ಮೋಳಿಗೆ ಮಾರಯ್ಯನವರ ಆದರ್ಶ ಜೀವನ ಮಾನವ ಕುಲಕ್ಕೆ ದಾರಿ ದೀಪ:ರಾಜಶ್ರೀ ಜುಗತಿ
ವಿಜಯಪುರ,ಸೆ.18: ಬಸವಣ್ಣನವರ ಹಿರಿಮೆಯನ್ನು ಕೇಳಿ ರಾಜ್ಯ ತ್ಯಾಗ ಮಾಡಿ ಕಲ್ಯಾಣಕ್ಕೆ ಬಂದು ಮಾರಯ್ಯ ಹೆಸರಿನಿಂದ ಕಟ್ಟಿಗೆ ಮಾರುವ ಕಾಯಕವನ್ನು ಕೈಕೊಂಡು ಶರಣ ಜೀವನ ನಡೆಸುತ್ತಾ, ಅವರು ಕಾಯಕನಿಷ್ಠರಾಗಿದ್ದರು ಎಂದು ಚೇತನಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ಜುಗತಿ ಹೇಳಿದರು.
ಮಂಗಳವಾರ ನಗರದ ಚೇತನಾ ಶಿಕ್ಷಣ ಸಂಸ್ಥೆಯಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಯುವ ವೇದಿಕೆ ಹಾಗೂ ಚೇತನಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಹಯೋಗದಲ್ಲಿ ಜರುಗಿದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಶರಣರ ಜೀವನವೇ ಇಂದಿನ ಪೀಳಿಗೆಗೆ ಆದರ್ಶಪ್ರಾಯ ಎಂದು ಹೇಳಿದರು.
ಶರಣ ಮೋಳಿಗೆ ಮಾರಯ್ಯರ ಅನುಭಾವ ಕುರಿತು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಉಪನ್ಯಾಸ ನೀಡಿ, ದುಡಿತವೇ ದುಡ್ಡಿನ ತಾಯಿ ಎಂಬಂತೆ ದುಡಿಮೆಯಲ್ಲಿ ಅಪಾರ ಸಂಪತ್ತಿದೆ ಎಂಬುದನ್ನು ಕಲ್ಯಾಣದ ಪರಿಸರದಲ್ಲಿ ಕಂಡುಕೊಂಡ ಮಾರಯ್ಯನವರ ವಚನಗಳಲ್ಲಿ ವೈವಿಧ್ಯಮಯ ತಾತ್ವಿಕ, ಧಾರ್ಮಿಕ, ಸಾಮಾಜಿಕ, ಅನುಭಾವಿಕ ಚಿಂತನೆಗಳಿವೆ. ಅವು ಮಾರಯ್ಯನ ವಿದ್ವತ್ತು, ಆಧ್ಯಾತ್ಮಿಕ ನಿಲುವು, ಅನುಭಾವದ ಎತ್ತರ, ಸಾಮಾಜಿಕ ಕಳಕಳಿ, ಸಾಹಿತ್ಯಿಕ ಶ್ರೀಮಂತಿಕೆಯನ್ನು ಇಂದಿಗೂ ಎತ್ತಿ ತೋರುತ್ತವೆ ಎಂದು ಹೇಳಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಸಮಾಜ ವ್ಯವಸ್ಥೆಯಲ್ಲಿರುವ ಮೇಲು-ಕೀಳೆಂಬ ಭಾವದ ಸನ್ನಿವೇಶಕ್ಕೆ ಮಾರಯ್ಯನ ಕಾಯಕನಿμÉ್ಠ ಸಿದ್ದಾಂತ ಪರಿಹಾರವಾಗಿದೆ ಎಂದು ಹೇಳಿದರು.
ಚೇತನಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪೆÇ್ರ. ಎ.ಎಚ್. ಕೊಳಮಲಿ ಮಾತನಾಡಿ, ಶಿವಶರಣರಲ್ಲಿ ಅಗ್ರಮಾನ್ಯನಾಗಿದ್ದ ಮಾರಯ್ಯನವರ ಅರ್ಥಗರ್ಭಿತ ವಚನಗಳು ಇಂದು ಸಹ ನಮಗೆ ಸ್ಫೂರ್ತಿಯನ್ನು ನೀಡುತ್ತವೆ ಎಂದು ಹೇಳಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಯುವ ವೇದಿಕೆಯ ಅಧ್ಯಕ್ಷ ಅಮರೇಶ ಸಾಲಕ್ಕಿ ಆಶಯ ನುಡಿಗಳನ್ನಾಡುತ್ತ, ಮೋಳಿಗೆ ಮಾರಯ್ಯನವರ ಆದರ್ಶದ ಬೆಳಕು ಇಡೀ ಮಾನವ ಕುಲಕ್ಕೆ ದಾರಿ ದೀಪವಾಗಿದೆ ಎಂದು ಹೇಳಿದರು.
ಎಂ.ಜಿ. ಯಾದವಾಡ, ಎಲ್.ಪಿ. ಬಿರಾದಾರ, ಭೀಮರಾಯ ಅಮ್ಮಾಜಿಗೋಳ, ಗೌರಾಬಾಯಿ ಬಾಗೇವಾಡಿ ಸೇರಿದಂತೆ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಈರಣ್ಣ ತೊಂಡಿಕಟ್ಟಿ ಸ್ವಾಗತಿಸಿದರು. ಆಕಾಶ ರಾಮತೀರ್ಥ ನಿರೂಪಿಸಿದರು. ಸಹ ಕಾರ್ಯದರ್ಶಿ ಪರಶುರಾಮ ಪೆÇೀಳ ವಂದಿಸಿದರು.