ಪುಣ್ಯಾಶ್ರಮದಲ್ಲಿ ರೇಣುಕಾಚಾರ್ಯ ಜಯಂತಿ
ಬೀದರ್: ಮಾ.23:ನಗರದ ಹೊರವಲಯದ ಬೀದರ್-ಭಾಲ್ಕಿ ರಸ್ತೆಯಲ್ಲಿರುವ ಜಗದ್ಗುರು ಪಂಚಾಚಾರ್ಯ ಪುಣ್ಯಾಶ್ರಮದಲ್ಲಿ ಶ್ರೀ ರೇಣುಕಾಚಾರ್ಯ ಮಂದಿರ ಹಾಗೂ ಶ್ರೀ ಜಗದ್ಗುರು ಪಂಚಾಚಾರ್ಯ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ಸಹಯೋಗದಲ್ಲಿ ಶ್ರೀ ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮ ಜರುಗಿತ್ತು
ತಮನೂರಿನ ಪೂಜ್ಯ ಷ.ಬ್ರ ಶ್ರೀ ಶಿವಾನಂದ ಶಿವಾಚಾರ್ಯರು ರೇಣುಕಾಚಾರ್ಯರ ಮೂರ್ತಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನಗೈದು ಮಾತನಾಡಿದರು.
ರೇಣುಕಾದಿ ಪಂಚಾಚಾರ್ಯರು ಕೇವಲ ಒಂದು ಧರ್ಮ ಅಥವಾ ಜಾತಿಗೆ ಸೀಮಿತವಾಗಿರದೆ, ಎಲ್ಲ ಧರ್ಮದ ಎಲ್ಲ ಜಾತಿ-ಜನಾಂಗಗಳ ದೈವತ್ವವಾಗಿ ಅವರಿಗೆ ಒಳ್ಳೆಯದನ್ನೇ ಕರುಣಿಸಿದರು. ಇಂದು ಬಹುತೇಕ ಎಲ್ಲ ಜಾತಿ ಜನಾಂಗದ ಆದಿ ಗುರುವಾಗಿ ರೇಣುಕಾಚಾರ್ಯರು ಗುರುತಿಸಿಕೊಂಡಿರುವರು. ಇಂತಹ ಮಹಾತ್ಮರ ಜಯಂತಿಯನ್ನು ಕಳೆದ ಎರಡು ವರ್ಷಗಳಿಂದ ಕರ್ನಾಟಕ ಸರ್ಕಾರ ಆಚರಿಸಿಕೊಂಡು ಬರುತ್ತಿರುವುದು ಪ್ರಶಂಶನೀಯ ಕಾರ್ಯವಾಗಿದೆ ಎಂದು ಬಣ್ಣಿಸಿದರು.
ನಂತರ ಶ್ರೀಗಳ ಪಾದಪೂಜೆ, ತದನಂತರ ಮಹಾಪ್ರಸಾದ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ಡಾ.ಶಿವಾನಂದ ಚಿಕಮಠ, ಶ್ರೀ ರೇಣುಕಾಚಾರ್ಯ ಮಂದಿರ ಹಾಗೂ ಶ್ರೀ ಜಗದ್ಗುರು ಪಂಚಾಚಾರ್ಯ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ವೇದಮೂರ್ತಿ ಷಣ್ಮುಖಯ್ಯ ಸ್ವಾಮಿ ದಂಪತಿಗಳು, ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಖಜಾಂಚಿ ಶ್ರೀಕಾಂತ ಸ್ವಾಮಿ ಸೋಲಪುರ, ನಿರ್ದೇಶಕರಾದ ಬಸವರಾಜ ಸ್ವಾಮಿ, ಕಾರ್ತಿಕ ಮಠಪತಿ, ಪುಣ್ಯಾಶ್ರಮದ ಸದ್ಭಕ್ತರಾದ ಮಂಜುನಾಥ ಬಿರಾದಾರ ದಂಪತಿಗಳು, ಮಲ್ಲಿಕಾರ್ಜುನ್ ಚಿಕ್ಕಪೇಟೆ, ಓಂಕಾರ ಸ್ವಾಮಿ ದಂಪತಿಗಳು ಸೇರಿದಂತೆ ಅನೇಕ ಸದ್ಭಕ್ತರು ತಾಯಂದಿರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು