ಬರಗಾಲದ ಸಂಕಷ್ಟದಲ್ಲಿ ಚುನಾವಣೆ ನೀತಿ ಸಂಹಿತೆ ಬರೆಅಥಣಿ ಪೂರ್ವ ಹಾಗೂ ಉತ್ತರ ಭಾಗದ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಉಲ್ಬಣ /ತೋಟದ ವಸತಿ ಜನರಿಗೆ ಸಿಗುತ್ತಿಲ್ಲ ಜೀವಜಲ
ಅಬ್ದುಲಜಬ್ಬಾರ ಚಿಂಚಲಿ
ಅಥಣಿ :ಮಾ.23: ತಾಲೂಕಿನಲ್ಲಿ ಈಗ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇನ್ನೂ ಎರಡು ತಿಂಗಳು ಬೇಸಿಗೆ ಧಗೆ ಯಾವ ರೀತಿ ತಡೆದುಕೊಳ್ಳುವುದು, ಕುಡಿಯುವ ನೀರು ಎಲ್ಲಿಂದ ತರುವುದು, ಜಾನುವಾರುಗಳಿಗೆ ನೀರು ಎಲ್ಲಿಂದ ಹುಡುಕುವುದು ಎಂಬ ಆತಂಕ ಜನರನ್ನು ಕಾಡುತ್ತಿದೆ.
ಹೌದು… ತಾಲೂಕಿನ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಇನ್ನೂ ಅಲ್ಪ ಸ್ವಲ್ಪ ನೀರು ಇರುವುದರಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಡಿಸದೇ ಇರಬಹುದು ಆದರೆ ತಾಲೂಕಿನ ಪೂರ್ವ ಭಾಗದ ಮತ್ತು ಉತ್ತರ ಭಾಗದ ಹಳ್ಳಿಗಳಲ್ಲಿ ಅಂತರ್ಜಲ ಮಟ್ಟ ಕುಸಿದು ಕೊಳವೆಬಾವಿ ಮತ್ತು ಬಾವಿಗಳಲ್ಲಿ ನೀರಿಲ್ಲದೆ ಜೀವಜಲಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಈಗಾಗಲೇ ಅಥಣಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿ ಮೂರು ತಿಂಗಳು ಗತಿಸಿದರೂ ತಾಲೂಕಾ ಆಡಳಿತದಿಂದ ಯಾವುದೇ ಬರ ಪರಿಹಾರ ಬಂದಿಲ್ಲ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಗ್ರಾಮಮಟ್ಟದ ಅಧಿಕಾರಿಗಳಿಗೆ ಮೇಲಾಧಿಕಾರಿಗಳು ಅನುಮತಿ ನೀಡದೇ ಇರುವುದರಿಂದ ತೋಟದ ವಸತಿ ಜನರಿಗೆ ಸಕಾಲಕ್ಕೆ ನೀರು ಸರಬರಾಜು ಆಗದೆ ಜನಾಕ್ರೋಶಕ್ಕೆ ಕಾರಣವಾಗಿದೆ.
