ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರುಗಳು ಸಭೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಮಾ.೨೩; ಜಿಲ್ಲೆಯ ಲೋಕಸಭಾ ಸಹ ಸಂಚಾಲಕರು ಮತ್ತು ಮಾಜಿ ಜಿಲ್ಲಾಧ್ಯಕ್ಷರಾದ ಎಸ್ಎಂ ವೀರೇಶರವರ ಸಮ್ಮುಖದಲ್ಲಿ ದಾವಣಗೆರೆ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ  ದಾವಣಗೆರೆ ಹರಿಹರ ನಗರ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರುಗಳು ಸಭೆ ಸೇರಿ ಪಕ್ಷದ ತೀರ್ಮಾನದಂತೆ ಲೋಕಸಭಾ ಅಭ್ಯರ್ಥಿಯಾಗಿರುವ ಶ್ರೀಮತಿ ಗಾಯತ್ರಿ ಸಿದ್ದೇಶ್ವರವರನ್ನು ಗೆಲ್ಲಿಸಲು ಸಂಪೂರ್ಣ ಸಹಕಾರ ನೀಡಲು ತೀರ್ಮಾನಿಸಲಾಯಿತು.ಸಭೆಯಲ್ಲಿ ಮಾಜಿ ದೂಡ ಅಧ್ಯಕ್ಷರುಗಳಾದ ಯಶವಂತರಾವ್ ಜಾದವ್, ಏಕನಾಥ್ ರಾಯ್ಕರ್, ಬಿ ಮಲ್ಲಿಕಾರ್ಜುನಪ್ಪ, ರಾಜನಹಳ್ಳಿ ಶಿವಕುಮಾರ್, ದೇವರಮನೆ ಶಿವಕುಮಾರ್, ವಕೀಲರಾದ ಎ. ವೈ. ಪ್ರಕಾಶ್  ಉಪಸ್ಥಿತರಿದ್ದರು.