ಬೈಲೂರಿನಲ್ಲಿ ವಿಶ್ವಕರ್ಮ ಜಯಂತಿ ಆಚರಣೆ
ಚನ್ನಮ್ಮನ ಕಿತ್ತೂರು,ಸೆ18: ಸಮೀಪದ ಬೈಲೂರ ಗ್ರಾಪಂದಲ್ಲಿ ದೇವಲೋಕ ಶಿಲ್ಪಿಯಾದ ವಿಶ್ವಕರ್ಮ ಜಯಂತಿಯ ನಿಮಿತ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಗೈದು ಅದ್ದೂರಿಯಿಂದ ಆಚರಿಸಲಾಯಿತು. ನಂತರ ಸಿಹಿ ಹಂಚಲಾಯಿತು.
ಈ ವೇಳೆ ಕಾರ್ಯದರ್ಶಿ ಬಸವರಾಜ ಅಂಬಡಗಟ್ಟಿ, ಸದಸ್ಯರುಗಳಾದ ಬಸವರಾಜ ನಾಯ್ಕರ, ಬೀಬಿಜಾನ ಗಡಾದ, ಜಿಕೆಎಂ ಶೈಲಾ ಜಗದೀಶ ಅಂಗಡಿ, ಶಂಕರ ಕಂಬಾರ, ಶಿವಾನಂದ ಹಿರೇಮಠ, ಅಣ್ಣಪ್ಪ ಕಾಪೋಲಿ, ಶಶಿಧರ್ ಗನಲಾಟಿ, ಸುನೀಲ್ ಇಟ್ನಾಳ, ಮಂಜುನಾಥ ಸನ್ನವಗೋಳ, ಅಧ್ಯಕ್ಷ-ಉಪಾಧ್ಯಕ್ಷ, ಪಿಡಿಓ, ಸರ್ವಸದಸ್ಯರು, ಸುಬಾಸ್ ಕರಡಿ, ಬೆಣ್ಣಿ ಸೇರಿದಂತೆ ಸಾರ್ವಜನಿಕರು ಇದ್ದರು.