ವಿಶ್ವಕರ್ಮ ಜಯಂತಿ ಆಚರಣೆ
ಬಸವನಬಾಗೇವಾಡಿ:ಸೆ.18:ಪಟ್ಟಣದಲ್ಲಿ ತಾಲೂಕು ವಿಶ್ವಕರ್ಮ ಸಮಾಜ ಬಾಂಧವರು ಮಂಗಳವಾರ ವಿಶ್ವಕರ್ಮ ಜಯಂತೋತ್ಸವವನ್ನು ಸಂಭ್ರಮ, ಸಡಗರದಿಂದ ಆಚರಿಸಿದರು.
ಪಟ್ಟಣದ ಕಾಳಿಕಾದೇವಿ ದೇವಸ್ಥಾನ ಆವರಣದಲ್ಲಿ ಜಮಾಯಿಸಿದ ತಾಲೂಕಿನ ವಿಶ್ವಕರ್ಮ ಬಾಂಧವರು ಬೆಳಗ್ಗೆ 8: 30 ಗಂಟೆಗೆ ಕಾಳಿಕಾದೇವಿಗೆ ಪೂಜೆ ನೆರವೇರಸಿ ವಿಶ್ವಕರ್ಮ ಧ್ವಜಾರೋಹಣ ಹಾಗೂ ಪೂಜೆ ಯೊಂದಿಗೆ ವಿಶ್ವಕರ್ಮ ಜಯಂತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ನಂತರ 10 ಗಂಟೆಗೆ ಸರ್ವ ಬಾಂಧವರು ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ತಾಲೂಕಾಡಳಿತ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಇದಾದ ಬಳಿಕ ಕಾಳಿಕಾ ದೇವಾಲಯದ ಆವರಣಕ್ಕೆ ಆಗಮಿಸಿ ಸಮಾಜ ಬಾಂಧವರು ಅಲಂಕೃತ ವಾಹನದಲ್ಲಿ ವಿಶ್ವಕರ್ಮ ದೇವನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಸಕಲ ಮಂಗಲ ವಾದ್ಯ ವೈಭವ ಹಾಗೂ ಸುಮಂಗಲೆಯರ ಆರತಿಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ಜರುಗಿತು.
ಶೋಭಾಯಾತ್ರೆಯಲ್ಲಿ ಸಮಾಜದ ಧರ್ಮಗುರು ಮಹೇಂದ ಮಹಸ್ವಾಮಿಗಳು (ಇಂಗಳೇಶ್ವರ)ಹಾಗೂ ಕಾಳಿಕಾದೇವಿ ದೇವಾಲಯದ ಅರ್ಚಕ ಸುಬ್ಬರಾಯ ಪತ್ತಾರ , ಸಮಾಜದ ತಾಲೂಕು ಅಧ್ಯಕ್ಷ ಕೆ. ಬಿ. ಕಡೆಮನಿ , ಹಿರಿಯರಾದ ವೀರಭದ್ರ ಪತ್ತಾರ, ,ಬಸವರಾಜ ಯಂಬತ್ನಾಳ , ಚೆನ್ನಪ್ಪ ಪತ್ತಾರ , ಎಂ.ಎಸ್. ಪತ್ತಾರ , ಜಗನ್ನಾಥ ಪತ್ತಾರ , ರಾಜೇಂದ್ರ ಪತ್ತಾರ, ಅಶೋಕ ಪತ್ತಾರ , ಡಾ.ಕರುಣಾಕರ ಚೌಧರಿ, ಕೃಷ್ಣಾ ಬಡಿಗೇರ , ಸುಭಾಸ ಬಡಿಗೇರ , ಬಸವರಾಜ ಬಡಿಗೇರ ಮಂಜುನಾಥ ಬಡಿಗೇರ , ಕೆ ಗಂಗಾಧರ , ದಾನೇಶ ಬಡಿಗೇರ , ಪ್ರಸಾದ ಬಡಿಗೇರ , ಪೂರ್ಣಿಮಾ ಚೌಧರಿ , ರೂಪಾ ಪತ್ತಾರ , ದ್ರಾಕ್ಷಾಯಿಣಿ ಪತ್ತಾರ, ಸೇರಿದಂತೆ ಅನೇಕರು ಭಾಗವಹಿಸಿದ್ದರು.