ತಾಲೂಕಿನ ಪೂರ್ವ ಭಾಗದ ತೆಲಸಂಗ ಹೋಬಳಿ ಮಟ್ಟದ ತೆಲಸಂಗ, ಪಡತರವಾಡಿ ,ಐಗಳಿ, ಕೋಹಳ್ಳಿ, ಕೆಸ್ಕರದಡ್ಡಿ, ಕಕಮರಿ, ರಾಮತೀರ್ಥ, ಕೊಟ್ಟಲಗಿ, ಬನ್ನೂರ, ಕನ್ನಾಳ, ಹಾಲಳ್ಳಿ, ಅರಟಾಳ, ಬಾಡಗಿ, ಮಾಣಿಕನಗರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕ್ರಮ ಕೈಗೆuಟಿಜeಜಿiಟಿeಜಳ್ಳುತ್ತಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಉತ್ತರ ಭಾಗದ ಅನಂತಪುರ ಹೋಬಳಿಯಲ್ಲಿ ಬರುವ ಅನಂತಪುರ, ಅರಳಿಹಟ್ಟಿ, ಖಿಳೇಗಾಂವಿ, ಮದಬಾವಿ, ಜಂಬಗಿ, ಸಂಬರಗಿ, ಪಾಂಡೆಗಾoವ ಸೇರಿದಂತೆ ಇನ್ನಿತರ ಗ್ರಾಮಗಳ ತೋಟದ ವಸತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದ್ದು, ಜನರಿಗೆ ಸಕಾಲಕ್ಕೆ ನೀರು ಪೂರೈಸುವಲ್ಲಿ ಗ್ರಾಮ ಪಂಚಾಯಿತಿ ಆಡಳಿತ ವಿಫಲವಾಗುತ್ತಿದ್ದು, ಇಲ್ಲಿನ ಜನರು ದಿನವಿಡೀ ನೀರಿಗಾಗಿಯೇ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ಐಗಳಿ ಕ್ರಾಸ್ ಮಾಣಿಕ ನಗರದಲ್ಲಿ ಮತ್ತು ಗುಂಡಿವಾಡಿ ಗ್ರಾಮದ ಹತ್ತಿರ ಸ್ಥಾಪನೆಗೊಂಡಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇದ್ದರೂ ಕೂಡ ಪಂಪ್ ಸೆಟ್ ರಿಪೇರಿಯ ನೆಪದಲ್ಲಿ ಕಳೆದ 15 ದಿನಗಳಿಂದ ನದಿಯಿಂದ ನೀರು ಸರಬರಾಜು ಮಾಡಿಲ್ಲ. ಹೆಚ್ಚುವರಿ ಪಂಪ್ ಸೆಟ್ ಇಟ್ಟುಕೊಂಡು ಕುಡಿಯುವ ನೀರು ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕಾದ ಅಧಿಕಾರಿಗಳು ನಿರ್ಲಕ್ಷ ವಹಿಸಿರುವುದನ್ನು ಕಂಡು 30 ಗ್ರಾಮಗಳ ಜನರು ಆಯಾ ಗ್ರಾಮ ಪಂಚಾಯಿತಿಗಳಿಗೆ ತೆರಳಿ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಳ್ಳುತ್ತಿರುವ ಪ್ರಸಂಗ ಸಾಮಾನ್ಯವಾಗಿವೆ.
ಸಮಾಜ ಸೇವಕರಿಗೆ ನೀತಿ ಸಂಹಿತೆ ಅಡ್ಡಿ :
ಅನೇಕ ಸಮಾಜ ಸೇವಕರು, ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಪುರಸಭೆ ಸದಸ್ಯರು ತಮ್ಮ ಸ್ವಂತ ಖರ್ಚಿನಲ್ಲಿ ನೀರಿನ ಟ್ಯಾಂಕರ್ ಗಳನ್ನು ಆರಂಭಿಸುವ ಮೂಲಕ ಅಗತ್ಯವಿರುವಲ್ಲಿ ಜನರಿಗೆ ನೀರನ್ನು ಪೂರೈಸಿ ಮಾನವೀಯತೆ ಮೆರೆಯುತ್ತಿದ್ದರು. ಆದರೆ ಈಗ ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಇಂತಹ ಸಮಾಜಸೇವಕರಿಗೆ ಮತ್ತು ಜನಪ್ರತಿನಿಧಿಗಳಿಗೆ ಜನರ ಸಂಕಷ್ಟಕ್ಕೆ ಸ್ಪಂದಿಸಲು ಅವಕಾಶ ಇಲ್ಲದಂತಾಗಿದೆ. ಇದರಿಂದ ಬರಗಾಲದ ಸಂಕಷ್ಟದಲ್ಲಿ ಸಿಲುಕಿರುವ ಜನತೆಗೆ ಚುನಾವಣಾ ನೀತಿ ಸಂಹಿತೆ ಬರೆ ಎಳೆದಂತಾಗಿದೆ.
