ಶ್ರೀ ವಿಠ್ಠಲ ರುಕ್ಮೀಣಿ ದೇವಸ್ಥಾನದ 16 ನೇ ವಾರ್ಷಿಕೋತ್ಸವ
ಮುನವಳ್ಳಿ,ಮಾ23: ಪಟ್ಟಣದ ಗೋಂದಳಿ ಗಲ್ಲಿಯಲ್ಲಿರುವ ಶ್ರೀ ವಿಠ್ಠಲ ರುಕ್ಮೀಣಿ ದೇವಸ್ಥಾನದ 19ನೇ ವಾರ್ಷಿಕೋತ್ಸವ ಜರುಗಿತು.
ಸೋಮಶೇಖರ ಮಠದ ಶ್ರೀ ಮುರುಘೇಂದ್ರ ಶ್ರೀಗಳ ಸಾನಿದ್ಯವಹಿಸಿ ಆಶಿರ್ವಚನದಲ್ಲಿ ಭಜನೆ, ಸಂಕೀರ್ತನಗಳಿಂದ ಮನಸ್ಸು ಪಾವನವಾಗುವುದು ಮನಸ್ಸು ಏಕಾಗ್ರತೆ ಹೊಂದಲು ಭಜನೆ ಸಹಕಾರಿ ಯಾಗುವುದು. ಅಭಂಗಗಳಲ್ಲಿ ಜೀವನದ ಸಾರವಿದ್ದು ಪ್ರತಿನಿತ್ಯ ಪಠಿಸಿದರೆ ಜೀವನದಲ್ಲಿ ಬರುವ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಫಲಾಪೇಕ್ಷೆಯಿಲ್ಲದೇ ಏಕಾಗ್ರತೆ ಯಿಂದ ಭಗವಂತನ ಸ್ಮರಣೆ ಮಾಡಿದಲ್ಲಿ ಸರ್ವ ಕಾರ್ಯಗಳು ಯಶಸ್ವಿಯಾಗುವದು ಎಂದರು.
ಪಂಢರಪುರದ ಚೈತನ್ಯ ಸದ್ಗುರು ಮನು ಮಹಾರಾಜಲಾಖೆ ಪ್ರವಚನ ನೀಡಿದರು. ವಾರಕರಿ, ಗೊಂದಳಿ, ಸಮಾಜದ ಸದಸ್ಯರು ಹಾಗೂ ಬಕ್ತಾಧಿಗಳು ಉಪಸ್ಥಿತರಿದ್ದರು.