ಲೋಕಸಭಾ ಚುನಾವಣೆ ಪ್ರಯುಕ್ತ ರೂಟ್ ಮಾರ್ಚ್ ನಡೆಸಿದ ಪೊಲೀಸರು
ಅಫಜಲಪುರ:ಮಾ.23: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆ ತಾಲೂಕಿನ ಜನತೆ ಮುಕ್ತವಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಮತಾಧಿಕಾರದ ಹಕ್ಕನ್ನು ಚಲಾಯಿಸಿ ಎಂಬ ಸಂದೇಶವನ್ನು ರವಾನಿಸಲಾಯಿತು.
ಪಥಸಂಚಲನದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ 100 ಸಿಬ್ಬಂದಿ, ಜಿಲ್ಲಾ ಪೆÇಲೀಸ್ ಸಶಸ್ತ್ರ ಪಡೆಯ 25 ಹಾಗೂ ಸಿವಿಲ್ ಪೆÇಲೀಸ್ ನ ಸುಮಾರು 50 ಜನ ಸಿಬ್ಬಂದಿಗಳಿಂದ ಶುಕ್ರವಾರ ಸಂಜೆ ಅಫಜಲಪುರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರೂಟ್ ಮಾರ್ಚ್ ನಡೆಸುವ ಮೂಲಕ ಸ್ಥಳೀಯ ನಾಗರಿಕರಲ್ಲಿ ಆತ್ಮಸ್ಥೈರ್ಯ ಮತ್ತು ಧೈರ್ಯ ತುಂಬಲಾಯಿತು.
ಪಥಸಂಚಲನದ ನೇತೃತ್ವವನ್ನು ಸಿಪಿಐ ಚನ್ನಯ್ಯ ಹಿರೇಮಠ ವಹಿಸಿಕೊಂಡರು. ಪಿ.ಎಸ್.ಐ ಮೆಹಬೂಬ ಅಲಿ ಸೇರಿದಂತೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಅಧಿಕಾರಿಗಳು ರೂಟ್ ಮಾರ್ಚ್ ನಲ್ಲಿ ಪಾಲ್ಗೊಂಡಿದ್ದರು.