ನೀರಿನ ಸಮಸ್ಯೆ ಪರಿಹರಿಸಲು ಗ್ರಾಪಂ ಅಧಿಕಾರಿಗಳಿಗಿಲ್ಲ ಅಧಿಕಾರ :
ಬರಗಾಲದ ಪರಿಸ್ಥಿತಿಯನ್ನು ಎದುರಿಸಲು ಮೇಲ್ನೋಟಕ್ಕೆ ತಾಲೂಕ ಆಡಳಿತ ಕಾರ್ಯ ನಿರ್ವಹಿಸುತ್ತಿದ್ದರೂ ಕೂಡ ಈಗ ಲೋಕಸಭಾ ಚುನಾವಣೆಯ ಕಾರ್ಯ ಚಟುವಟಿಕೆಗಳಲ್ಲಿಯೇ ತಲ್ಲೀನರಾಗಿದ್ದಾರೆ. ಎಲ್ಲ ಗ್ರಾಮಗಳಿಗೆ ಸಕಾಲಕ್ಕೆ ಕುಡಿಯುವ ನೀರಿನ ಸರಬರಾಜು ಮಾಡುವಲ್ಲಿ ತಾಲೂಕ ಆಡಳಿತ ವಿಫಲವಾಗುತ್ತಿದೆ. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೆ, ಮೊದಲಿಗೆ ಅದೇ ಗ್ರಾಮದ ರೈತರಿಂದ ಕುಡಿಯುವ ನೀರು ಪರಿಹರಿಸಲು ಮೊದಲ ಅದ್ಯತೆ ನೀಡಿ ಕ್ರಮ ಕೈಗೆuಟಿಜeಜಿiಟಿeಜಳ್ಳಬೇಕು .ರೈತರಿಂದ ನೀರು ಬಿಡಿಸಲು ಅವಕಾಶವಿಲ್ಲದ ಸಂದರ್ಭದಲ್ಲಿ ತಹಶೀಲ್ದಾರ್‍ರಿಗೆ ಆಯಾ ಗ್ರಾಪಂ ಪಿಡಿಒಗಳಿಂದ ದೂರು ನೀಡುವುದು. ನಂತರ ತಹಶೀಲ್ದಾರ್‍ರಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಸೂಚನೆಯಿದೆ. ಈ ಹಿನ್ನಲೆಯಲ್ಲಿ ಗ್ರಾಪಂ ಪಿಡಿಒ ತುರ್ತು ಕ್ರಮಕೈಗೆuಟಿಜeಜಿiಟಿeಜಳ್ಳಲು ಅವಕಾಶ ಇಲ್ಲ. ಹೀಗಾಗಿ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಿಲ್ಲ, ಈಗಾಗಲೇ ಕಳೆದು 20 ದಿನಗಳಿಂದ ಆರಂಭವಾಗಿರುವ ನೀರಿನ ಟ್ಯಾಂಕರ್ ಗಳಿಗೆ ತಾಲೂಕ ಆಡಳಿತದಿಂದ ಹಣ ಬಿಡುಗಡೆ ಆಗಿಲ್ಲ, ಹೀಗಾಗಿ ನಾವು ಜನರನ್ನು ಮತ್ತು ನೀರಿನ ಟ್ಯಾಂಕರ್ ಗಳ ನಿರ್ವಹಣೆ ಮಾಡುವುದು ಕಷ್ಟವಾಗಿದೆ ಎಂಬುದು ಗ್ರಾಮ ಪಂಚಾಯಿತಿ ಅಧಿಕಾರಿಗಳ ವಾದವಾಗಿದೆ.
ಸರ್ಕಾರ ಅಥಣಿ ಮತ್ತು ಕಾಗವಾಡ ತಾಲೂಕುಗಳನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡಿದರೂ ಯಾವುದೇ ಬರಗಾಲ ಪರಿಹಾರ ಬಂದಿಲ್ಲ. ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದ್ದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಟ್ಯಾಂಕರ್‍ನಿಂದ ಕುಡಿಯುವ ನೀರು ಪೂರೈಸಲು ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಸಮಸ್ಯೆಯಾಗಿದ್ದರೂ ಗ್ರಾಪಂ ಪಿಡಿಓ ಗಳು ಖರ್ಚಿಗೆ ಹಣವಿಲ್ಲದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಜಿಲ್ಲಾಡಳಿತ ಕೂಡಲೇ ಟೆಂಡರ್ ಪ್ರಕ್ರಿಯೆ ನಡೆಸಿ ತೋಟದ ವಸತಿಗಳಿಗೆ ನೀರು ಪೂರೈಕೆ ಮಾಡಬೇಕು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪಂಪ್ ಸೆಟ್ ಕೂಡಲೇ ರಿಪೇರಿ ಮಾಡಿ ನಲ್ಲಿಗಳಿಗೆ ನೀರು ಸರಬರಾಜು ಮಾಡಬೇಕು. ಕೊಡಲೇ ನೀರಿನ ಸರಬರಾಜು ಮಾಡದಿದ್ದರೆ ಗ್ರಾಮ ಪಂಚಾಯಿತಿಗೆ ಬೀಗ ಜಡೆದು ಪ್ರತಿಭಟನೆ ನಡೆಸಬೇಕಾಗುತ್ತದೆ.
