ಚೇಕ್‍ಪೋಸ್ಟ್‍ಗಳಿಗೆ ಡಿಸಿ-ಎಸ್‍ಪಿ ಭೇಟಿವಾಹನಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ನಡೆಸಲು ಡಿಸಿ ಸೂಚನೆ
ತಾಳಿಕೋಟೆ:ಮಾ.23: ಲೋಕಸಭಾ ಚುನಾವಣೆಯ ನೀತಿ ಸಂಹಿತಿ ಜಾರಿಯಾದ ಹಿನ್ನೇಲೆ ತಾಲೂಕಿನ ಗಡಿ ವ್ಯಾಪ್ತಿಯಲ್ಲಿ ಚೆಕ್‍ಪೋಸ್ಟಗಳನ್ನು ಅಗತ್ಯ ಸಿಬ್ಬಂದಿ ನಿಯೋಜನೆಯೊಂದಿಗೆ ನಿರ್ಮಿಸಲಾಗಿದ್ದು ಮಿಣಜಗಿ ಕ್ರಾಸ್‍ನ ಚೆಕ್‍ಪೋಸ್ಟಗೆ ಜಿಲ್ಲಾಧಿಕಾರಿ ಟಿ.ಬೋಬಾಲನ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವನೆ ಅವರು ಶುಕ್ರವಾರರಂದು ಬೆಟ್ಟಿ ನೀಡಿ ತಪಾಸಣೆ ನಡೆಸಿದರಲ್ಲದೇ ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳು ನೀಡಿದರು.
ಜಿಲ್ಲಾಧಿಕಾರಿ ಟಿ.ಬೋಬಾಲನ್ ಅವರು ಉಪಸ್ಥಿತ ಸಿಪಿಐ ಮತ್ತು ಚೇಕ್‍ಪೋಸ್ಟ ತಪಾಸಣಾ ಅಧಿಕಾರಿ ಪಿಡಿಓ ಬಿ.ಎಂ.ಸಾಗರ ಅವರಿಗೆ ಚೆಕ್‍ಪೋಸ್ಟನ ಮೂಲಕ ತೆರಳುವ ಪ್ರತಿವಾಹನಗಳನ್ನು ತಪಾಸಣೆ ನಡೆಸಬೇಕು ಯಾವುದೇ ವಾಹನಗಳನ್ನು ಹಾಗೆ ಬಿಡುವಂತಿಲ್ಲಾ ವಾಹನಗಳ ತಪಾಸಣೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಲ್ಲಿಯೂ ಲೋಪಬಾರದಂತೆ ಕಾರ್ಯನಿರ್ವಹಿಸಿ ಎಂದು ಸೂಚಿಸಿದರಲ್ಲದೇ ಅಕ್ರಮ ಹಣ ಸಾಗಾಟ ಮತ್ತು ಮಧ್ಯ ಸಾಗಾಟ ಕಂಡು ಬಂದರೆ ಅವುಗಳನ್ನು ಸೀಜ್ ಮಾಡುವದರೊಂದಿಗೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರಲ್ಲದೇ ಲೋಕಸಭಾ ಚುನಾವಣೆಯು ನಿಸ್ಪಕ್ಷಪಾತವಾಗಿ ಮತ್ತು ಪಾರದರ್ಶಕವಾಗಿ ನಡೆಯಬೇಕಿದೆ ಇದಕ್ಕೆ ಎಲ್ಲ ರೀತಿಯಿಂದಲೂ ಅಧಿಕಾರಿಗಳು ಮುಂದಾಗಿ ರಾಜ್ಯ ಹೆದ್ದಾರಿ ಇರುವದರಿಂದ ಚೇಕ್‍ಪೋಸ್ಟ ಮೂಲಕ ಊರಿನ ಒಳಗಡೆ ಮತ್ತು ಹೋರಗಡೆ ಹೋಗುವ ಪ್ರತಿವಾಹನವನ್ನು ತಪಾಸಣೆ ನಡೆಸಬೇಕು ಎಲ್ಲಿಯೂ ಕೂಡಾ ಲೋಪವಾಗದಂತೆ ನಡೆದುಕೊಳ್ಳಿ ಎಂದು ಸೂಚಿಸಿದರು.
ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವನೆ ಅವರು ಮಾತನಾಡಿ ಈಗಾಗಲೇ ಪೊಲೀಸ್ ಸಿಬ್ಬಂದಿಗಳಿಗೆ ಬೆಳಿಗ್ಗೆ 8 ರಿಂದ ಮದ್ಯಾಹ್ನ 2 ಗಂಟೆವರೆಗೆ 2 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ರಾತ್ರಿ 8 ಘಂಟೆಯಿಂದ ಬೆಳಿಗ್ಗೆ 8 ಗಂಟೆಯವರೆಗೆ ಸಿಪ್ಟವಾಯ್ಸ್ ಸೂಚಿಸಿದಂತೆ ಕಾರ್ಯನಿರ್ವಹಿಸಲು ಸೂಚಿಸಿದರಲ್ಲದೇ ಕರ್ತವ್ಯನಿರತ ಸೇಕ್ಟರ್ ಆಫೀಸರ್ ಜೊತೆಗೆ ಸದಾಕಾಲ ಇರಬೇಕು ಯಾವುದೇ ಸಂದರ್ಬದಲ್ಲಿಯೂ ಕರ್ತವ್ಯ ನಿರತ ಸಿಬ್ಬಂದಿಗಳು ಚೆಕ್‍ಪೋಸ್ಟ್‍ದಿಂದ ಮುನ್ಸೂಚನೆ ಇಲ್ಲದೇ ಹೋಗುವಂತಿಲ್ಲಾ ಕಟ್ಟುನಿಟ್ಟಾಗಿ ವಾಹನ ತಪಾಸಣೆ ಮತ್ತು ದಾಖಲೆ ಇಲ್ಲದ ಹಣ, ಚಿನ್ನ ಮತ್ತು ಅಕ್ರಮ ಮಧ್ಯ ಸಾಗಾಟ ಯಾವುದೇ ಕಂಡುಬಂದರೂ ವಶಕ್ಕೆ ಪಡೆದುಕೊಳ್ಳಿ ಎಂದು ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‍ಐ ಮಹ್ಮದತೋಸಿಫ್ ಘೋರಿ ಅವರಿಗೆ ಸೂಚಿಸಿದರಲ್ಲದೇ ಪ್ರತಿ ಚೆಕ್‍ಪೋಸ್ಟಗಳಲ್ಲಿ ಅಳವಡಿಸಲಾಗಿರುವ ಸಿಸಿ ಟಿವಿ ಕ್ಯಾಮರಾಗಳು ನಿರಂತರವಾಗಿ ಕಾರ್ಯನಿರ್ವಹಿಸಬೇಕು ಯಾವುದೇ ಸಮಯದಲ್ಲಿಯೂ ಈ ಕ್ಯಾಮರಾಗಳು ಬಂದ್ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಬಿಸಿಲಿನ ತಾಪಕ್ಕೆ ಬಸವಳಿದ ಸಿಬ್ಬಂದಿ
ಲೋಕಸಭಾ ಚುನಾವಣೆಯ ನಿಮಿತ್ಯವಾಗಿ ತಾಲೂಕಾ ಗಡಿಭಾಗಗಳಿಗೆ ಹೊಂದಿಕೊಂಡು ನಿರ್ಮಿಸಲಾಗಿರುವ ಚೆಕ್‍ಪೋಸ್ಟಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಯಾವುದೇ ಮೂಲಸೌಕರ್ಯಗಳು ಸಿಗದ್ದರಿಂದ ಬಿಸಿಲಿನ ತಾಪದಲ್ಲಿ ಕಾರ್ಯನಿರ್ವಹಿಸುತ್ತಾ ಸಾಗಿದ್ದಾರೆ.
ಚೇಕ್‍ಪೋಸ್ಟಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ತಾಲೂಕಾಡಳಿತದ ವತಿಯಿಂದ ಬಿ.ಸಾಲವಾಡಗಿ ಮತ್ತು ಮಿಣಜಗಿ ಕ್ರಾಸ್ ಚಕ್‍ಪೋಸ್ಟಗಳಲ್ಲಿ ಸಿಬ್ಬಂದಿಗಳಿಗೆ ನೆರಳಿಗೆ ಕುಳಿತುಕೊಳ್ಳಲು ತಗಡಿನ ಸೇಡ್‍ಗಳನ್ನು ನಿರ್ಮಾಣ ಮಾಡಲಾಗಿದೆ ಆದರೆ ಸದ್ಯ ಬೇಸಿಗೆ ಇರುವದರಿಂದ ಬಿಸಿಲಿನ ಪ್ರಕರತೆ ದಿನದಿಂದ ದಿನಕ್ಕೆ ಹೆಚ್ಚಿಗೆ ಆಗುತ್ತಿರುವದರಿಂದ ಆ ತಗಡಿನ ಶೆಡ್‍ಗಳಲ್ಲಿ ಮಧ್ಯಾಹ್ನದ ಹೊತ್ತು ಕುಳಿತುಕೊಳ್ಳಲು ಸಿಬ್ಬಂದಿಗಳು ಆಗುತ್ತಿಲ್ಲಾ ಇದರಿಂದ ಬಿಸಿಲಿನ ತಾಪದಲ್ಲಿಯೇ ವಾಹನಗಳ ತಪಾಸಣೆಗೆ ಮುಂದಾಗಿರುವದು ಕಂಡುಬರುತ್ತಿದೆ.
ಕುಡಿಯಲು ನೀರಿನ ವ್ಯವಸ್ಥೆ ಇಲ್ಲಾ
ಸದರಿ ಎರಡೂ ಚೆಕ್‍ಪೋಸ್ಟಗಳಲ್ಲಿ ಕೂಡ್ರುವ ಸಿಬ್ಬಂದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಕೂಡಾ ಮಾಡಿಲ್ಲಾ ಊಟದ ಸಮಯವಾಗಲಿ ಕುಡಿಯುವ ನೀರಿನ ಬಾಯಾರಿಕೆಯಾಗಲಿ ಎಲ್ಲವನ್ನು ಸುಮಾರು ಕೀಲೋ ಮೀಟರ್ ಅಂತರದಿಂದ ಸಿಬ್ಬಂದಿಗಳೇ ತಮ್ಮ ಸ್ವಂತ ದುಡ್ಡುಕೊಟ್ಟು ತರಿಸಿಕೊಳ್ಳುವಂತಹ ಸ್ಥಿತಿ ಸಿಬ್ಬಂದಿಗಳಿಗೆ ಒದಗಿಬಂದಿರುವದು ತಾಲೂಕಾಡಳಿತ ಲೋಪ ಎತ್ತಿ ತೋರಿಸುವಂತೆ ಕಾಣುತ್ತಿದೆ.
ಸದರಿ ಸಿಬ್ಬಂದಿಗಳು ಬಿಸಿಲಿನ ತಾಪದಲ್ಲಿ ಕಾರ್ಯನಿರ್ವಹಿಸುವದನ್ನು ಕಂಡ ಕೆಲವು ಪ್ರಜ್ಞಾವಂತರು ಅವರ ಸ್ಥಿತಿಯನ್ನು ನೋಡಲಾಗದೇ ತಮ್ಮಲ್ಲಿರುವ ನೀರಿನ ಬಾಟಲ್ ಇನ್ನಿತರವನ್ನು ನೀಡಿ ಅವರ ಸಹಾಯಕ್ಕೆ ಬರುತ್ತಿರುವದು ಕಂಡು ಬರುತ್ತಿದ್ದು ಕೂಡಲೇ ಜಿಲ್ಲಾಡಳಿತ ಏಚ್ಚೆತ್ತುಕೊಂಡು ಚೇಕ್‍ಪೋಸ್ಟ ಸಿಬ್ಬಂದಿಗಳಿಗೆ ಕೂಡ್ರಲು ನೆರಳಿನ ಸೌಲಭ್ಯದ ಜೊತೆಗೆ ಅಗತ್ಯ ಬೇಕಿರುವ ಸೌಕರ್ಯಗಳನ್ನು ಒದಗಿಸಿಕೊಡಬೇಕೆಂಬುದು ಪ್ರಜ್ಞಾವಂತ ನಾಗರಿಕರ ಒತ್ತಾಸೆಯಾಗಿದೆ.