ಮಹಿಳೆಯರು ಮತದಾನದ ಬಗ್ಗೆ ಜಾಗೃತರಾಗಿರುವುದು ಅತ್ಯಾವಶ್ಯಕ:ವೀರಭದ್ರಪ್ಪ ಉಪ್ಪಿನ
ಬೀದರ:ಮಾ.23:ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದ ಮತದಾನ ಮಾಡುವಲ್ಲಿ ಮಹಿಳೆಯರು ಕಾಳಜಿ ವಹಿಸಬೇಕೆಂದು ಪ.ವೈ ವಿ.ವಿ ಯಲ್ಲಿ ನಿವೃತ್ತ ಉಪ ಹಣಕಾಸು ಅಧಿಕಾರಿಯಾದ ವೀರಭದ್ರಪ್ಪ ಉಪ್ಪಿನರವರು ಕರೆ ನೀಡಿದರು. ಅವರು ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ, ಅನಮಾಸಪಲ್ಲಿ- ಕಡತಲ್ ನಲ್ಲಿರುವ (ಕೈಲಾಸ ಪುರಿ) ಪಿರಾಮಿಡ್ ವ್ಯಾಲಿಯಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಮಹಿಳೆಯರನ್ನುದ್ದೆಶಿಸಿ ಮಾತನಾಡುತ್ತಿದ್ದರು. ಮಹಿಳೆಯರು/ಗೃಹಿಣಿಯರಿಗೆ ಮನೆಯಲ್ಲಿ ಹೆಚ್ಚಿನ ಕೆಲಸದ ಒತ್ತಡವಿರುತ್ತದೆ. ಅಂತಹ ಕೆಲಸದ ಒತ್ತಡದ ಮಧ್ಯದಲ್ಲೂ ಮತದಾನದ ದಿನದಂದು ಸಮಯದ ಅವಕಾಶ ಮಾಡಿಕೊಂಡು, ತನ್ನ ಸಹಿತ ಮನೆಯ ಎಲ್ಲ ಸದಸ್ಯರು ಮತದಾನ ಕೇಂದ್ರಕ್ಕೆ ಹೋಗಿ ಮತದಾನ ಮಾಡುವಂತೆ ನೋಡಿಕೊಳ್ಳಬೇಕೆಂದು ಮಹಿಳೆಯರಿಗೆ ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಯೋಗ ತಂಡದ ಹಿರಿಯ ಮೇಲ್ವಿಚಾರಕರಾದ ಗಂಗಪ್ಪ ಸಾವಳೆಯವರು ಮತದಾನದ ದಿನವನ್ನು ಹಬ್ಬವನ್ನಾಗಿ ಆಚರಿಸಬೇಕೆಂದು ಅಭಿಪ್ರಾಯಪಟ್ಟರು. ರಮೇಶ್ ಕಪಲಾಪುರೆಯವರು ಸ್ವಾಗತಿಸಿದರು. ಕೊನೆಯಲ್ಲಿ ಅಶೋಕ್ ಶೀಲವಂತ್ ರವರು ವಂದಿಸಿದರು. ಬಳ್ಳಾರಿಯ ಪುಷ್ಪಾರವರು ಧ್ಯಾನದ ಪ್ರಾತ್ಯಕ್ಷಿತೆ ನಡೆಸಿಕೊಟ್ಟರು.
ರಾಮಕೃಷ್ಣ ಮುನಿಗ್ಯಾಲ, ವಿಜಯಲಕ್ಷ್ಮಿ ಸಾವಳೇ, ಜಗ್ಗು ಶಿವಯೋಗಿ, ಮಲ್ಲಿಕಾರ್ಜುನ ಪಾಟೀಲ್, ವೀರಶೆಟ್ಟಿ, ಸಂಜು ಪಾಟೀಲ, ಸಂಜುಕುಮಾರ ಶೀಲವಂತ,ಬಸವರಾಜ ತೋರಣ, ಡಾ. ಪೂಜಾ ಸೀಲವಂತ, ಚಂದ್ರಶೇಖರ್ ದೇವಣಿ,ಗಂಗಾಧರ್ ಪಾಟೀಲ್, ರಾಮಚಂದ್ರ ಗಜರೆ, ಅರುಣಾ,ಪುಷ್ಪಾ, ವೀಣಾ, ವಿಜಯಲಕ್ಷ್ಮಿ, ಸುಲೋಚನಾ, ಸರೋಜಿನಿ ಪಾಟಿಲ್, ಭುವನೇಶ್ವರಿ, ಸಾಕ್ಷಿ, ಸುಲೋಚನಾ ಪಾಟೀಲ್, ಸುನೀತಾ, ಜ್ಯೋತಿ, ಸುನೀತಾ ಮುಂತಾದವರು ಹಾಜರಿದ್ದರು.