ಒತ್ತಾಯಪೂರ್ವಕವಾಗಿ ಬಣ್ಣ ಎರಚದೇ, ಶಾಂತ ರೀತಿಯಿಂದ ಹಬ್ಬ ಆಚರಿಸಿ
ಸಂಜೆವಾಣಿ ವಾರ್ತೆ
ಸಿಂಧನೂರು.ಮಾ.೨೩- ಆರೋಗ್ಯಕ್ಕೆ ಮಾರಕವಾದ ಬಣ್ಣ ಗಳನ್ನು ಬಳಸದೇ ಯಾರ ಮೇಲೆ ಒತ್ತಾಯ ಪೂರ್ವಕ ವಾಗಿ ಬಣ್ಣಗಳನ್ನು ಹಾಕಬೇಡಿ ಶಾಂತ ರೀತಿಯಿಂದ ಹೋಳಿ ಹಬ್ಬವನ್ನು ಆಚರಿಸಿ ಎಂದು ಡಿವಾಯ್‌ಎಸ್ಪಿ ಬಿ.ಎಸ್.ತಳವಾರ ಹೇಳಿದರು.
ನಗರ ಠಾಣೆಯಲ್ಲಿ ಹೋಳಿ ಹಬ್ಬದ ಪ್ರಯುಕ್ತ ಕರೆದ ಪೂರ್ವ ಬಾವಿ ಸಭೆ ಉದ್ದೇಶಿಸಿ ಮಾತನಾಡುತ್ತಾ ಈ ಬಾರಿ ನೀರಿನ ಅಭಾವ ಇರುವುದರಿಂದ ತಲೆಗಳಿಗೆ ಮೊಟ್ಟೆ ಹೊಡೆಯುವುದು, ಗ್ರೀಸ್ ಸೇರಿದಂತೆ ಇತರ ಮಾರಕ ಎಣ್ಣೆಗಳನ್ನು ಬಳಸಿ ಹಬ್ಬ ಆಚರಿಸದಿರಿ ಸರಳ, ಸೌಹಾರ್ದತೆಯಿಂದ ಬಣ್ಣದ ಹಬ್ಬ ಆಚರಿಸಿ. ಯಾವುದೇ ಅಹಿತಕರ ಘಟನೆಗಳಿಗೆ ಮುಂದಾಗದೇ ಪರಸ್ಪರ ಶಾಂತಿ-ಸೌಹಾರ್ದತೆಯಿಂದ ಹಬ್ಬ ಆಚರಿಸಿ ಎಂದು ಸಾರ್ವಜನಿಕರಿಗೆ ಕಿವಿ ಮಾತು ಹೇಳಿದರು.
ಮಾ.೨೫ ರಂದು ಎಸ್.ಎಸ್.ಎಲ್.ಸಿ ಪರೀಕ್ಷೆ ಪ್ರಾರಂಭವಾಗುತ್ತಿದ್ದು ವಿದ್ಯಾರ್ಥಿಗಳಿಗೆ ತೊಂದರೆ ಯಾಗ ಬಾರದು ಮತ್ತು ರಂಜಾನ್ ಹಬ್ಬ ಇರುವುದರಿಂದ ಯಾರಿಗೂ ತೊಂದರೆಯಾಗದಂತೆ ಹಬ್ಬ ಆಚರಿಸಿ ಮತ್ತು ಅತಿಯಾದ ಶಬ್ದ ಹೊರಸೂಸುವ ಬೈಕ್‌ಗಳನ್ನು ಓಡಿಸುವ ಮೂಲಕ ಸಾರ್ವಜನಿಕರಿಗೆ ತೊಂದರೆ ನೀಡಿದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದರು.
ನಗರ ಠಾಣೆ ಪಿ.ಐ ಸುದೀರ್ ಬೆಂಕಿ, ನಗರ ಠಾಣೆ ಪಿಎಸ್‌ಐ ವಿ.ಶ್ರೀನಿವಾಸಲು ಸೇರಿದಂತೆ ವಿವಿಧ ಸಂಘಟನೆ ಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.