ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ ನೀಡಿ
ಭಾಲ್ಕಿ:ಮಾ.23:ಶಿಕ್ಷಕರು ಮಕ್ಕಳಿಗೆ ಮನದಟ್ಟಾಗುವಂತೆ ಪಾಠ ಮಾಡಿ,ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಪಂಚಶೀಲ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಅಭಯಕುಮಾರ ಹೇಳಿದರು.
ತಾಲೂಕಿನ ಕೆಸರಜವಳಗಾ ಗ್ರಾಮದಲ್ಲಿ ಪಂಚಶೀಲ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಸಂಗಮೇಶ್ವರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ 2023-24ನೇ ಸಾಲಿನ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಕಠೀಣ ಪರಿಶ್ರಮದ ಮೂಲಕ ಅಧ್ಯಯನ ಮಾಡಿ ಹೆಚ್ಚಿನ ಅಂಕಗಳು ಗಳಿಸಿ ಹೆತ್ತ ತಂದೆ-ತಾಯಿಗಳಿಗೆ,ಕಲಿಸಿದ ಗುರುಗಳಿಗೆ ಕೀರ್ತಿ ತರಬೇಕು ಎಂದು ತಿಳಿಸಿದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಎಮ್.ಆರ್.ಎ.ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಅಶೋಕ ರಾಜೋಳೆ,ಕಷ್ಠಪಟ್ಟು ಓದುವುದಕ್ಕಿಂತ ಇಷ್ಠಪಟ್ಟು ಓದಬೇಕು.ಪರೀಕ್ಷೆ ಸಂದರ್ಭದಲ್ಲಿ ಟಿ.ವಿ.,ಮೊಬೈಲ್‍ಗಳಿಂದ ದೂರ ಉಳಿದು,ನಿರಂತರ ಮತ್ತು ಏಕಾಗೃತೆಯಿಂದ ನೂತನ ಪರೀಕ್ಷೆ ಪದ್ದತಿಗನುಗುಣವಾಗಿ ಅಧ್ಯಯನ ಮಾಡಿದರೇ ನಿರೀಕ್ಷಿಸಿದ ಫಲಿತಾಂಶ ಪಡೆಯಲು ಸಾಧ್ಯ.ಪಂಚಶೀಲ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಲ್.ಜಿ.ಗುಪ್ತಾ ಅವರ ನಿರ್ದೇಶನದಂತೆ ಸಂಗಮೇಶ್ವರ ಪ್ರೌಢಶಾಲೆಯಲ್ಲಿ ಗ್ರಾಮೀಣ ಭಾಗದ ಬಡ ರೈತಾಪಿ ಕುಟುಂಬದ ಮಕ್ಕಳಿಗೆ ಅತ್ಯಂತ ಕಡಿಮೆ ಶುಲ್ಕದಲ್ಲಿ ಸಂಸ್ಕಾರಭರಿತ, ಗುಣಾತ್ಮಕ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಬಿಇಓ ಕಛೇರಿಯ ಬಿಆರ್‍ಪಿ ಮಹೆಂದ್ರಕುಮಾರ ಮಾನಕರ ಮಾತನಾಡಿ,ವಿದ್ಯಾರ್ಥಿಗಳು ಭಯಪಡದೇ ಪರೀಕ್ಷೆ ಬರೆಯಬೇಕು.ಕಡಿಮೆ ಅಂಕ ಪಡೆದರೂ ಮಾನಸಿಕ ಖಿನ್ನತೆಗೆ ಒಳಗಾಗದೇ ಮುಂದಿನ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದರು.
ವಿದ್ಯಾರ್ಥಿಗಳಾದ ಕು.ಸೋನಿ,ಕು.ಶ್ವೇತಾ,ಕು.ಅನುಷ್ಕಾ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಡ್ಯಾನ್ಸ್ :ಮಕ್ಕಳು ಕನ್ನಡ,ಹಿಂದಿ,ಮರಾಠಿ ಗೀತೆಗಳ ಮೂಲಕ ನೃತಿಸಿ ಎಲ್ಲರ ಗಮನ ಸೆಳೆದರು.
ಮುಖ್ಯಗುರು ಮಿಲಿಂದಕುಮಾರ ಕಾಂಬಳೆ ,ಪ್ರಭಾವತಿ ರೊಟ್ಟೆ,ಭೀಮ ಏಳನೂರೆ,ಶ್ರೀಕಾಂತ ಖೆಳಗೆ,ಡಾ.ವಿಮಲಾ,ದಯಾನಂದ,ಮಹಾದೇವ ವಾಗ್ಗೆ,ಶಿವರಾಜ ಮೇಹತ್ರೆ,ಯೋಗೇಶ,ಮಹೇಶ,ರೇಶ್ಮಾ,ಸಾಯಿನಾಥ,ಅಶ್ವೀನಿ ಕರಕಲ್ಲೆ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮುಖ್ಯಗುರು ಸತೀಶ ಗುಂಜರಗೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಶಿಕ್ಷಕಿ ರತ್ನಮ್ಮ ಪ್ರಸಣ್ಣೆ ನಿರೂಪಿಸಿದರು.ಶಿಕ್ಷಕ ಸಂಜೀವಕುಮಾರ ಖೊಬ್ರಗಡೆ ವಂದಿಸಿದರು.