ಸತತ ಲಾಭದಲ್ಲಿ ಬಸವನಬಾಗೇವಾಡಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ
ಬಸವನಬಾಗೇವಾಡಿ:ಸೆ.18:ಬಸವನಬಾಗೇವಾಡಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ನಿಯಮಿತ 1987 ರಿಂದ ಇದುವರೆಗೂ ಎಲ್ಲರ ಸಹಕಾರ, ಮಾರ್ಗದರ್ಶನದಲ್ಲಿ ಸತತವಾಗಿ ಲಾಭದಲ್ಲಿ ಮುನ್ನಡೆಯುತ್ತಿದೆ ಎಂದು ಬಸವನಬಾಗೇವಾಡಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಜರುಗಿದ ಬಸವನಬಾಗೇವಾಡಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ನಿಯಮಿತದ 63 ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2023-24 ನೇ ಸಾಲಿನಲ್ಲಿ ಒಟ್ಟು ರೂ.2.26 ಲಕ್ಷ ವ್ಯವಹಾರ ಮಾಡುವ ಮೂಲಕ ರೂ.1.24 ಲಕ್ಷ ವ್ಯವಹಾರ ಲಾಭ ಅಗಿದೆ. ನಿಕ್ಕಿ ಲಾಭ ರೂ.5.58 ಆಗಿದೆ ಎಂದು ಹೇಳಲು ಸಂತಸವಾಗಿದೆ ಎಂದರು.
ಸಂಘದಿಂದ ಗೋಡಾವನ ಹತ್ತಿರ 18. ಮಳಿಗೆಗಳನ್ನು, 4 ಮನೆಗಳನ್ನು ಸ್ವಂತ ಬಂಡವಾಳದಿಂದ ನಿರ್ಮಿಸಿ ಬಾಡಿಗೆ ಕೊಡಲಾಗಿದೆ. 2023-24 ಸಾಲಿನಲ್ಲಿ ಸಂಘದ ಹೆಸರಿನಲ್ಲಿ ಪಟ್ಟಣದ ಹತ್ತಿರದ ಟಕ್ಕಳಕಿ ಗ್ರಾಮದ ಸಮೀಪ 5 ಎಕರೆ ಜಮೀನು ಖರೀದಿಸಲಾಗಿದೆ. ಸಂಘದ ಪ್ರಗತಿಗೆ ಎಲ್ಲ ಸದಸ್ಯ ಬಾಂಧವರ ಸಹಕಾರ ನೀಡುವ ಜೊತೆಗೆ ಸಲಹೆ-ಸೂಚನೆ ನೀಡಬೇಕು. ಸಂಘದ ಆಡಳಿತ ಮಂಡಳಿಯ ಸಹಕಾರದಿಂದ ವ್ಯವಹಾರ ಹೆಚ್ಚಿಸಲು ಪ್ರತಿ ವರ್ಷ ಸಂಘವು ಲಾಭದಲ್ಲಿ ಇರುವಂತೆ ಪ್ರಾಮಾಣಿಕವಾಗಿ ಕಾರ್ಯನಿರ್ವವಹಿಸುವದಾಗಿ ಹೇಳಿದರು.
ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಸಹಕಾರ ರಂಗದ ಪ್ರಗತಿಯಲ್ಲಿ ಎಲ್ಲರ ಪಾತ್ರ ಬಹುಮುಖ್ಯವಾಗಿದೆ ಎಂದರು.
ಸಭೆಯಲ್ಲ ಸಂಘದ ಉಪಾಧ್ಯಕ್ಷ ಶಿವಪ್ಪ ಬಂಚೋಡಿ, ನಿರ್ದೇಶಕರಾದ ಲೋಕನಾಥ ಅಗರವಾಲ, ಬಾಲಚಂದ್ರ ಮುಂಜಣ್ಣಿ, ಸಿದ್ದಪ್ಪ ಕೋರಿ, ಗುರುಪಾದಪ್ಪ ಬೀಳಗಿ, ಅಣ್ಣಪ್ಪ ಆಲೂರ, ಹಣಮಂತ ಯರಂತೇಲಿ, ರೇಣುಕಾ ಪಾಟೀಲ, ಸಂಘದ ಪ್ರಭಾರಿ ವ್ಯವಸ್ಥಾಪಕಿ ಕಸ್ತೂರಿ ಪಟ್ಟಣಶೆಟ್ಟಿ ಇತರರು ಇದ್ದರು. ಸಂಘದ ನಿರ್ದೇಶಕ ರವಿ ರಾಠೋಡ ಸ್ವಾಗತಿಸಿದರು. ಶಂಕರಗೌಡ ಬಿರಾದಾರ ನಿರೂಪಿಸಿದರು. ಸದಾನಂದ ಸಜ್ಜನ ವಂದಿಸಿದರು.