26ರಿಂದ ಸಶಸ್ತ್ರ ಪಡೆಗಳು ಮತ್ತು ಅರೆಸೇನಾ ಪಡೆಗಳ ಪೂರ್ವ ಸಿದ್ಧತಾ ಶಿಬಿರ ಆರಂಭ: ಕರ್ನಲ್ ಶರಣಪ್ಪ ಸಿಕೆನಪುರೆ
ಬೀದರ್:ಮಾ.23: ಈ ತಿಂಗಳ 26ರಿಂದ ನಗರದ ಗ್ಲೋಬಲ್ ಸೈನಿಕ ಅಕಾಡೆಮಿ ಹಾಗೂ ಕಲಬುರಗಿಯ ವಿಕಾಸ ಅಕಾಡೆಮಿಗಳ ಸಂಯುಕ್ತಾಶ್ರಯದಲ್ಲಿ ಸಶಸ್ತ್ರ ಪಡೆಗಳು ಮತ್ತು ಅರೆಸೇನಾ ಪಡೆಗಳ ಪೂರ್ವ ಸಿದ್ಧತಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಗ್ಲೋಬಲ್ ಸೈನಿಕ ಅಕಾಡೆಮಿ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೆನಪುರೆ ತಿಳಿಸಿದರು.
ಶುಕ್ರವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಇದು ಪೂರ್ವ ಸೇನಾ ತರಬೇತಿ ಶಿಬಿರದ 4ನೇ ಬ್ಯಾಚ್ ಆಗಿದ್ದು, ಕಲ್ಯಾಣ ಕರ್ನಾಟಕ ಭಾಗದ 17-23 ವರ್ಷದ ಎಲ್ಲ ಅಭ್ಯರ್ಥಿಗಳು ಆನ್ನೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಉಚಿತ ವಸತಿ ಮತ್ತು ಊಟ ಸೌಲಭ್ಯ ನೀಡಲಾಗುವುದು. ಈಗಾಗಲೇ ಮೂರು ಬ್ಯಾಚ್‍ಗಳನ್ನು ಯಶಸ್ವಿಯಾಗಿ ಮುಗಿಸಿ ಸುಮಾರು 471ಕ್ಕೂ ಹೆಚ್ಚು ಅಭ್ಯರ್ಥಿಗಳು ಸೇನಾ ತರಬೇತಿಗೆ ಉತ್ತಿರ್ಣರಾಗಿರುವುದು ಕಲ್ಯಾಣ ಕರ್ನಾಟಕಕ್ಕೆ ಹೆಮ್ಮೆಯ ವಿಷಯವಾಗಿದೆ. ಹಲವು ವಿಭಾಗಗಳಲ್ಲಿ ಸೇನಾ ನೇಮಕಾತಿಗೆ ಅರ್ಜಿ ಕರೆದಿದ್ದರ ನಿಮಿತ್ತ 4ನೇ ಅವಧಿಗೆ ತರಬೇತಿ ಹಮ್ಮಿಕೊಳ್ಳಲಾಗುತ್ತಿದೆ. ನನ್ನ ಹಾಗೂ ಬಸವರಾಜ ಪಾಟೀಲ ಸೇಡಂ ಅವರ ನೇತೃತ್ವದ ವಿಕಾಸ ಅಕಾಡೆಮಿ ಸಹಯೋಗದಲ್ಲಿ ಬದಲಾವಣೆ ಮಾಡುವ ಉದ್ದೇಶ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಈ ಭಾಗದ ಬಾಲಕ, ಬಾಲಕಿಯರನ್ನು ತರಬೇತಿಗೊಳಿಸಿ ಅವರನ್ನು ದೇಶ ಸೇವೆಗೆ ಅಣಿಗೊಳಿಸಲಾಗುವುದು. ಸಿಬಿಟಿ ಪರೀಕ್ಷೆಯ) ಸಿದ್ಧತೆಗಾಗಿ ಮಾದರಿ ಟೆಸ್ಟ್ ಬಿಡಿಸಲು ನೆರವಾಗುವಂತೆ ಮೋಕ ಟೆಸ್ಸಾಗಿ ಕಂಪ್ಯೂಟರ್ ಸೌಲಭ್ಯವನ್ನೂ ಜಂಟಿ ಸಂಸ್ಥೆಗಳು ಒದಗಿಸಿ ಕೊಡಲಿವೆ ಎಂದ ಅವರು, ದೈಹಿಕ ಪರಿಕ್ಷೆಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 7795354717, 9972766950ಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.
