ಪ್ರಶಿಕ್ಷಣಾರ್ಥಿಗಳು ಶಿಕ್ಷಕರಾಗಿ ಮಕ್ಕಳ ಮನಸ್ಸು ಗೆಲ್ಲಬೇಕು : ಡಾ ಡಿ ಕೆ ಕಾಂಬಳೆ
ಅಥಣಿ : ಮಾ.23:ಪ್ರಶಿಕ್ಷಣಾರ್ಥಿಗಳು ತರಬೇತಿ ಸಮಯದಲ್ಲಿ ಶಿಸ್ತು ಸಮಯಪ್ರಜ್ಞೆ ಮತ್ತು ನೈತಿಕ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಶಿಕ್ಷಕರಾಗಿ ಮಕ್ಕಳ ಮನಸ್ಸು ಗೆಲ್ಲಲು ಸಾಧ್ಯ ಎಂದು ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ ಡೆಪ್ಯೂಟಿ ರಿಜಿಸ್ಟ್ರರ್ ಡಾ. ಡಿ ಕೆ ಕಾಂಬಳೆ ಅವರು ಹೇಳಿದರು.
ಅವರು ಪಟ್ಟಣದ ಕೆಎಲ್ ಇ ಶಿಕ್ಷಣ ಸಂಸ್ಥೆಯ ವೈ ಜಿ ಕುಲಗುಡೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಬಿಎಡ್ ಪ್ರಶಿಕ್ಷಣಾರ್ಥಿಗಳ ಸ್ವಾಗತ ಹಾಗೂ ವಿಧ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಅನಂತರ ಶಿಕ್ಷಕ ಎಲ್ ಟಿ ಬಬಲಿ ಅವರು ಮಾತನಾಡಿ ಪ್ರಶಿಕ್ಷಣಾರ್ಥಿಗಳು ತಮ್ಮ ಜೀವನದಲ್ಲಿ ಪರಿಮಾಣಾತ್ಮಕ ನಿರ್ಧಾರಗಳಿಂದ ಮೌಲ್ಯಯುತ ಬದುಕು ಕಟ್ಟಿಕೊಳ್ಳಲು ಸಾದ್ಯವಾಗುತ್ತದೆ ಎಂದು ಹೇಳಿದರು
ಅನಂತರ ಡಾ ಆರ್ ಜಿ ವಂಟಗೂಡಿ ಅಧ್ಯಕ್ಷೀಯ ಪರ ನುಡಿ ಹೇಳಿದರು. ಸಾಂಸ್ಕøತಿಕ ಕಾರ್ಯದರ್ಶಿ ಎಮ್ ಎ ಮಠಪತಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಈ ವೇಳೆ ಆರ್ ಪಿ ಸಾಳವೆ, ಡಿ ಎಸ್ ಪಾಟೀಲ, ವಾಣಿ ದಾನಗೌಡ, ಎಮ್ ಎ ಮಠಪತಿ, ಮಂಜುನಾಥ ಚೌಗಲಾ, ಬಿ ಎಮ್ ಮಾಲಗಾಂವೆ, ವಿ ಆರ್ ಕಾಗವಾಡೆ, ಸತೀಶ ಬೆಳ್ಳಂಕಿ, ದಾನಮ್ಮ ಮಂಟೂರ, ಸುಶಾಂತ ಮಗರ, ಸಾವಿತ್ರಿ ದಾನಗರ್ ಸೇರಿದಂತೆ ಇತರ ಬೋಧಕ, ಬೋಧಕ ಸಿಬ್ಬಂದಿ ಹಾಗೂ ಪ್ರಶಿಕ್ಷಣಾರ್ಥಿಗಳು ಇದ್ದರು.