೇವಿಯವರ ಸಂಸ್ಮರಣೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ರವಿ ವಿಭೂತಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಕಾರ್ಮಿಕ ಸಚಿವ ಎಸ್.ಕೆ. ಕಾಂತಾ ಅವರಿಗೆ ಪ್ರವಚನ ಪಿತಾಮಹ ಪ್ರಶಸ್ತಿಯನ್ನು ಲಿಂಗಾನಂದ ಸ್ವಾಮೀಜಿ ಸ್ಮರಣಾರ್ಥ ಪ್ರದಾನ ಮಾಡಲಾಗುವುದು. ಹಿಂದುಳಿದ ವರ್ಗದ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ.ಎಸ್. ದ್ವಾರಕನಾಥ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದರು.
ಉದ್ಘಾಟನೆಯನ್ನು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್, ಐಟಿಬಿಟಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ನೆರವೇರಿಸುವರು. ದಿವ್ಯ ಸಾನಿಧ್ಯವನ್ನು ಜಗದ್ಗುರು ಚನ್ನಬಸವಾನಂದ್ ಸ್ವಾಮೀಜಿ, ದಿವ್ಯ ನೇತೃತ್ವವನ್ನು ಸದ್ಗುರು ಮಾತೆ ಸತ್ಯದೇವಿ, ಅಧ್ಯಕ್ಷತೆಯನ್ನು ಎಸ್. ದಿವಾಕರ್ ಅವರು ವಹಿಸುವರು. ಮಾತೋಶ್ರೀ ದಾಕ್ಷಾಯಣಿ ಎಸ್. ಅಪ್ಪಾ ಅವರಿಗೆ ವಿಶೇಷ ಸತ್ಕಾರ ನೀಡಲಾಗುವುದು ಎಂದು ಅವರು ಹೇಳಿದರು.
ಜ್ಯೋತಿ ಅರುಣಕುಮಾರ್ ಪಾಟೀಲ್ ಮತ್ತು ಶೋಭಾ ಸಿದ್ದು ಸಿರಸಗಿ ಅವರು ಗುರುಬಸವ ಪೂಜೆ ನೆರವೇರಿಸುವರು. ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಧ್ವಜಾರೋಹಣ ನೆರವೇರಿಸುವರು. ಪ್ರೊ. ಆರ್.ಕೆ. ಹುಡಗಿ, ಜೆ.ಎಸ್. ಪಾಟೀಲ್, ವಿಶ್ವರಾಧ್ಯ ಸತ್ಯಂಪೇಟೆ, ಶ್ರೀಶೈಲ್ ಜಿ. ಮಸೂತೆ ಅವರು ವಿಶೇಷ ಉಪನ್ಯಾಸ ನೀಡುವರು. ಸಚಿವ ಶರಣಪ್ರಕಾಶ್ ಪಾಟೀಲ್, ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್. ಪಾಟೀಲ್, ಶಾಸಕರಾದ ಡಾ. ಅಜಯಸಿಂಗ್, ಖನೀಜ್ ಫಾತಿಮಾ, ಎಂ.ವೈ. ಪಾಟೀಲ್, ಬಸವರಾಜ್ ಮತ್ತಿಮೂಡ್, ಶಶೀಲ್ ಜಿ. ನಮೋಶಿ, ತಿಪ್ಪಣ್ಣಪ್ಪ ಕಮಕನೂರ್, ಬಿ.ಜಿ. ಪಾಟೀಲ್ ಅವರು ವಿಶೇಷ ಆಹ್ವಾನಿತರಾಗಿ ಆಗಮಿಸುವರು. ಅನೇಕರು ಆಹ್ವಾನಿತರಾಗಿ ಆಗಮಿಸುವರು ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬಸವರಾಜ್ ಹೊಸಮನಿ, ಅನಿಲ್ ಕೋಣಿನ್, ಶರಣು ಮಹಾಜನ್ ಮುಂತಾದವರು ಉಪಸ್ಥಿತರಿದ್ದರು.