ಬೇಸಿಗೆ ಶಿಬಿರ ಆಯೋಜನೆ: ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ಏಪ್ರಿಲ 16ರಿಂದ 30ರ ವರೆಗೆ 15 ದಿನಗಳ ಕಾಲ ಬೇಸಿಗೆ ಶಿಬಿರ ಆಯೋಜಿಸಲಾಗಿದೆ. ಶಿಬಿರದ ಸಮಯ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಇದ್ದು 3 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಅವಕಾಶ ಕಲ್ಪಿಸಿದ್ದು ಬೆಳಗಿನ ಉಪಹಾರ ಮತ್ತು ಸಾರಿಗೆ ಸೌಲಭ್ಯ ಒದಗಿಸಲಾಗುವುದು. ಶಿಬಿರದಲ್ಲಿ ಮಕ್ಕಳಿಗೆ ಹಲವಾರು ಉಲ್ಲಾಸದ ಮೋಜಿನ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಶೂಟಿಂಗ್, ಈಜುಗಾರಿಕೆ, ಸ್ಕೆಟಿಂಗ್, ಒಬೋಕಲ್ ಕೋರ್ಸ್, ನೃತ್ಯ, ಸಂಗೀತ, ಚಿತ್ರಕಲೆ, ಟ್ರೆಕ್ಕಿಂಗ್, ಟೇಬಲ್ ಟೆನಿಸ್, ಪಿ. ಡಿ. ಎಲ್.ಎಸ್ ಇನ್ನಿತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ನುರಿತ ಅನುಭವಿ ಮತ್ತು ರಾಷ್ಟ್ರೀಯ ತರಬೇತುದಾರರಿಂದ ಮಕ್ಕಳಿಗೆ ತರಬೇತಿ ನೀಡಲಾಗುವುದು. ವ್ಯಕ್ತಿತ್ವ ನಿರ್ಮಾಣ, ಕ್ರೀಡಾ ಆಸಕ್ತಿ, ಮನೋಬಲ ಹೆಚ್ಚಳ, ದೈಹಿಕ ಆರೋಗ್ಯ, ,ನಾಯಕತ್ವ ಗುಣ, ಆತ್ಮವಿಶ್ವಾಸ ಹೆಚ್ಚಳ ಮುಂತಾದ ಕಲೆಗಳನ್ನು ಮಕ್ಕಳಲ್ಲಿ ಬೆಳೆಸುವುದು ಈ ಬೇಸಿಗೆ ಶಿಬಿರದ ಮುಖ್ಯ ಉದ್ದೇಶವಾಗಿದೆ. ಇದು ಜಿಲ್ಲೆಯ ವಿದ್ಯಾರ್ಥಿಗಳಿಗೆ ಒಳ್ಳೆ ಅವಕಾಶ ಇದಾಗಿದ್ದು ಶಿಬಿರದಲ್ಲಿ ಪಾಲ್ಗೊಂಡು ಇದರ ಲಾಭ ಪಡೆದುಕೊಳ್ಳಬೇಕು ಎಂದು ಕರ್ನಲ್ ಶರಣಪ್ಪ ಸಿಕೇನ್ಸುರೆ ಅವರು ತಿಳಿಸಿದರು.
ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಅವರು ಈ ಸಂದರ್ಭದಲ್ಲಿ ಮಾತನಾಡಿ, ಗ್ಲೋಬಲ್ ಸೈನಿಕ ಅಕಾಡೆಮಿ ಹಾಗೂ ವಿಕಾಸ ಅಕಾಡೆಮಿಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿಯ ವರೆಗೆ ನಾಲ್ಕು ತರಬೇತಿಗಳು ಮುಗಿದಿದ್ದು ಒಂದು ಜಿಲ್ಲಾಡಳಿತದ ಸಹಭಾಗಿತ್ವದಲ್ಲಿ ಮುಕ್ಕ ಮೂರು ಗ್ಲೋಬಲ್ ಸೈನಿಕ ಅಕಾಡೆಮಿ ಹಾಗೂ ಬಸವರಾಜ ಪಟೀಲ ಸೇಡಂ ಅವರ ಸಹಭಾಗಿತ್ವದಲ್ಲಿದ್ದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘಗಳ ಸಂಯುಕ್ತಾಶ್ರಯದಲ್ಲಿ ಜರುಗಿವೆ. ಸುಮಾರು 600 ಯುವಜನರಿಗೆ ಅಗ್ನಿವೀರ ಯೋಜನೆ ಅಡಿ ತರಬೇತಿ ನೀಡಲಾಗಿದ್ದು, ಕರ್ನಲ್ ಅವರು ಈ ಜಿಲ್ಲೆಯ ದೇಶ ಸೇವೆ ಮಾಡಲಿಚ್ಛಿಸುವ ಯುವಜನರ ಪಾಲಿಗೆ ಕಮಾಂಡೊ ಇದ್ದಂತೆ. ಅವರ ದೇಶ ಸಂರಕ್ಷಣೆಯ ಕಾಳಜಿಗೆ ವಿಕಾಸ ಅಕಾಡೆಮಿ ಕೈ ಜೋಡಿಸಿರುವುದು ನಮ್ಮ ಸೌಭಾಗ್ಯ ಎಂದರು.