ಹೋಳಿ ಹಬ್ಬ ಜಾತ್ರೆಯಲ್ಲಿ ಕಾನೂನು ಉಲ್ಲಘಿಸಿದರೆ ಶಿಸ್ತು ಕ್ರಮ:ಪಿಎಸಐ ಮಹಿಬೂಬ ಅಲಿ
ಕರಜಗಿ:ಮಾ.23:ಲೋಕಸಬಾ ಚುಣಾವಣಾ ನೀತಿ ಸಂಹಿತೆ ಜಾರಿಯಾಗಿದ್ದು ಯಾವುದು ನಮ್ಮ ಕೈಯಲ್ಲಿ ಇರುವುದಿಲ್ಲಾ ಚುಣಾವಣಾ ಆಯೋಗ ಎಲ್ಲದರ ಬಗ್ಗೆ ಹದ್ದಿನ ಕಣ್ಣು ಇಟ್ಟಿರುತ್ತದೆ ನಾಗರಿಕರು ಕಾನೂನು ಸುವ್ಯವಸ್ಥೆಗೆ ದಕ್ಕೆಯಾಗದಂತೆ ಹೋಳಿ ಆಚರಣೆ ಮಾಡಬೇಕು ಒಂದು ವೇಳೆ ಕಾನೂನು ಉಲ್ಲಘಿಸಿದೆಯಾದಲ್ಲಿ ಶಿಸ್ತು ಕ್ರಮ ಕೈಳ್ಳಲಾಗುವುದು ಎಂದು ಪಿಎಸಐ ಮಹಿಬೂಬ ಅಲಿ ತಿಳಿಸಿದರು ,
ಅಫಜಲಪುರ ತಾಲೂಕಿನ ಕರಜಗಿ ಗ್ರಾಮದ ಶ್ರೀ ಯಲ್ಲಾಲಿಂಗೇಶ್ವರ ಮಠದ ಆವರಣದಲ್ಲಿ ಶುಕ್ರವಾರ ಹೋಳಿ ಹಬ್ಬದ ನಿಮಿತ್ಯವಾಗಿ ಹಮ್ಮಿಕೊಂಡ ಶಾಂತಿ ಸಭೆಯ ಅದ್ಯಕ್ಷತೆಯನ್ನು ವಹಿಸಿ ಮಾತನಾಡಿದರು,
ಸಾರ್ವಜನಕರು ಹೋಳಿ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಯಾವುದೆ ಅಹಿತಕರ ಘಟನೆಗಳು ನಡೆಯದಂತೆ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು,
ನಾಗರಿಕರಿಗೆ ಕಿರಿಕಿರಿ ಉಂಟುಮಾಡಿದಲ್ಲಿ ಮತ್ತು ಸಮಾಜದಲ್ಲಿ ಶಾಂತಿ ಕದಡಿದರೆ ಮುಲಾಜಿಲದೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು,
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ ಅದ್ಯಕ್ಷ ಮಲ್ಲಮ್ಮ ಪಾಠೋಳಿ, ಅಂಬಣ್ಣಾ ನರಗೊದಿ,ಜಗದಿಶ ಗಡಗಿ ,ಕರೆಪ್ಪಾ ಹಿರೆಕುರಬರ, ಸಂತೋಷ ಮಾಶಾಳ,ಶಿವಪ್ಪ ,ಸೊಮು ನೈಕೊಡಿ,ಹಾಗು ಗ್ರಾಮಸ್ಥರು ಇದ್ದರು.