ರಕ್ತದಾನ ಶಿಬಿರ
ಚನ್ನಮ್ಮನ ಕಿತ್ತೂರ,ಮಾ 23: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ ಹಾಗೂ ಪಪಂ ಮತ್ತು ಸಮುದಾಯ ಆರೋಗ್ಯ ಕೇಂದ್ರ ಕಿತ್ತೂರ ಇವರುಗಳ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ನಡೆಯಿತು. ಈ ಕಾರ್ಯಕ್ರಮದಲ್ಲಿ ಗ್ರಾಮೀಣ ಯುವಸೇನಾ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ತಮ್ಮ ಸ್ವ-ಇಚ್ಚೆಯಿಂದ ರಕ್ತದಾನ ಮಾಡಿದರು.
ಈ ಶಿಬಿರದಲ್ಲಿ ಪಪಂ ಮುಖ್ಯಾಧಿಕಾರಿ ಮಲ್ಲಯ್ಯಾ ಹಿರೇಮಠ, ಸಮುದಾಯ ಆರೋಗ್ಯ ಇಲಾಖೆ ವೈದ್ಯಾಧಿಕಾರಿ ಡಾ. ಇಮಾದ ರಾಜಗೊಳ್ಳಿ ಮತ್ತು ಬೆಳಗಾವಿ ಭೀಮ್ಸ್ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಶ್ರೀದೇವಿ ಭೋಪಾಟಿ, ಡಾ. ಸುಪ್ರಿಯಾ ಪರಗೊಂಡ, ಡಾ. ನಾಗರತ್ನಾ ಪೂಜಾರ, ಶಿವಪ್ಪ ಬೆನಚಮರಡಿ, ಪ್ರಭುಗೌಡ, ಮಹೇÀಶ್ವರ, ಎಸ್.ಎಸ್.ಸುರಗಿಮಠ, ರಮೇಜಾ ಕಿತ್ತೂರ, ಪಾರ್ವತಿ ಕೊಟಗಿ, ಶ್ವೇತಾ ಬೀರಣ್ಣವರ, ಮಾರುತಿ ಭಜಂತ್ರಿ, ಶಂಕರಗೌಡ ಕೋರವಾರ, ಪ್ರಭಾಕರ ಲಿಂಗದಾಳ, ಡವಳೆ ಸೇರಿದಂತೆ ಕಿತ್ತೂರ ಹಾಗೂ ಬೀಮ್ಸ್ ಆಸ್ಪತ್ರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.