ತಾಲೂಕಾ ಮಟ್ಟದ ಪಿಯು ಕಾಲೇಜುಗಳ ಕ್ರೀಡಾಕೂಟ
ಕಲಬುರಗಿ :ಸೆ.18: ತಾಲೂಕಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಬುಧವಾರ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸುರೇಶ ಚಾಲನೆ ನೀಡಿದರು.
ಪ್ರಭಾರಿ ಡಿಡಿ ದೇವಣಗೌಡ ಪಾಟೀಲ, ಕ್ರೀಡಾ ಸಂಯೋಜಕ ಬಸವರಾಜ ಬಿರಾಜಾದಾರ, ನಿವೃತ್ತ ಪ್ರಾಚಾರ್ಯ ಅರುಣಕುಮಾರ ಪಾಟೀಲ ಸೇರಿದಂತೆ ವಿವಿಧ ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕರು ಭಾಗವಹಿಸಿದ್ದರು. ಉಪನ್ಯಾಸಕ ಹಾಗೂ ವೇದಿಕೆ ಸಮಿತಿಯ ಎಚ್.ಬಿ.ಪಾಟೀಲ ಮಾತನಾಡಿದರು.