ಎಲ್ಲಂದರಲ್ಲಿ ತ್ಯಾಜ್ಯ ಬಿಸಾಡಿದರೆ ಅಗತ್ಯ ಕ್ರಮ
ರಾಯಚೂರು.ಮಾ.೨೩- ಸ್ವಚ್ಚ-ಸುಂದರ ಹಾಗೂ ಪ್ಲಾಸ್ಟಿಕ್ ಮುಕ್ತ ನಗರಕ್ಕಾಗಿ ಬೀದಿ ಬದಿ ವ್ಯಾಪಾರ ಹಾಗೂ ವಾಣಿಜ್ಯ ವ್ಯಾಪಾರ, ಹೋಟೆಲ್‌ಗಳ ತ್ಯಾಜ್ಯ ವಿಲೆವಾರಿಗಾಗಿ ಪ್ರತಿದಿನ ಸಂಜೆ ೭ ಗಂಟೆಯಿಂದ ೨೫ ಆಟೋ ಟಿಪ್ಪರ ವಾಹನಗಳನ್ನು ಬಿಡಲಾಗಿದೆ. ಎಲ್ಲಾ ವ್ಯಾಪಾರಸ್ತರು ತ್ಯಾಜ್ಯಗಳನ್ನು ನಮ್ಮ ವಾಹನಗಳಿಗೆ ನೀಡಿ ಸ್ವಚ್ಚತಾ ಅಭಿಯಾನಕ್ಕೆ ಸಹಕರಿಸಬೇಕೆಂದು ನಗರಸಭೆ ಪೌರಾಯುಕ್ತರಾದ ಜಿ.ಎನ್ ಚಲಪತಿ ಅವರು ತಿಳಿಸಿದರು.
ರಾಯಚೂರು ನಗರವನ್ನು ಸ್ವಚ್ಚ ಮತ್ತು ಸುಂದರ ಹಾಗೂ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಜಿಲ್ಲಾಡಳಿತ ಹಾಗೂ ನಗರಸಭೆ ವತಿಯಿಂದ ವಾರಕ್ಕೆ ಒಂದು ವಾರ್ಡ್ ಸ್ವಚ್ಚತಾ ಅಭಿಯಾನ ಜೊತೆಗೆ ಪ್ರತಿದಿನ ಸಂಜೆ ೭ ಗಂಟೆಯಿಂದ ನಗರದ ತ್ಯಾಜ್ಯ ವಿಲೇವಾರಿಗಾಗಿ ೨೫ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದರು.
ಸಣ್ಣ ಪುಟ್ಟ ಬೀದಿ ಬದಿ ವ್ಯಾಪಾರಸ್ತರು ಜಾಗೂ ಹೋಟೆಲ್ ಉದ್ಯವ ಸೇರಿ ಎಲ್ಲಾ ವ್ಯಾಪಾರಸ್ತರ ಮಾರಾಟ ಮಳಿಗೆ ಹಾಗೂ ಬಂಡಿ ವ್ಯಾಪಾರಸ್ತ ಫುಟ್ ಪಾತ್ ಸ್ಥಳಗಳಿಗೆ ನಮ್ಮ ವಾಹನಗಳು ಬರಲಿವೆ ನಮ್ಮ ವಾಹನಗಳಿಗೆ ಪ್ರತಿದಿನದ ತ್ಯಾಜ್ಯವನ್ನು ನೀಡಬೇಕು ಜೊತೆಗೆ ಒಂದು ಅಂಗಡಿಯಿಂದ ಪ್ರತಿದಿನ ನಮ್ಮ ಪೌರಕಾರ್ಮಿಕರಿಗೆ ೨೦ ರೂ. ಸಹಾಯದನ ನೀಡಿ, ಪೌರಾಯುಕ್ತರ ಸ್ವಚ್ಚತಾ ಅಭಿಯಾನಕ್ಕೆ ಸಹಕರಿಸಬೇಕೆಂದು ತಿಳಿಸಿದರು.
ಕೆಲ ಬಂಡಿ ಹಾಗೂ ಹೋಟೆಲ್ ವ್ಯಾಪಾರಸ್ತರು ತ್ಯಾಜ್ಯವನ್ನು ಐತಿಹಾಸಿಕ ಕೋಟೆ ಪಕ್ಕದಲ್ಲಿ ಬಿಸಾಡುತ್ತಿದ್ದಾರೆ. ತ್ಯಾಜ್ಯ ಎಲ್ಲಂದರಲ್ಲಿ ಬಿಸಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿ ನಗರದ ಸ್ವಚ್ಚತೆಯ ಜೊತೆಗೆ ಐತಿಹಾಸಿಕ ಕೋಟೆಯನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಎಲ್ಲರೂ ಪ್ಲಾಸ್ಟಿಕ್ ಮುಕ್ತ ನಗರಕ್ಕಾಗಿ ಕೈ ಜೋಡಿಸಬೇಕು. ಎಲ್ಲಾ ಅಂಗಡಿಗಳಿಗೆ ಭೇಟಿ ನೀಡಲಾಗುವುದು ಪ್ಲಾಸ್ಟಿಕ್ ಬಳಸುವವರಿಗೆ ನೋಟಿಸ್ ನೀಡಿ ಒಂದುವಾರ ಗಡುವು ನೀಡಲಾಗುವುದು ಪ್ಲಾಸ್ಟಿಕ್ ಬಳಸುವುದು ನಿಲ್ಲಿಸದಿದ್ದರೆ ಕಾನೂನಾತ್ಮಕವಾಗಿ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.