ಪ್ರಕಾಶಕ ಬಸವರಾಜ ಕೊನೇಕ್ ಅವರಿಗೆ ಸನ್ಮಾನ
ಕಲಬುರಗಿ;ಮಾ.23: ಕಲ್ಯಾಣ ಕರ್ನಾಟಕದ ಮತ್ತು ಕರ್ನಾಟಕ ದ ಪುಸ್ತಕೊದ್ಯಮಿ,ಹಾಗೂ ಶ್ರೀ ಸಿದ್ಧಲಿಂಗೇಶ್ವರ ಬುಕ್ ಡಿಪೆÇೀ ಮತ್ತು ಪ್ರಕಾಶನ ಸಂಸ್ಥೆಯ ಸಂಸ್ಥಾಪಕರಾದ ಬಸವರಾಜ ಕೊನೇಕ್ ಅವರು ಇತ್ತೀಚಿಗೆ 121 ಪುಸ್ತ ಕ ಲೋಕಾರ್ಪಣೆ ಮಾಡಿದ್ದಲ್ಲದೇ ಯುವ ಲೇಖಕರಿಗೆ, ಸಾಮಾಜಿಕ ನ್ಯಾಯದ ಪರಿಕಲ್ಪನೆ ಬಸವಣ್ಣನವರ ಸಮಾನತೆ ತತ್ವದಡಿ ಪ್ರಕಾಶನ ಹುಟ್ಟು ಹಾಕಿ,ಈ ಪ್ರದೇ ಶದ ಸೃಜನಶೀಲ ಸಾಹಿತಿಗಳ ವಾಚಿಕೆ ಮಾಡಿದ ಹಿನ್ನೆಲೆ ಯಲ್ಲಿ ಅವರಿಗೆ ಸನ್ಮಾನಿಸಲಾಯಿತು. ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಸುನೀಲ ಜಾಬಾದಿ ಡಾ.ಪೀರಪ್ಪ ಸಜ್ಜನ,ಡಾ.ಸೂಲಾಬಾಯಿ ಕಾಳಮದರಗಿ ಡಾ.ಶೈಲಜಾ ಬಾಗೇವಾಡಿ,ಡಾ.ಶೀಲಾದೇವಿ ಎಸ್.ಬಿರಾ ದಾರ,ಡಾ.ರಾಜಕುಮಾರ ಮಾಳಗೆ,ಡಾ.ವಿಜಯಕುಮಾ ರ ಬೀಳಗಿ,ಡಾ.ಮಹಾದೇವಿ ಹೆಬ್ಬಾಳೆ,ಅವರು ಮಾತ ನಾಡಿ ಪ್ರಕಾಶನದ ಕಾರ್ಯ ಅನುಕರಣೀಯ ಎಂದರು.
ಹಿರಿಯ ಸಲಹಾ ಸಮಿತಿ ಸದಸ್ಯರಾದ ಡಾ.ಗವಿಸಿದ್ಧಪ್ಪ ಪಾಟೀಲ,ಡಾ.ಶಿವರಾಜ ಪಾಟೀಲ, ಡಾ.ಚಿ.ಸಿ.ನಿಂಗಣ್ಣ, ಡಾ.ಶರಣಬಸಪ್ಪ ವಡ್ಡನಕೇರಿ ಇತರಿದ್ದರು.