ಬೀದರನಲ್ಲಿ ರೇಣುಕಾಚಾರ್ಯರ ವೃತ್ತ ನಿರ್ಮಾಣವಾಗಲಿ : ಡಾ. ರಾಜಶೇಖರ ಸ್ವಾಮಿ
ಬೀದರ್: ಮಾ.23:ಸರ್ಕಾರದ ವತಿಯಿಂದ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ ಮಾಡುತ್ತಿರುವುದು ಸಂತೋಷದ ಸಂಗತಿ ಆದರೆ ಪದ್ಧತಿ ಪ್ರಕಾರ ಮಹಾತ್ಮರ ವೃತ್ತಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಯಂತಿ ಆಚರಣೆ ಮಾಡುತ್ತಾರೆ. ಆದರೆ ಜಗದ್ಗುರು ರೇಣುಕಾಚಾರ್ಯರ ಪುತ್ಥಳಿಗೆ ಪೂಜೆ ಸಲ್ಲಿಸಲು ವೃತ್ತವೇ ಇಲ್ಲ. ಆದ್ದರಿಂದ ನಗರದಲ್ಲಿ ವೃತ್ತ ನಿರ್ಮಾಣವಾಗಲಿ ಎಂದು ನೌಬಾದ ಜ್ಞಾನಶಿವಯೋಗಾಶ್ರಮದ ಪೂಜ್ಯ ಶ್ರೀ ಡಾ. ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಜಿಲ್ಲಾಡಳಿತ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಜಗದ್ಗುರು ರೇಣುಕಾಚಾರ್ಯ ಜಯಂತಿ ಪ್ರಯುಕ್ತ ಪೂಜೆ ಸಲ್ಲಿಸಿ ಮಾತನಾಡಿದರು.
1247 ರ ಕೊಲ್ಲಿಪಾಕದಲ್ಲಿ ಲಭಿಸಿದ ಶಾಸನದ ಪ್ರಕಾರ ಜಗದ್ಗುರು ರೇಣುಕಾಚಾರ್ಯರು ವೀರಶೈವ ಲಿಂಗಾಯತ ಮತಸ್ಥಾಪಕರಾಗಿ ಜಗ ಉದ್ಧರಿಸಲು ಬಂದ ಮಹಾತ್ಮರಾಗಿದ್ದಾರೆ. ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆಚರಿಸಬೇಕೆಂದು ಪ್ರತಿಪಾದಿಸಿದರು.
ತಹಸಿಲ್ದಾರ ಕಿರಣಕುಮಾರ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು.
ಇದೇ ವೇಳೆ ಕೇಂದ್ರ ಸಮನ್ವಯ, ಜಾಗೃತಿ, ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷ ಡಾ. ವೈಜಿನಾಥ ಕಮಠಾಣೆ, ಏಕತಾ ಫೌಂಡೇಶನ್ ಅಧ್ಯಕ್ಷ ರವೀಂದ್ರ ಸ್ವಾಮಿ, ವಿಶ್ವ ಹಿಂದೂ ಪರಿಷತ್ತಿನ ಪ್ರಾಂತೀಯ ಸದಸ್ಯ ರಾಮಕೃಷ್ಣನ್ ಸಾಳೆ, ಓಂಪ್ರಕಾಶ್ ರೊಟ್ಟೆ, ಜಗದೀಶ ಬಿರಾದಾರ, ಮಹಾಸಭೆ ಯುವ ಘಟಕದ ಅಧ್ಯಕ್ಷ ಸಂಗಮೇಶ ಮೂಲಗೆ, ಕಾರ್ತಿಕ ಸ್ವಾಮಿ ಮಠಪತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು