ಮಣ್ಣೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವಾಸ ಆಂದೋಲನ ತರಬೇತಿ
ಕರಜಗಿ:ಮಾ.23:ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಪಂಚಾಯತ ಕಲಬುರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ, ತಾಲೂಕ ಆರೋಗ್ಯ ಅಧಿಕಾರಿಗಳು ಅಫಜಲಪುರ,ಪ್ರಾಥಮಿಕ ಆರೋಗ್ಯ ಕೇಂದ್ರ ಮಣ್ಣೂರ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವಾಸ ಅಂದೊಲನ ತರಬೇತಿ ಕಾರ್ಯಕ್ರಮ ಜರುಗಿತು
ಆಡಳಿತ ವೈದ್ಯಾಧಿಕಾರಿ ಡಾ ಸಂಜೀವಿನಿ ರಾಠೋಡ ಹಾಗೂ ತಾಲೂಕ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎಸ್.ಬಡೆಘರ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ,
ಈ ಸಂದರ್ಭದಲ್ಲಿ ತಾಲೂಕು ಆಶಾ ಮೇಲ್ವಿಚಾರಕಿ ರೈಚಲ್ ರಾಣಿ,ಗ್ರಾಮ ಪಂಚಾಯತಿ ಸದಸ್ಯರಾದ ಮೀನಾಕ್ಷಿ ಸುತಾರ ರಾಮನಗರ ಗ್ರಾ ಪಂ ಸದಸ್ಯರಾದ ಸಂತೋಷ ರೂಪನೂರ,ಭೀಮಣ್ಣ ನಾಯಕೋಡಿ ಆರೋಗ್ಯ ನಿರಿಕ್ಷಣಾಧಿಕಾರಿ ವಿಠ್ಠಲ ಬಡಿಗೇರ, ಸುಕನ್ಯಾ ಕರಜಗಿ, ಪ್ರಕಾಶ ಬಿರಾದಾರ ಆಶಾ ಕಾರ್ಯಕರ್ತೆಯರಾದ ಭೌರಮ್ಮ ಲೋಹಾರ ಕವಿತಾ ಹಡಪದ ಶಬಾನಾ ಕೊರಬು ಸುಜಾತಾ ಪತ್ತಾರ ಗೌರಾಬಾಯಿ ಮೋಸಲಗಿ ಮಾಯಕ್ಕ ಪೂಜಾರಿ ಇತರರಿದ್ದರು