ಸಿಂಧನೂರು ಉಪವಿಭಾಗದಲ್ಲಿ ೬ ಚೆಕ್‌ಪೊಸ್ಟ್: ದಾಖಲೆ ರಹಿತ ಹಣ ವಶ
ಸಂಜೆವಾಣಿ ವಾರ್ತೆ
ಸಿಂಧನೂರು.ಮಾ.೨೩- ಸಿಂಧನೂರು ಉಪ ವಿಭಾಗದ ವ್ಯಾಪ್ತಿಯಲ್ಲಿ ಆರು ಚೆಕ್ ಪೊಸ್ಟ್ ಗಳಿದ್ದು ದಾಖಲೆ ರಹಿತ ಹಣ ಸಾಗಾಣಿಕೆ ನಿಷಿದ್ದ ಎಂದು ಡಿವಾಯ್‌ಎಸ್ಪಿ ಬಿ.ಎಸ್.ತಳವಾರ ತಿಳಿಸಿದರು.
ಸಿಂಧನೂರು ಉಪವಿಭಾಗ ವ್ಯಾಪ್ತಿಯಲ್ಲಿ ದಡೆಸ್ಗೂರು ಚೆಕ್ ಪೊಸ್ಟ್, ಪೋತ್ನಾಳ ಸಮೀಪದ ಗಾಳಿ ದುರ್ಗಮ್ಮ, ಉಮಲೂಟಿ,ಶಾಂತಿ ನಗರ (ಹಂಚಿನಾಳ ಕ್ಯಾಂಪ್) ಮಾನವಿಯ ರಾಜಲಬಂಡಾ, ಸಿರವಾರ ವ್ಯಾಪ್ತಿಯ ದೇವದುರ್ಗ ಕ್ರಾಸ್ ಒಟ್ಟು ಆರು ಚೆಕ್ ಪೊಸ್ಟ್ ಗಳಿದ್ದು, ಒಟ್ಟು ಮೂರು ಅವಧಿಯಲ್ಲಿ ಪಿಡಿಒ, ಅಬಕಾರಿ, ವಾಣಿಜ್ಯ ವಿಭಾಗ, ಪೋಲಿಸ್ ಅಧಿಕಾರಿಗಳು ಕರ್ತವ್ಯ ದಲ್ಲಿರುತ್ತಾರೆ. ತಾಲೂಕಿನ ಫೊತ್ನಾಳ ಹತ್ತಿರದ ಗಾಳಿ ದುರ್ಗಮ್ಮ ಚೆಕ್ ಪೋಸ್ಟ್ ಬಳಿ ಮೂರು ಲಕ್ಷ ರೂ ವಶಕ್ಕೆ ಪಡೆಯಲಾಗಿದೆ, ವಶಕ್ಕೆ ಪಡೆದು ಜಿಲ್ಲಾ ಪಂಚಾಯತ ಸಿಇಒ ಅವರಿಗೆ ಒಪ್ಪಿಸಲಾಗುತ್ತದೆ ನಂತರ ಸೂಕ್ತ ದಾಖಲೆಗಳನ್ನು ಸಲ್ಲಿಸಿದಲ್ಲಿ ಮರಳಿ ಸಂಬಂಧಿತರಿಗೆ ಒಪ್ಪಿಸುತ್ತೆವೆಂದು ಸಿಂಧನೂರು ಡಿವಾಯ್‌ಎಸ್ಪಿ ಹೇಳಿದರು.
ಉಮಲೂಟಿ: ಉಮಲೂಟಿ ಚೆಕ್ ಪೊಸ್ಟ್ ನಲ್ಲಿ ಮಧ್ಯಾಹ್ನದ ಸಮಯದಲ್ಲಿ ಎರಡು ಲಕ್ಷ ರೂ ವಶಕ್ಕೆ ಪಡೆದು ಮಸ್ಕಿ ತಹಶಿಲ್ದಾರರಿಗೆ ಒಪ್ಪಿಸಲಾಗಿದೆಂದು ತುರವಿಹಾಳ ಪಿಎಸ್‌ಐ ನಾಗರಾಜ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಎಡಿ ಅಮರಗುಂಡಪ್ಪ ತುರವಿಹಾಳ, ಗುಂಡ ಪಿಡಿಒ ಸುದೀಪ, ಉಮಲೂಟಿ ಪಿಡಿಒ ಮಹಾಂತೇಶ ,ತುರವಿಹಾಳ ಪಿಎಸ್‌ಐ ಸ್ಯಾಮುಯಲ್ ಡಿ, ವಿಶ್ವನಾಥ ಕುರಿ, ಹೆಚ್.ಸಿ ಶಿವರಾಜ, ಪೆದೆಗಳಾದ ವಿಶ್ವನಾಥ ರಡ್ಡಿ ಉಪಸ್ಥಿತರಿದ್ದರು.