ಪಥ ಸಂಚಲನ : ಸನ್ಮಾನ

ಸಂಜೆವಾಣಿ ವಾರ್ತೆ
ಹಿರಿಯೂರು: ಮಾ.೨೪- ಲೋಕಸಭಾ ಚುನಾವಣೆಯ ಅಂಗವಾಗಿ 53 ಜನ ಮಹಿಳೆಯರ ಪಾರಮಿಲಿಟರಿ ಗುಂಪು ಹಿರಿಯೂರು ನಗರದ ಪ್ರಧಾನ ಬೀದಿಗಳಲ್ಲಿ  ಪಥ ಸಂಚಲನ ನಡೆಸಿದ್ದು ಈ ಸಂದರ್ಭದಲ್ಲಿ ಆ ಗುಂಪಿನ ನಾಯಕಿಯಾದ ಶಬೀನ  ಇವರನ್ನು ಮೋಕ್ಷಗುಂಡಂ ವಿಶ್ವೇಶ್ವರಯ್ಯ ವಿದ್ಯಾ ಮಂದಿರ ದ ಸುಮಾರು ನೂರು ಮಕ್ಕಳು ಅವರು ಬೀಡು ಬಿಟ್ಟಿರುವ ಕಡೆಗೆ ಹೋಗಿ ಅವರನ್ನು ಸನ್ಮಾನಿಸಿ, ಜಯ ಘೋಷಗಳನ್ನು ಹಾಕಿದರು. ಈ ಸಂದರ್ಭದಲ್ಲಿ ಶಾಲೆಯ ನಿರ್ದೇಶಕರಾದ ಹೆಚ್ ಎಂ ಬಸವರಾಜ್  ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಗಳು  ಉಪಸ್ಥಿತರಿದ್ದರು. ಈ ಸನ್ಮಾನದಿಂದ ಆ ಗುಂಪಿನಲ್ಲಿ ಆಗಮಿಸಿದ್ದ ಎಲ್ಲರಿಗೂ ಅಪರಿಮಿತವಾದ ಆನಂದವಾಗಿದೆ ಎಂದು ಶ್ರೀಮತಿ ಶಬೀನಾ ಈ ಸಂದರ್ಭದಲ್ಲಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಅಲ್ಲದೆ ಈಗಿನ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ ಮಿಲಿಟರಿಗೆ ಸೇರಲು ಸಿದ್ಧರಾಗಬೇಕು ಎಂದು ಕರೆ ಕೊಟ್ಟರು.