ದಶಮೋಧ್ಯಾಯ ಭಗವದ್ಗೀತಾ ಅಭಿಯಾನ
ಸತ್ತೂರು,ಮಾ23 : ಶ್ರೀಮನ್ ಮಧ್ವಾಚಾರ್ಯ ಮೂಲ ಸಂಸ್ಥಾನ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಅನುಗ್ರಹದಿಂದ ಭಾರತದಾದ್ಯಂತ ಹಮ್ಮಿಕೊಂಡಿರುವ, ಶ್ರೀಮದ್ ಭಗವದ್ಗೀತಾ ಅಭಿಯಾನ ದಶಮೋಧ್ಯಾಯ ಕಾರ್ಯಕ್ರಮವನ್ನು, ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿರುವ ವನಸಿರಿನಗರದ ಪೆÇ್ರ. ಸಿ .ಕೆ. ಕುಲಕರ್ಣಿ ಇವರ ಮನೆಯಲ್ಲಿ, ದಿನಾಂಕ 23ಮತ್ತು 24ನೇ ಮಾರ್ಚ್ 2024ರಂದು ಸಾಯಂಕಾಲ 6-00 ರಿಂದ 7-00 ರ ವರಗೆ ಜರುಗಲಿದೆ.
ವಿಶೇಷ ಉಪನ್ಯಾಸಕರಾಗಿ ಪಂ. ಕೇಶವಾಚಾರ್ಯರು ಆಗಮಿಸಲಿದ್ದಾರೆ. ಇದಕ್ಕೂ ಪೂರ್ವ ನಾರಾಯಣಿ ಭಜನಾ ಮಂಡಳಿಯಿಂದ ಭಜನೆ ಹಾಗೂ ಬಳಗದ ಸದಸ್ಯರಿಂದ ಹರಿವಾಯುಗುರುಗಳ ಪಾರಾಯಣಗಳು ನಡೆಯಲಿದೆ. ಸಕಲ ಸದ್ಭಕ್ತರು ಸಕಾಲಕ್ಕೆ ಆಗಮಿಸಿಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 63 61 83 57 10ನ್ನು ಸಂಪರ್ಕಿಸಲು ಬಳಗದ ಕಾರ್ಯದರ್ಶಿಯಾದ ಅವಧಾನಿಯರು ತಿಳಿಸಿದ್ದಾರೆ.