ತಾಲೂಕಿನ ಅನೇಕ ಗ್ರಾಮಗಳಲ್ಲಿ ಮತ್ತು ತೋಟದ ವಸತಿ ಜನರಿಗೆ ಟ್ಯಾಂಕರ್ ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಕಳೆದ ಮೂರು ನಾಲ್ಕು ದಿನಗಳಿಂದ ಟ್ಯಾಂಕರ್ ಗಳ ಬೇಡಿಕೆ ಹೆಚ್ಚಾಗಿದ್ದು, ಗ್ರಾಮ ಪಂಚಾಯತ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಹೆಚ್ಚುವರಿ ಟ್ಯಾಂಕುಗಳನ್ನು ಒದಗಿಸಲಾಗುವುದು. ಈಗಾಗಲೇ ನೀರು ಪೂರೈಸಿದ ಟ್ಯಾಂಕರ್ ಗಳಿಗೆ ಹಣ ಬಿಡುಗಡೆಯಾಗಿದೆ, ಶೀಘ್ರದಲ್ಲಿಯೇ ಅವರ ಖಾತೆಗೆ ವರ್ಗಾಯಿಸಲಾಗುವುದು. ನೀರಿನ ಟ್ಯಾಂಕರ್ ಗಳ ಯಾವುದೇ ಬಿಲ್ಲ ಬಾಕಿ ಉಳಿಸಿಕೊಳ್ಳಲ್ಲ. ಕೃಷ್ಣಾ ನದಿಯಲ್ಲೂ ಕೂಡ ನೀರಿನ ಮಟ್ಟ ಕಡಿಮೆಯಾಗುತ್ತಿದ್ದು, ಸಾರ್ವಜನಿಕರು ನೀರನ್ನು ಹಿತ ಮಿತವಾಗಿ ಬಳಸಬೇಕು.
ನಮ್ಮ ತೋಟದ ವಸತಿಗಳಲ್ಲಿ 40ಕ್ಕೂ ಅಧಿಕ ಕುಟುಂಬಗಳಿವೆ. ಸುತ್ತಮುತ್ತಲಿನ ಯಾವ ಬಾವಿ ಮತ್ತು ಬೋರ್ವೆಲ್ ಗಳಿಗೆ ನೀರು ಸಿಗದೇ ಪರದಾಡುವಂತಾಗಿದೆ. ಗ್ರಾಮ ಪಂಚಾಯಿತಿಯವರಿಗೆ ಹೇಳಿದರೆ ವಾರಕ್ಕೆ ಒಂದೆ ಟ್ಯಾಂಕರ್ ಮಾತ್ರ ಕಳಿಸುತ್ತಾರೆ. ಇಲ್ಲಿನ ಜನ ಮತ್ತು ಜಾನುವಾರುಗಳಿಗೆ ನೀರು ಸಾಲುತ್ತಿಲ್ಲ. ಕೂಡಲೇ ಹೆಚ್ಚುವರಿ ಟ್ಯಾಂಕರಗಳನ್ನು ಆರಂಭಿಸಬೇಕು. ಇಲ್ಲದಿದ್ದರೆ ಜಾನುವಾರುಗಳ ಸಮೇತ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ.
– ಹಣಮಂತ. ತೆಲಸಂಗ ವಸತಿ ತೋಟ ಐಗಳಿ