ಪೌರತ್ವ ತರಬೇತಿ ಶಿಬಿರ
ಹುಬ್ಬಳ್ಳಿ, ಮಾ23: ನವನಗರದ ಚಿಕ್ಕನಕೊಪ್ಪದ ಶ್ರೀ ಚನ್ನವೀರ ಶರಣರ ಅಂಧರ ಕಲ್ಯಾಣ ಆಶ್ರಮ ಸಭಾ ಭವನದಲ್ಲಿ ಕೆ ಎಲ್ ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ ವಿದ್ಯಾನಗರ ಹುಬ್ಬಳ್ಳಿ ಆಯೋಜಿಸಿದ್ದ ಎರಡನೇಯ ದಿನದಪೌರತ್ವ ತರಬೇತಿ ಶಿಬಿಷರದಲ್ಲಿ ವಿಶೇಷ ಉಪನ್ಯಾಸಕರಾಗಿ ಡಾ ಉಮೇಶ ಆರ್ ಹಳ್ಳಿಕೇರಿ, ಎಂ.ಡಿ, ರೋಗ ಲಕ್ಷಣತಜ್ಞರು, ಕರ್ನಾಟಕ ಕಾನ್ಸರ್ ಚಿಕಿತ್ಸಕ ಕೇಂದ್ರ ನವನಗರ ಹುಬ್ಬಳ್ಳಿ ಹಾಗೂ ಕಾರ್ಯದರ್ಶಿಗಳು, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ಧಾರವಾಡ ಅವರು ಕ್ಯಾನ್ಸರ ರೋಗ ಕುರಿತು ಅರಿವು ಮೂಡಿಸುವುದರೊಂದಿಗೆ ಆರೋಗ್ಯ ಜೀವನಕ್ಕೆ ಬೇಕಾಗಿರುವ ಎಲ್ಲ ಅಂಶಗಳ ಸುವಿಸ್ತಾರವಾದ ಉಪನ್ಯಾಸವನ್ನು ನೀಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಉಪನ್ಯಾಸಕರಾದ ಡಾ.ಲಕ್ಷ್ಮೀಬಾಯಿ. ಬಿ.ಜಾಧವ ಅವರು ಒಳ್ಳೆಯ ಆರೋಗ್ಯವನ್ನು ಕಾಪಡಿಕೊಂಡು ಈ ಆರೋಗ್ಯದ ಅರಿವನ್ನು ಮುಂದಿನ ಪಿಳಿಗೆಗೆ ವರ್ಗಾಯಿಸಲು ಕರೆಕೊಟ್ಟರು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ ಲಿಂಗರಾಜ ಸಿ ಮುಳ್ಳಳ್ಳಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಾದ ಪ್ರಿಯಾಂಕ, ಭಾರತಿ, ಶ್ರೀದೇವಿ, ಭಿಮವ್ವ ಅವರ ಭಕ್ತಿಗೀತೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಯಾದ ದೀಪಾ ಅತ್ತಿಗೇರಿ ನೆರವೇರಿಸಿದರು. ವಂದಾಣಾರ್ಪನೆಯನ್ನು ಫಕ್ಕೀರಮ್ಮ ಮಾಡಿದರು. ಮದ್ಯಾಹ್ನದಲ್ಲಿ ಪ್ರಶಿಕ್ಷಣಾರ್ಥಿಗಳಿಂದ ನವನಗರದ ಬೀದಿಗಳಲ್ಲಿ ಮತದಾನದ ಜಾಥಾದಲ್ಲಿ ಮತದಾನದ ಮಹತ್ವದ ಕುರಿತು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.