ಸ್ಮರಣೆ ಕಾರ್ಯಕ್ರಮ
ಧಾರವಾಡ,ಸೆ.18: ಸರ್. ಎಂ.ವಿಶ್ವೇಶ್ವರಯ್ಯ ಹಾಗೂ ದಿ.ಎಸ್.ಜಿ. ಬಾಳೇಕುಂದ್ರಿ ಇಬ್ಬರೂ ಮಹಾನುಭಾವರುಆಧುನಿಕ ಸಮೃದ್ಧಕರ್ನಾಟಕಕಟ್ಟುವ ಕನಸು ಕಂಡವರುಎಂದು ಲೋಕೋಪಯೋಗಿಇಲಾಖೆಯ ವಿಶ್ರಾಂತ ಮುಖ್ಯಅಭಿಯಂತರರಾದಕೃಷ್ಣಾಜಿಚವ್ಹಾಣ ಹೇಳಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು, ಎಸ್.ಜಿ. ಬಾಳೇಕುಂದ್ರಿ ದತ್ತಿ ಅಂಗವಾಗಿ ಆಯೋಜಿಸಿದ್ದ ಕೀರ್ತಿಶೇಷ ಶ್ರೀ ಎಸ್.ಜಿ. ಬಾಳೇಕುಂದ್ರಿ ಮತ್ತು ಸರ್.ಎಂ.ವಿಶ್ವೇಶ್ವರಯ್ಯನವರ ಸ್ಮರಣೆ ಹಾಗೂ ಇಂಜನೀಐರರ ದಿನಾಚರಣೆಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ಸರ್.ಎಂ.ವಿಶ್ವೇಶ್ವರಯ್ಯ ಹಾಗೂ ದಿ.ಎಸ್.ಜಿ. ಬಾಳೇಕುಂದ್ರಿ ಇಬ್ಬರೂ ನೀರಾವರಿಕ್ಷೇತ್ರದ ದಿಗ್ಗಜರು.ಇವರೀರ್ವರು ನೀರಾವರಿಆಣೆಕಟ್ಟು ನಿರ್ಮಾಣ ಹಾಗೂ ವಿನ್ಯಾಸದ ಅವಿಷ್ಕಾರಅದ್ಭುತವಾದುದು. ದಿ. ಎಸ್. ಜಿ. ಬಾಳೇಕುಂದ್ರಿ ಅವರು ಕೃಷ್ಣೆ, ಮಲಪ್ರಭ ಹಾಗೂ ಘಟಪ್ರಭಾ ನೀರಾವರಿಯೋಜನೆ ನಿರ್ಮಾಣದ ಮುಖ್ಯ ರೂವಾರಿಗಳು.ಮಲಪ್ರಭಾಎಡದಂಡೆ ಕಾಲುವೆ ನಿರ್ಮಾಣ ಸವಾಲಿನ ಪ್ರಶ್ನೆಯಾಗಿದ್ದ ಸಂದರ್ಭದಲ್ಲಿ ದಿ.ಎಸ್.ಜಿ. ಬಾಳೇಕುಂದ್ರಿ ಸರಕಾರದತಾಂತ್ರಿಕ ಸಲಹಾ ಸಮಿತಿಅನುಮತಿ ಪಡೆದುಎಡದಂಡೆ ಕಾಲುವೆ ನಿರ್ಮಿಸಿ ರಾಮದುರ್ಗ ಹಾಗೂ ಬದಾಮಿ ತಾಲೂಕುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿದರು ಮತ್ತು ಬರಗಾಲದ ಬವಣೆಯಿಂದ ಆ ಪ್ರದೇಶವನ್ನು ಮುಕ್ತಗೊಳಿಸಿದರು.ಇವರ ಸಾಧನೆ ಈಗಿನ ಎಲ್ಲಾಅಭಿಯಂತರ ಸಾಧನೆಗೆ ಸ್ಫೂರ್ತಿಯಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಧಾರವಾಡದ ವಾಲ್ಮಿ ಸಂಸ್ಥೆಯಅಧೀಕ್ಷಕಅಭಿಯಂತರರಾದ ಬಸವರಾಜ ಬಂಡಿವಡ್ಡರ್ ಮಾತನಾಡಿ, ಸರ್.ಎಂ.ವಿಶ್ವೇಶ್ವರಯ್ಯ ಹಾಗೂ ಎಸ್.ಜಿ. ಬಾಳೇಕುಂದ್ರಿ ಇಬ್ಬರೂ ನಡೆದಾಡುವದೇವರಂತೆ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿಅವರ ಪಾತ್ರಅನನ್ಯ.ಸುಸ್ಥಿರ ಅಭಿವೃದ್ಧಿಗೆಎಲ್ಲರಿಗೂ ಮೂಲಭೂತ ಸೌಲಭ್ಯಗಳಾದ ಶುದ್ಧ ನೀರು, ಗಾಳಿ ಹಾಗೂ ಶುದ್ಧಮಣ್ಣುಅಗತ್ಯವಾಗಿದ್ದು, ಈ ಮೂರು ಸಂಗತಿ ನಿಸರ್ಗದತತ್ವದಅನುಗುಣವಾಗಿ ಬಳಕೆಯಾಗಬೇಕು.ನೀರನ್ನು ಹಿತಮಿತವಾಗಿ ವೈಜ್ಞಾನಿಕ ಬಳಕೆಯಾಗಬೇಕು.ಮಣ್ಣು ಸವಕಳಿ ಆಗದಂತೆ, ನಿಸ್ಸಾರವಾಗದಂತೆ ನೋಡಿಕೊಳ್ಳಬೇಕು.1 ಇಂಚು ಮಣ್ಣುರಚನೆಯಾಗಲು 700 ವರ್ಷ ಬೇಕು.ಮುಂದಿನ ಪೀಳಿಗೆಗೆ ಇವುಗಳನ್ನು ಸುಸ್ಥಿರ ಸ್ಥಿತಿಯಲ್ಲಿರಸಬೇಕೆಂದು ಹೇಳಿದರು.
ಸಂಘದ ಪರವಾಗಿ ಇಂಜನೀಯರುಗಳಾದ ಕೃಷ್ಣಾಜಿಚವ್ಹಾಣ, ಬಸವರಾಜ ಬಂಡಿವಡ್ಡರ ಹಾಗೂ ಕ.ವಿ.ವ. ಸಂಘದಇಂಜನೀಯರ ಶ್ರೀಶೈಲಗೌಡ ಕಮತರಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಡಾ. ಧನವಂತ ಹಾಜವಗೋಳ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣಒಡ್ಡೀನ ನಿರೂಪಿಸಿದರು.ಸತೀಶತುರಮರಿ ವಂದಿಸಿದರು.